ಬೆಂಗಳೂರಲ್ಲಿ ವಿಡಿಯೋ ಕಾಲ್ ಮಾಡಿ ಹೆಂಡತಿ ತೋರಿಸದಿದ್ದಕ್ಕೆ ಸ್ನೇಹಿತನಿಗೆ ಚಾಕು ಇರಿತ

ಬೆಂಗಳೂರು : ಹೆಚ್.ಎಸ್.ಆರ್ ಲೇಔಟ್ ಠಾಣಾ ವ್ಯಾಪ್ತಿಯಲ್ಲಿ ವಿಡಿಯೋ ಕಾಲ್ ಮಾಡಿ ತನ್ನ ಹೆಂಡತಿಯನ್ನ ತೋರಿಸದಿದ್ದಕ್ಕೆ ಸ್ನೇಹಿತನಿಗೆ ಸಹೋದ್ಯೋಗಿಯೇ ಬರ್ಬರವಾಗಿ ಚಾಕು ಇರಿದ ಘಟನೆ ನಡೆದಿದೆ.ರಾಜೇಶ್ ಮಿಶ್ರಾ ಎಂಬಾತ ತನ್ನ ಪತ್ನಿಯೊಂದಿಗೆ ಫೋನ್ನಲ್ಲಿ ಮಾತನಾಡುತ್ತಿದ್ದ ಆ ಸಂದರ್ಭದಲ್ಲಿ ಆತ ಜೊತೆ ಕೆಲಸ ಮಾಡುತ್ತಿದ್ದ ಸುರೇಶ್ ಎಂಬ ಸ್ನೇಹಿತ ಆತನ ಬಳಿಗೆ ಬಂದಿದ್ದಾನೆ. ಆಗ ನಿನ್ನ ಹೆಂಡತಿಗೆ ವಿಡಿಯೋ ಕಾಲ್ ಮಾಡು ನಿನ್ನ ಹೆಂಡತಿಯನ್ನು ನೋಡಬೇಕು ತೋರಿಸು ಎಂದಿದ್ದಾನೆ. ಇದಕ್ಕೆ ಸಿಟ್ಟುಕೊಂಡು ಇಬ್ಬರು ಗಲಾಟೆ ಮಾಡಿಕೊಂಡರು. ಕೋಪ ವಿಕೋಪಗೊಂಡು ರಾಜೇಶ್ ಮಿಶ್ರಾ ಹೊಟ್ಟೆಗೆ ಸುರೇಶ್ ಕತ್ತರಿಯಿಂದ ಇರಿದಿದ್ದಾನೆ.ರಾಜೇಶ್ ಮಿಶ್ರಾ ಲೆನಿನ್ ಕಲೆಕ್ಷನ್ ಗಾರ್ಮೆಂಟ್ಸ್ ಫ್ಯಾಕ್ಟರಿಯಲ್ಲಿ ಕೆಲಸ ಮಾಡುತ್ತಿದ್ದ ಎಂದು ತಿಳಿಯಲಾಗಿದೆ. ರಾಜೇಶ್ ಗಂಭೀರ ಗಾಯಗೊಂಡಿದ್ದು, ಕೂಡಲೇ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಚ್.ಎಸ್.ಆರ್ ಲೇಔಟ್ ಪೊಲೀಸರು ಆರೋಪಿ ಸುರೇಶ್ ನನ್ನ ಬಂಧಿಸಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.