ಶೀಘ್ರವೇ ಕೊಡವ ಅಭಿವೃದ್ಧಿ ನಿಗಮ ಸ್ಥಾಪನೆಗೆ ಆದೇಶ : ಸಿಎಂ ಬೊಮ್ಮಾಯಿ ಘೋಷಣೆ

ಮಡಿಕೇರಿ :ಜಿಲ್ಲೆಯ ಜನರ ಬಹುದಿನಗಳ ಬೇಡಿಕೆಯಾದ ಕೊಡವ ಅಭಿವೃದ್ಧಿ ನಿಗಮವನ್ನು ಶೀಘ್ರದಲ್ಲೇ ಕಾರ್ಯರೂಪಕ್ಕೆ ತರಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.
ನಾಪೋಕ್ಲು ಚೆರಿಯಪರಂಬುವಿನ ಜನರಲ್ ತಿಮ್ಮಯ್ಯ ಕ್ರೀಡಾಂಗಣದಲ್ಲಿ ಅಪ್ಪಚೆಟ್ಟೋಳಂಡ ಕುಟುಂಬ ಆಯೋಜಿಸಿದ್ದ ಕೊಡವ ಕುಟುಂಬ ಹಾಕಿ ಪಂದ್ಯಾವಳಿಯನ್ನು ಉದ್ಘಾಟಿಸಿ ಮಾತನಾಡಿದ ಅವರು, ಕೊಡವ ಅಭಿವೃದ್ಧಿ ನಿಗಮ ಸ್ಥಾಪನೆಗೆ ಶೀಘ್ರವೇ ಆದೇಶ ಹೊರಡಿಸುತ್ತೇನೆ.
ಕುಟುಂಬ ಆಧಾರಿತ ಪಂದ್ಯಾವಳಿಯ ಪರಿಕಲ್ಪನೆ ಅದ್ಭುತವಾಗಿದೆ ಮತ್ತು ಕೊಡವ ಕುಟುಂಬಗಳನ್ನು ಒಂದೇ ಸೂರಿನಡಿ ತರುತ್ತದೆ. ಕೊಡವ ಕುಟುಂಬಗಳು ಸುಸಂಘಟಿತ ಕುಟುಂಬಗಳಾಗಿವೆ. ಸಂಬಂಧಗಳು ದೂರವಾಗುತ್ತಿರುವ ಸಮಯದಲ್ಲಿ, ಪಂದ್ಯಾವಳಿಯು ಕುಟುಂಬಗಳನ್ನು ಒಟ್ಟುಗೂಡಿಸಲು ಸಹಾಯ ಮಾಡಿದೆ. ಕುಟುಂಬಗಳು ಒಂದಾಗಬೇಕು ಮತ್ತು ಸಂಬಂಧಗಳು ಜನರನ್ನು ಒಟ್ಟುಗೂಡಿಸಬೇಕು' ಎಂದು ಅವರು ಹೇಳಿದರು.