'ವಿಡಿಯೋ ಕಾಲ್' ಮಾಡಿ ನಿನ್ನ ಹೆಂಡ್ತಿ ತೋರಿಸು ಎಂದ : ರೊಚ್ಚಿಗೆದ್ದು ಚಾಕು ಇರಿದ ಸ್ನೇಹಿತ

ಬೆಂಗಳೂರು : ಸಹೋದ್ಯೋಗಿಯೊಬ್ಬ ಸ್ನೇಹಿತನಿಗೆ ಚಾಕು ಇರಿದು ಕೊಲೆಗೆ ಯತ್ನಿಸಿದ ಘಟನೆ ಬೆಂಗಳೂರಿನಲ್ಲಿ ಹೆಚ್.ಎಸ್.ಆರ್ ಲೇಔಟ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
'ವಿಡಿಯೋ ಕಾಲ್' ಮಾಡಿದ ಸಹದ್ಯೋಗಿಯೊಬ್ಬ ನಿನ್ನ ಹೆಂಡ್ತಿ ನೋಡಬೇಕು, ತೋರಿಸು ಎಂದಿದ್ದಾನೆ.
ಲೆನಿನ್ ಕಲೆಕ್ಷನ್ ಗಾರ್ಮೆಂಟ್ಸ್ ಫ್ಯಾಕ್ಟರಿಯಲ್ಲಿ ರಾಜೇಶ್ ಮಿಶ್ರಾ ಹಾಗೂ ಸುರೇಶ್ ಎಂಬುವವರು ಒಟ್ಟಾಗಿ ಕೆಲಸ ಮಾಡುತ್ತಿದ್ದರು. ರಾಜೇಶ್ ಮಿಶ್ರಾ ತನ್ನ ಪತ್ನಿಯೊಂದಿಗೆ ಫೋನ್ನಲ್ಲಿ ಮಾತಾಡುತ್ತಿದ್ದ ವೇಳೆ ಅಲ್ಲಿಗೆ ಬಂದ ಸ್ನೇಹಿತ ಸುರೇಶ್ ವಿಡಿಯೋ ಕಾಲ್ ಮಾಡು, ನಿನ್ನ ಹೆಂಡತಿಯನ್ನು ನೋಡ್ಬೇಕು ಎಂದಿದ್ದಾನೆ. ಇದಕ್ಕೆ ಸಿಟ್ಟಿಗೆದ್ದ ಸ್ನೇಹಿತ ಆತನ ಮೇಲೆ ಚಾಕು ಇರಿದಿದ್ದಾನೆ. ಇನ್ನೂ, ಗಂಭೀರವಾಗಿ ಗಾಯಗೊಂಡ ರಾಜೇಶ್ ಮಿಶ್ರಾನನ್ನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.