ಸಿಸಿಬಿ ವಿಚಾರಣೆ ಬಳಿಕ 'ಸ್ಯಾಂಟ್ರೋ ರವಿ' ಪತ್ನಿ ಹೇಳಿದ್ದೇನು

ಸಿಸಿಬಿ ವಿಚಾರಣೆ ಬಳಿಕ 'ಸ್ಯಾಂಟ್ರೋ ರವಿ' ಪತ್ನಿ ಹೇಳಿದ್ದೇನು

ಬೆಂಗಳೂರು : ಸ್ಯಾಂಟ್ರೋ ರವಿ ಸದ್ಯ ನ್ಯಾಯಾಂಗ ಬಂಧನದಲ್ಲಿದ್ದು, ಇದೀಗ ಸಿಸಿಬಿ ಪೊಲೀಸರು ಸ್ಯಾಂಟ್ರೋ ರವಿ ಪತ್ನಿಯನ್ನು ವಿಚಾರಣೆಗೊಳಪಡಿಸಿದ್ದಾರೆ. ಇದೀಗ ಸಿಸಿಬಿ ಪೊಲೀಸರಿಂದ ಸ್ಯಾಂಟ್ರೋ ರವಿ ಪತ್ನಿ ವಿಚಾರಣೆ ಅಂತ್ಯವಾಗಿದೆ.

ಸ್ಯಾಂಟ್ರೋ ರವಿ ಪತ್ನಿ ವಿರುದ್ಧ ಸುಳ್ಳು ಪ್ರಕರಣ ಸಂಬಂಧ ಸಿಸಿಬಿ ಎಸಿಪಿ ಧರ್ಮೇಂದ್ರ ನೇತೃತ್ವದಲ್ಲಿ ಇಂದು ವಿಚಾರಣೆ ನಡೆದಿದೆ. ವಿಚಾರಣೆ ನಂತರ ಸ್ಯಾಂಟ್ರೋ ರವಿ ಪತ್ನಿ ಸುದ್ದಿಗಾರರಿಗೆ ಪ್ರತಿಕ್ರಿಯೆ ನೀಡಿದರು. ಮೊದಲು ಪೊಲೀಸರ ಮೇಲೆ ನನಗೆ ನಂಬಿಕೆ ಇರಲಿಲ್ಲ, ಹಾಗಾಗಿ ಮೈಸೂರಿನಲ್ಲಿ ಮೊದಲು ದಾಖಲೆ ನೀಡಿರಲಿಲ್ಲ, ಇದೀಗ ಸಿಐಡಿಗೆ ಕೇಸ್ ವರ್ಗಾವಣೆಯಾಗಿದೆ, ಈಗ ಎಲ್ಲಾ ದಾಖಲೆಗಳನ್ನು ನೀಡಿದ್ದೇನೆ ಎಂದರು.

ಇದೀಗ ಸಿಐಡಿಗೆ ಕೇಸ್ ವರ್ಗಾವಣೆಯಾಗಿದೆ, ಹಾಗಾಗಿ ಸ್ಯಾಂಟ್ರೋ ರವಿಯ ಒಂದೊಂದೇ ವಿಚಾರ ಹೊರಬರುತ್ತಿದೆ ಎಂದು ಸ್ಯಾಂಟ್ರೋ ರವಿ ಪತ್ನಿ ಹೇಳಿದ್ದಾರೆ. ಕಾಟನ್ ಪೇಟೆ ಕೇಸ್ ಸಂಬಂಧ ಎಲ್ಲಾ ದಾಖಲೆ ನೀಡಿದ್ದೇನೆ, ಮತ್ತೆ ವಿಚಾರಣೆಗೆ ಬನ್ನಿ ಎಂದು ಪೊಲೀಸರು ಹೇಳಿಲ್ಲ. ರವಿಯ ವಿಗ್ ವಿಚಾರ ನನಗೆ ಏನೂ ಗೊತ್ತಿರಲಿಲ್ಲ, ಇಷ್ಟು ವರ್ಷ ಸಂಸಾರ ನಡೆಸಿದರೂ ಆತನ ಹಲವು ವಿಚಾರಗಳ ಬಗ್ಗೆ ನನಗೆ ಏನೂ ಗೊತ್ತಿರಲಿಲ್ಲ ಎಂದರು