ವಿಸ್ತಾರಾ ವಿಮಾನದಲ್ಲಿ ಸಿಬ್ಬಂದಿ ಮೇಲೆ ಹಲ್ಲೆ ನಡೆಸಿದ ಇಟಾಲಿಯನ್ ಮಹಿಳೆ ಬಂಧನ

ನವದೆಹಲಿ: ಅಬುಧಾಬಿಯಿಂದ ಮುಂಬೈಗೆ ತೆರಳುತ್ತಿದ್ದ ಯುಕೆ 256, ಏರ್ ವಿಸ್ತಾರಾ ವಿಮಾನದಲ್ಲಿ ಇಟಾಲಿಯನ್ ಮಹಿಳಾ ಪ್ರಯಾಣಿಕರೊಬ್ಬರನ್ನು ಮುಂಬೈನ ಸಹರ್ ಪೊಲೀಸರು ಮಂಗಳವಾರ ಬಂಧಿಸಿದ್ದಾರೆ.
ಎಕಾನಮಿ ಟಿಕೆಟ್ ಹೊಂದಿದ್ದರೂ ಬಿಸಿನೆಸ್ ಕ್ಲಾಸ್ನಲ್ಲಿ ಕುಳಿತುಕೊಳ್ಳುವಂತೆ ವಿಮಾನದ ಸಿಬ್ಬಂದಿಯನ್ನು ಒತ್ತಾಯಿಸಿದರು ಎನ್ನಲಾಗಿದೆ.
ಜನವರಿ 30 ರ ಸೋಮವಾರ ಮುಂಜಾನೆ ಮುಂಬೈಗೆ ಬಂದಿಳಿದ ಏರ್ ವಿಸ್ತಾರಾ ವಿಮಾನ ಯುಕೆ 256 ರ ಕ್ಯಾಬಿನ್ ಸಿಬ್ಬಂದಿಯಿಂದ ಮುಂಬೈ ಪೊಲೀಸರಿಗೆ ದೂರು ಬಂದಿದೆ. ಸೋಮವಾರ ಮುಂಜಾನೆ 2.03 ಕ್ಕೆ ಅಬುಧಾಬಿಯಿಂದ ವಿಮಾನ ಹೊರಟಿತು.