ವಿಧಾನಸಭೆಯಲ್ಲಿ ಖಾಲಿ ಹೊಡೆಯುತ್ತಿದ್ದ ಶಾಸಕರ ಕುರ್ಚಿಗಳು

ಬೆಳಗಾವಿ,ಡಿ.24-ಚಳಿಗಾಲದ ಅಧಿವೇಶನದ ಕೊನೆಯ ದಿನವಾದ ಇಂದು ವಿಧಾನಸಭೆಯಲ್ಲಿ ಶಾಸಕರ ಹಾಜರಾತಿಯ ಕೊರತೆ ಎದ್ದು ಕಾಣುತ್ತಿತ್ತು.
ಆಡಳಿತ ಹಾಗೂ ಪ್ರತಿಪಕ್ಷಗಳ ಸಾಲಿನಲ್ಲೂ ಖಾಲಿ ಆಸನಗಳು ಎದ್ದು ಕಾಣುತ್ತಿದ್ದವು.
ಪ್ರಶ್ನೋತ್ತರ ವೇಳೆಯಲ್ಲಿ ಸಭಾಧ್ಯಕ್ಷ ಕಾಗೇರಿ ಅವರು, ಪ್ರಶ್ನೆ ಕೇಳಬೇಕಾದ ಶಾಸಕರ ಹೆಸರನ್ನು ಉಲ್ಲೇಖಿಸಿದಾಗ ಕೆಲವರು ಹಾಜರಿರದಿದ್ದು ಕಂಡುಬಂದಿತು.
ಬಹಳಷ್ಟು ಶಾಸಕರು ನಿನ್ನೆಯೇ ತಮ್ಮ ಕ್ಷೇತ್ರ ಹಾಗೂ ಬೆಂಗಳೂರಿಗೆ ಹೋಗಿದ್ದಾರೆ. ಇಂದು ಮಧ್ಯಾಹ್ನ ಕೂಡ ಬಹಳಷ್ಟು ಶಾಸಕರು ಹೊರಡುವ ತರಾತುರಿಯಲ್ಲಿದ್ದರು. ಹೀಗಾಗಿ ಅಧಿವೇಶನಕ್ಕೆ ಶಾಸಕರ ಕೊರತೆ ಎದ್ದು ಕಂಡುಬಂದಿತ್ತು. ಒಟ್ಟು ಸದಸ್ಯರು ಶೇ. 50ರಷ್ಟು ಮಾತ್ರ ಸದನಕ್ಕೆ ಹಾಜರಾಗಿದ್ದರು.