ವಿಶ್ವದ ಮೊದಲ ಕೊರೊನಾ 'ನಾಸಲ್ ಲಸಿಕೆ' ನಾಳೆ ಬಿಡುಗಡೆ ; ಕೇಂದ್ರ ಆರೋಗ್ಯ ಸಚಿವ ಘೋಷಣೆ
ನವದೆಹಲಿ : ಕೇಂದ್ರ ಆರೋಗ್ಯ ಸಚಿವ ಡಾ.ಮನ್ಸುಖ್ ಮಾಂಡವೀಯ ಅವರು ವಿಶ್ವದ ಮೊದಲ ಮೇಡ್ ಇನ್ ಇಂಡಿಯಾ ಮೂಗಿನ ಲಸಿಕೆ 'iNCOVACC'ನ್ನ ಗುರುವಾರ ಬಿಡುಗಡೆ ಮಾಡಲಿದ್ದಾರೆ ಎಂದು ಅಧಿಕೃತ ಮೂಲಗಳು ತಿಳಿಸಿವೆ.
ಮೂಲಗಳ ಪ್ರಕಾರ, ಹೈದರಾಬಾದ್ ಮೂಲದ ಭಾರತ್ ಬಯೋಟೆಕ್ನ ಇಂಟ್ರಾನಾಸಲ್ ಹೆಟೆರೊಲೊಗಸ್ ಬೂಸ್ಟರ್ ಡೋಸ್ ಫೆಬ್ರವರಿ ಮೊದಲ ವಾರದ ವೇಳೆಗೆ ಮಾರುಕಟ್ಟೆಯಲ್ಲಿ ಲಭ್ಯವಾಗುವ ಸಾಧ್ಯತೆಯಿದೆ.
ಇತ್ತೀಚೆಗೆ, ಭಾರತ್ ಬಯೋಟೆಕ್ ದೇಶದಲ್ಲಿ ಐಎನ್ ಸಿಒವಿಎಸಿ (BBV154)ನ್ನ ಬೂಸ್ಟರ್ ಡೋಸ್ ಎಂದು ಘೋಷಿಸಿತು.
ಅಂದ್ಹಾಗೆ, ಈ ಲಸಿಕೆ ಇದೇ ತಿಂಗಳ ಆರಂಭದಲ್ಲಿ, ಭಾರತ್ ಬಯೋಟೆಕ್ iNCOVACCಯ ಹೆಟೆರೊಲೊಗಸ್ ಬೂಸ್ಟರ್ ಡೋಸ್'ಗಳನ್ನ ಬಳಸಲು ಸೆಂಟ್ರಲ್ ಡ್ರಗ್ಸ್ ಸ್ಟ್ಯಾಂಡರ್ಡ್ ಕಂಟ್ರೋಲ್ ಆರ್ಗನೈಸೇಶನ್ (CDSCO) ನಿಂದ ಅನುಮೋದನೆ ಪಡೆಯಿತು.