ಸೈಲೆಂಟ್ ಆಗಿರೋ ಪ್ರೇಮ ಸಖತ್ ಸುದ್ದಿ ಕೊಡೋದು ಯಾವಾಗ..?

ಸೈಲೆಂಟ್ ಆಗಿರೋ ಪ್ರೇಮ ಸಖತ್ ಸುದ್ದಿ ಕೊಡೋದು ಯಾವಾಗ..?

ಕೊಡಗಿನ ಬೆಡಗಿ, ಸಖತ್ ಸುಂದರಿ ಅಂದ್ರೆ ಪ್ರೇಮ.. ಯಾವುದೇ ಪಾತ್ರವಾದರೂ ಅದಕ್ಕೆ ಜೀವ ತುಂಬೋ ಅದ್ಭುತ ನಟಿ ಅಂದ್ರೆ ಅದು ಪ್ರೇಮ. ಸಾಲು ಸಾಲು ಹಿಟ್ ಸಿನಿಮಾಗಳನ್ನ ಕೊಟ್ಟ ಪ್ರೇಮ ಈಗ ಸ್ವಲ್ಪ ವಿರಾಮದಲ್ಲಿ ಇದ್ದಾರೆ. ಆದ್ರೆ ಅವರ ಅಭಿಮಾನಿಗಳು ಮಾತ್ರ ಮೇಡಂ ಯಾವಾಗ ನೆಕ್ಸ್ಟ್ ಸಿನಿಮಾ ಅಂತ ಕೇಳುತ್ತಿದ್ದಾರೆ.

ಆದ್ರೆ ಇದ್ಯಾವುದಕ್ಕೂ ಹೆಚ್ಚು ತಲೆಕೆಡಿಸಿಕೊಳ್ಳದ ಪ್ರೇಮ ಅತೀ ಶೀಘ್ರದಲ್ಲಿ ಗುಡ್ ನ್ಯೂಸ್ ಕೊಡಲು ಸಜ್ಜಾಗಿದ್ದಾರೆ ಅನ್ನೋ ಮಾಹಿತಿ ಸಿಕ್ಕಿದೆ.

ಕನ್ನಡ ಮತ್ತು ತೆಲಗು ಚಿತ್ರರಂಗದಲ್ಲಿ ತಮ್ಮ ಅಭಿನಯದಿಂದ ಹೆಸರು ಮಾಡಿರುವ ಪ್ರಮುಖ ನಟಿ. ಎಲ್ಲಾ ಘಟಾನುಘಟಿ ನಾಯಕರೊಂದಿಗೆ ತೆರೆ ಹಂಚಿಕೊಂಡಿರೋ ಪ್ರೇಮ ಅವರಿಗೆ ಇವತ್ತಿಗೂ ಸಾಕಷ್ಟು ಆಫರ್ ಗಳು ಬರುತ್ತಿವೆ. ಆದ್ರೆ ಅವರೇ ನೋಡಿ ಮಾಡಿ ಸ್ಟೋರಿ ಆಯ್ಕೆ ಮಾಡಿಕೊಳ್ಳೋ ಚಿಂತನೆಯಲ್ಲಿ ಇದ್ದಾರೆ. ಅದರ ಜೊತೆಗೆ ಅವರ ಬ್ಯೂಟಿ ಮಾತ್ರ ಸ್ವಲ್ಪವೂ ಏರುಪೇರು ಆಗಿಲ್ಲ.