ವಿಧಾನಸಭಾ ಚುನಾವಣೆ'ಗೆ ಕೆಪಿಸಿಸಿಯಿಂದ 'ವಾರ್ ರೂಂ' ಸಿದ್ಧ: ಮನ್ಸೂರ್ ಖಾನ್, ರಮೇಶ್ ಬಾಬು, ದಿನೇಶ್ ಗೂಳಿಗೌಡಗೆ ಹೊಣೆ

ವಿಧಾನಸಭಾ ಚುನಾವಣೆ'ಗೆ ಕೆಪಿಸಿಸಿಯಿಂದ 'ವಾರ್ ರೂಂ' ಸಿದ್ಧ: ಮನ್ಸೂರ್ ಖಾನ್, ರಮೇಶ್ ಬಾಬು, ದಿನೇಶ್ ಗೂಳಿಗೌಡಗೆ ಹೊಣೆ

ಬೆಂಗಳೂರು: ಕರ್ನಾಟಕ ವಿಧಾನಸಭೆಗೆ ಚುನಾವಣೆ ಘೋಷಣೆಯಾಗಿದೆ. ಮೇ.10ರಂದು ಮತದಾನ, ಮೇ.13ರಂದು ಮತಏಣಿಕೆ ನಡೆದು ಫಲಿತಾಂಶ ಘೋಷಣೆಯಾಗಲಿದೆ. ಈ ಹಿನ್ನಲೆಯಲ್ಲಿ ಕರ್ನಾಟಕ ಪ್ರದೇಶ ಕಾಂಗ್ರೆಸ್ ಕಮಿಟಿಯಿಂದ ವಾರ್ ರೂಂ ಸಿದ್ಧಮಾಡಲಾಗಿದೆ. ಇದಕ್ಕೆ ಮನ್ಸೂರ್ ಖಾನ್, ರಮೇಶ್ ಬಾಬು ಹಾಗೂ ದಿನೇಶ್ ಗೂಳಿಗೌಡಗೆ ಹೊಣೆಗಾರಿಕೆ ವಹಿಸಲಾಗಿದೆ.

ಈ ಸಂಬಂಧ ಪತ್ರಿಕಾ ಪ್ರಕಟಣೆಯಲ್ಲಿ ಇಂದು ಮಾಹಿತಿ ಹಂಚಿಕೊಂಡಿರುವಂತ ಕೆಪಿಸಿಸಿ ಮಾಧ್ಯಮ ವಿಭಾಗದ ಅಧ್ಯಕ್ಷ ಪ್ರಿಯಾಂಕ್ ಖರ್ಗೆ ಅವರು, ಕೆಪಿಸಿಸಿ ಮಾಧ್ಯಮ ವಿಭಾಗದಿಂದ ವಾರ್ ರೂಂ ಸಿದ್ಧಗೊಳಿಸಲಾಗಿದೆ. ವಾರ್ ರೂಂ ಇಂಚಾರ್ಜರ್ ಆಗಿ ಮನ್ಸೂರ್ ಖಾನ್, ರಮೇಶ್ ಬಾಬು ಹಾಗೂ ದಿನೇಶ್ ಗೂಡಿಗೌಡ ಅವರನ್ನು ನೇಮಿಸಿರೋದಾಗಿ ತಿಳಿಸಿದ್ದಾರೆ.

ಇನ್ನೂ ಕೋರ್ ಕಮಿಟಿಗೆ ರಾಮಚಂದ್ರಪ್ಪ, ಅನಿಲ್ ಕುಮಾರ್ ಬಿ.ಆರ್, ಐಶ್ವರ್ಯ ಮಹದೇವ್, ವಿಜಯ್ ಮತಿಕಟ್ಟಿ, ರವಿ ಗೌಡ, ಜಿ ರಾಜು ಹಾಗೂ ರಾಘು ದೊಡ್ಡೇರಿ ನೇಮಿಸಿದೆ.

ರಾಷ್ಟ್ರೀಯ ಮಾಧ್ಯಮ ಕೋ ಆರ್ಡಿನೇಟರ್ ಆಗಿ ಮನ್ಸೂರ್ ಖಾನ್ ಗೆ ಇಂಚಾರ್ಜ್ ನೀಡಿದ್ದರೇ, ಅವರ ಅಡಿಯಲ್ಲಿ ಐಶ್ವರ್ಯ ಮಹದೇವ್, ಅನಿಲ್ ಕುಮಾರ್ ಬಿಆರ್ ಗೆ ಕೆಲಸ ಮಾಡಲು ಹೊಣೆಗಾರಿಕೆ ನೀಡಿದ್ದಾರೆ.

ಇನ್ನೂ ರಾಜ್ಯ ಮಾಧ್ಯಮ ಕೋ ಆರ್ಡಿನೇಟರ್ ಆಗಿ ರಮೇಶ್ ಬಾಬುಗೆ ಹೊಣೆ ವಹಿಸಲಾಗಿದೆ. ಅವರಡಿ ದಿನೇಶ್ ಗೂಡಿಗೌಡ, ರವಿಗೌಡಗೆ ಕರ್ತವ್ಯ ಹೊಣೆಗಾರಿಗೆ ಹಂಚಲಾಗಿದೆ.

ಇದಲ್ಲದೇ ಕಾನೂನು ಮತ್ತು ಸಂಶೋಧನಾ ಸಹಾಯಕ ತಂಡವಾಗಿ ದಿವಾಕರ್, ಸೂರ್ಯ ಮುಕುಂದರಾಜ್, ಶತಬಿಶ್ ಶಿವಣ್ಣ, ಸಂಮೃದ್ಧ ಹೆಗ್ಡೆ, ಅಹ್ಮದ್, ಧೃವ ಜತ್ತಿ ಹಾಗೂ ಮುಜುತಬ್ ಖಾನ್ ಅವರನ್ನು ನಿಯೋಜಿಸಲಾಗಿದೆ.

Fact Check: ಬಿಜೆಪಿಯಿಂದ 100 ಅಭ್ಯರ್ಥಿಗಳ ಪಟ್ಟಿ ಬಿಡುಗಡೆ.?: ಇದು 'ವೈರಲ್ ಲೀಸ್ಟ್' ಹಿಂದಿನ ಅಸಲಿ ಸತ್ಯ.!

ಬೆಂಗಳೂರು: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ( Chief Minister Basavaraj Bommai ) ಅವರು ಇಂದು ವಾಸ್ತವಾಂಶ ಆಧರಿಸಿ ಅಭ್ಯರ್ಥಿ ಆಯ್ಕೆಯಾಗಿದೆ. ಇಂದು ರಾಜ್ಯ ಸಮಿತಿಯ ಸಭೆ ಕರೆದಿದ್ದು, ಎರಡು ದಿನಗಳ ಕಾಲ ನಡೆಯಲಿದೆ. ಸಭೆ ಬಳಿಕ ಕೇಂದ್ರಕ್ಕೆ ಅಭ್ಯರ್ಥಿಗಳ ಪಟ್ಟಿ ಕಳುಹಿಸಲಾಗುವುದು. 8ನೇ ತಾರೀಖು ಕೇಂದ್ರದಲ್ಲಿ ಚರ್ಚೆಯಾಗಿ ಪಟ್ಟಿ ಬಿಡುಗಡೆಯಾಗಲಿದೆ ಎಂಬುದಾಗಿ ಹೇಳಿದ್ದರು. ಈ ನಡುವೆಯೂ ಸೋಷಿಯಲ್ ಮೀಡಿಯಾದಲ್ಲಿ ( Social Media ) ಬಿಜೆಪಿಯ 100 ಅಭ್ಯರ್ಥಿಗಳ ಪಟ್ಟಿ ವೈರಲ್ ಆಗಿತ್ತು. ಅದರ ಅಸಲಿ ಸತ್ಯವೇನು ಎನ್ನುವ ಬಗ್ಗೆ ಮುಂದೆ ಓದಿ.

ವಾಟ್ಸ್ ಆಪ್ ನಲ್ಲಿ ಕರ್ನಾಟಕ ವಿಧಾನಸಬಾ ಚುನಾವಣೆಗಾಗಿ ( Karnataka Assembly Election 2023 ) 100 ಅಭ್ಯರ್ಥಿಗಳ ಬಿಜೆಪಿಯ ಮೊದಲ ಪಟ್ಟಿ ( BJP Candidate List ) ಬಿಡುಗಡೆಯಾಗಿದೆ. ಇದನ್ನು ಬಿಜೆಪಿಯ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಅರುಣ್ ಸಿಂಗ್ ಬಿಡುಗಡೆ ಮಾಡಿದಂತೆ ಸಹಿ ಕೂಡ ಮಾಡಲಾಗಿದ್ದಂತ ಪಟ್ಟಿ ವೈರಲ್ ಆಗಿತ್ತು. ಇದನ್ನು ಅನೇಕರು ನಿಜವಾದ ಲೀಸ್ಟ್ ಎಂಬುದಾಗಿಯೇ ನಂಬಿದ್ದರು.

ವೈರಲ್ ಆಗಿದ್ದಂತ ಬಿಜೆಪಿಯ 100 ಅಭ್ಯರ್ಥಿಗಳ ಪಟ್ಟಿಯಲ್ಲಿ ಶಿಕಾರಿಪುರ ಕ್ಷೇತ್ರದಿಂದ ಬಿ.ವೈ ವಿಜಯೇಂದ್ರ, ಮಂಡ್ಯದಿಂದ ಸುಮಲತಾ ಅಂಬರೀಶ್, ಸೊರಬ ಕ್ಷೇತ್ರದಿಂದ ಪಿ.ರಾಜೀವ್ ಗೆ ಟಿಕೆಟ್ ನೀಡಲಾಗಿದೆ ಎಂಬುದಾಗಿ ತೋರಿಸಲಾಗಿತ್ತು. ಇದು ಅಸಲಿಯೋ, ನಕಲಿಯೋ ಎನ್ನುವ ಬಗ್ಗೆ ಅನೇಕರನ್ನು ಗೊಂದಲಕ್ಕೆ ದೂಡಿತ್ತು. ಆದ್ರೇ ಇದಕ್ಕೆ ತೆರೆ ಎಳೆಯುವಂತೆ ಅರುಣ್ ಸಿಂಗ್ ಅವರೇ ಪತ್ರಿಕಾ ಹೇಳಿಕೆಯನ್ನು ಬಿಡುಗಡೆ ಮಾಡಿದ್ದಾರೆ. ಏನು ಹೇಳಿದ್ದಾರೆ ಎನ್ನುವ ಬಗ್ಗೆ ಮುಂದಿದೆ ಓದಿ.

ಬಿಜೆಪಿ ಅಭ್ಯರ್ಥಿಗಳ ಪಟ್ಟಿ ವಿಚಾರದಲ್ಲಿ ಸುಳ್ಳು ಸುದ್ದಿ- ಅರುಣ್ ಸಿಂಗ್ ಸ್ಪಷ್ಟನೆ

ಕರ್ನಾಟಕ ರಾಜ್ಯ ವಿಧಾನಸಭೆ ಚುನಾವಣೆಗೆ ಸ್ಪರ್ಧಿಸುವವರ ಪಟ್ಟಿಯನ್ನು ಇನ್ನೂ ಬಿಡುಗಡೆ ಮಾಡಿಲ್ಲ. ಈಗ ಸಾಮಾಜಿಕ ಜಾಲತಾಣದಲ್ಲಿ ಈ ಕುರಿತು ಸುಳ್ಳು ಸುದ್ದಿ ಪ್ರಕಟಿಸಲಾಗಿದೆ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಮತ್ತು ಕರ್ನಾಟಕದ ಉಸ್ತುವಾರಿ ಅರುಣ್ ಸಿಂಗ್ ಅವರು ಸ್ಪಷ್ಟಪಡಿಸಿದ್ದಾರೆ.

ಸಾಮಾಜಿಕ ಜಾಲತಾಣಗಳಲ್ಲಿ ಮತ್ತು ವಾಟ್ಸಪ್‍ಗಳಲ್ಲಿ ತಪ್ಪು ಮಾಹಿತಿ ಹರಿದಾಡುತ್ತಿದೆ. ಸುಳ್ಳು ಸುದ್ದಿ ಪ್ರಕಟಿಸಿದವರ ವಿರುದ್ಧ ಕ್ರಮ ಕೈಗೊಳ್ಳಲಾಗುತ್ತದೆ ಎಂದು ತಿಳಿಸಿದ್ದಾರೆ.

ಸೋ ಸೋಷಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿರುವಂತ 100 ಅಭ್ಯರ್ಥಿಗಳ ಬಿಜೆಪಿ ಮೊದಲ ಪಟ್ಟಿ ಫೇಕ್ ( Fake ). ಅದು ನಕಲಿಯಾಗಿದ್ದು. ನಿಜವಾದ ಲೀಸ್ಟ್ ಅಧಿಕೃತವಾಗಿ ಬಿಜೆಪಿಯಿಂದ ಏಪ್ರಿಲ್ 8ರಂದು ಇಲ್ಲವೇ ಆನಂತ್ರ ಬಿಡುಗಡೆಯಾಗುವ ಸಾಧ್ಯತೆ ಇದೆ. ಅಲ್ಲಿಯವರೆಗೆ ಕಾದು ನೋಡಿ.

ವರದಿ: ವಸಂತ ಬಿ ಈಶ್ವರಗೆರೆ