ಬಿಬಿಸಿ ಕಚೇರಿ' ಮೇಲಿನ ಐಟಿ ಸರ್ವೆಗೆ 'ಬೆಂಗಳೂರು ಪ್ರೆಸ್ ಕ್ಲಬ್' ಖಂಡನೆ

ಬಿಬಿಸಿ ಕಚೇರಿ' ಮೇಲಿನ ಐಟಿ ಸರ್ವೆಗೆ 'ಬೆಂಗಳೂರು ಪ್ರೆಸ್ ಕ್ಲಬ್' ಖಂಡನೆ

ಬೆಂಗಳೂರು: ದೆಹಲಿಯಲ್ಲಿರುವಂತ ಬಿಬಿಸಿ ಕಚೇರಿ ಮೇಲಿನ ಐಟಿ ಸರ್ವೆ ಕೈಗೊಳ್ಳಲಾಗಿತ್ತು. ಇದನ್ನು ಬೆಂಗಳೂರು ಪ್ರೆಸ್ ಕ್ಲಬ್ ಖಂಡಿಸಿದೆ.

ಈ ಕುರಿತಂತೆ ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿದ್ದು, ವಿಶ್ವದ ಅತಿ ದೊಡ್ಡ ಪ್ರಜಾಪ್ರಭುತ್ವ ಭಾರತ ದೇಶವಾಗಿದ್ದು, ಇಲ್ಲಿ ಪ್ರತಿಯೊಬ್ಬರಿಗೂ ಅವರ ಅಭಿಪ್ರಾಯಗಳನ್ನು ವ್ಯಕ್ತಪಡಿಸುವ ಸ್ವಾತಂತ್ರ್ಯವಿದೆ.

ಅದರಲ್ಲೂ ವಿಶೇಷವಾಗಿ ಮಾಧ್ಯಮಗಳು ಸ್ವತಂತ್ರವಾಗಿ ಅಭಿಪ್ರಾಯಗಳನ್ನು ವ್ಯಕ್ತಪಡಿಸುತ್ತ ಸಮಾಜವನ್ನು ಸರಿದಾರಿಯಲ್ಲಿ ನಡೆಯಲು ಸಹಾಯಕಾರಿಯಾಗಿದೆ.

ಅಂತಹದರಲ್ಲಿ ಇದೀಗ ಪ್ರತಿಷ್ಠಿತ ಬಿಬಿಸಿ ಮಾಧ್ಯಮ ದೆಹಲಿ ಕಚೇರಿ ಮೇಲೆ ಐ.ಟಿ. ಸರ್ವೆ ಮಾಡಿರುವುದು ತೀವ್ರ ಖಂಡನೀಯ. ಕಾರ್ಯಕ್ರಮವೊಂದನ್ನು ಪ್ರಸಾರ ಮಾಡಿದ ಹಿನ್ನೆಲೆಯಲ್ಲಿ ಈ ದಾಳಿ ನಡೆದಿದೆ ಎಂಬುದು ಇಲ್ಲಿ ಸ್ವಷ್ಟವಾಗುತ್ತದೆ.

ಮಾಧ್ಯಮಗಳನ್ನು ಹತ್ತಿಕ್ಕಲು ನಡೆಯುವಂತ ಇಂತಹ ಪ್ರಯತ್ನಗಳನ್ನು ಬೆಂಗಳೂರು ಪ್ರೆಸ್‍ಕ್ಲಬ್ ಅಧ್ಯಕ್ಷ ಆರ್. ಶ್ರೀಧರ್, ಪ್ರಧಾನ ಕಾರ್ಯದರ್ಶಿ ಬಿ.ಪಿ. ಮಲ್ಲಪ್ಪ ಅವರು
ತೀವ್ರವಾಗಿ ಖಂಡಿಸಿದ್ದಾರೆ.