14 ವರ್ಷಗಳಿಂದ ತಲೆಮರೆಸಿಕೊಂಡಿದ್ದವನನ್ನು ಹಿಡಿದ ಬೆಂಗಳೂರು ಪೊಲೀಸ್, ಸಿನಿಮಾ ರೀತಿಯ ರೋಚಕ ಕತೆ!

14 ವರ್ಷಗಳಿಂದ ತಲೆಮರೆಸಿಕೊಂಡಿದ್ದವನನ್ನು ಹಿಡಿದ ಬೆಂಗಳೂರು ಪೊಲೀಸ್, ಸಿನಿಮಾ ರೀತಿಯ ರೋಚಕ ಕತೆ!
ಉಪ್ಪು(Salt) ತಿಂದವನು ನೀರು(Water) ಕುಡಿಯಲೇ ಬೇಕು, ತಪ್ಪು ಮಾಡಿದನು ಶಿಕ್ಷೆ(Punishment) ಅನುಭವಿಸಲೇ ಬೇಕು. ಹೌದು, ಯಾರೇ ತಪ್ಪು ಮಾಡಿದರೂ ಶಿಕ್ಷೆ ಆಗಲೇಬೇಕು ಅನ್ನುತ್ತೆ ಕಾನೂನು. ಕೆಲವು ಬಾರಿ ತಪ್ಪು ಮಾಡಿದವನು ಎಸ್ಕೇಪ್(Escape)​ ಆಗಿರುತ್ತಾನೆ.
ಆದರೆ ಆತನ ಬದಲು ಇನ್ಯಾರೋ ಶಿಕ್ಷೆ ಅನುಭವಿಸಿರುತ್ತಾರೆ. ತಪ್ಪು ಮಾಡಿ ಯಾರ ಕೈಯಿಂದ ತಪ್ಪಿಸಿಕೊಂಡರು ಮೇಲಿರುವ ಭಗವಂತ(God)ನ ಕೈಯಿನಿಂದ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ. ಒಂದಲ್ಲ ಒಂದು ದಿನ ಮಾಡಿದ ತಪ್ಪಿಗೆ ಶಿಕ್ಷೆ ಅನುಭವಿಸುವಂತೆ ಆ ದೇವರು ಮಾಡುತ್ತಾರೆ. ಇದಕ್ಕೆ ತಕ್ಕ ಸಾಕ್ಷಿ ಇಲ್ಲಿದೆ. ವ್ಯಕ್ತಿಯೊಬ್ಬ 14 ವರ್ಷಗಳ ಹಿಂದೆ ಅಪಘಾತ(Accident) ಮಾಡಿ, ಇಷ್ಟು ವರ್ಷಗಳ ಕಾಲ ಪೊಲೀಸರ ಕೈಗೆ ಸಿಗದೇ ಆಟವಾಡಿಸುತ್ತಿದ್ದ. ಆದರೆ ಆತನ ಆಟ ಮುಗಿದಿತ್ತು ಅಂತ ಕಾಣುತ್ತೆ. ಕೊನೆಗೂ ಆತನನ್ನ ಪತ್ತೆ ಹಚ್ಚಿ ಪೊಲೀಸರು(Police) ಬಂಧಿಸಿದ್ದಾರೆ. 2007ರಲ್ಲಿ ಅಪಘಾತ(Accident) ಮಾಡಿ ತಲೆಮರೆಸಿಕೊಂಡಿದ್ದ(Absconding) ಆರೋಪಿಯನ್ನು ಪೊಲೀಸರು ಇದೀಗ ಬಂಧಿಸಿದ್ದಾರೆ.

2007ರಲ್ಲಿ ನಡೆದಿದ್ದ ಅಪಘಾತದಲ್ಲಿ ಸಾವನ್ನಪ್ಪಿದ್ದ ಯುವಕ

ತಮಿಳುನಾಡು ಮೂಲದ ಪಿ. ಮತಿವಣ್ಣನ್​ ಎಂಬಾತ ಕಾರು ಚಾಲಕನಾಗಿ ಕೆಲಸ ಮಾಡಿಕೊಂಡಿದ್ದ. ಹೀಗೆ 2007ರಲ್ಲಿ ತಮಿಳುನಾಡಿನಿಂದ ಬೆಂಗಳೂರಿಗೆ ಆತ ಪ್ರಯಾಣಿಕರನ್ನು ಡ್ರಾಪ್​ ಮಾಡಲು ಬಂದಿದ್ದ. ಆತ ಕೆಲಸ ಮಾಡುತ್ತಿದ್ದ ಮಾಲೀಕನ ಎಸ್​​ಯುವಿ ಕಾರಿನಲ್ಲಿ ಪ್ರಯಾಣಿರನ್ನು ಡ್ರಾಪ್​ ಮಾಡಲು ಬಂದಿದ್ದ. ಡ್ರಾಪ್​ ಮಾಡಿದ ಬಳಿಕ ವಾಪಸ್​ ತಮಿಳುನಾಡಿಗೆ ಹೋಗುತ್ತಿದ್ದ ವೇಳೆ, ಬೈಕ್​ ಸವಾರನಿಗೆ ಹಿಂದಿನಿಂದ ಗುದ್ದಿದ್ದ. ಈ ರಭಸಕ್ಕೆ 25 ವರ್ಷದ ಯುವಕನಬ್ಬ ಸಾವನ್ನಪ್ಪಿದ್ದ. ಐಟಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ ಆ ಯುವಕ, ಕೆಲಸ ಮುಗಿಸಿ ಮನೆ ಕಡೆ ಹೊರಟ್ಟಿದ್ದ. ಈ ವೇಳೆ ಮತಿವಣ್ಣನ್​ ಅಜಾಗರೂಕತೆಯಿಂದ ಆತ ಮೃತಪಟ್ಟಿದ್ದ.



ಇನ್ನೂ ಈ ಅಪಘಾತದ ನಂತರ ಮತಿವಣ್ಣನ್​ನನ್ನು ಪೊಲೀಸರು ಆತನ ಮೇಲೆ ಸೆಕ್ಷನ್ 304 ಎ ಅಡಿಯಲ್ಲಿ ನಿರ್ಲಕ್ಷ್ಯದಿಂದ ಸಾವಿಗೆ ಕಾರಣವಾದ ಆರೋಪದ ಮೇಲೆ ಮತಿವಣ್ಣನ್ ಅವರನ್ನು ಬಂಧಿಸಿದ್ದರು. ಆರೋಪ ಕೂಡ ಸಾಭೀತಾಗಿತ್ತು. ಕೋರ್ಟ್ ಇತನಿಗೆ 1 ವರ್ಷ ಜೈಲು , 3 ಸಾವಿರ ರೂಪಾಯಿ ದಂಡ ವಿಧಿಸಿತ್ತು. ತನ್ನ ತಪ್ಪನ್ನು ಕೂಡ ಜಡ್ಜ್​ ಮುಂದೆ ಆತ ಒಪ್ಪಿಕೊಂಡಿದ್ದ. ಇದಾದ ಕೆಲವೇ ಹೊತ್ತಲ್ಲಿ, ಪೊಲೀಸರ ಕಣ್ಣು ತಪ್ಪಿಸಿ ಆತ ಪರಾರಿಯಾಗಿದ್ದ. ಆತನಿಗಾಗಿ ಪೊಲೀಸರು ಹಲವೆಡೆ ಹುಡುಕಿದ್ದಾರೆ. ಆದರೂ ಆತ ಪೊಲೀಸರಿಗೆ ಸಿಗದೇ ತಲೆಮರೆಸಿಕೊಂಡಿದ್ದ.

ಬರೋ ಬ್ಬರಿ 14 ವರ್ಷ ಪೊಲೀಸರ ಕೈಗೆ ಸಿಗದೇ ಆತ ತಲೆಮರೆಸಿಕೊಂಡಿದ್ದ. 2021 ಜುಲೈನಲ್ಲಿ ನಡೆದ ಬೆಂಗಳೂರು ಪೊಲೀಸರ ಪರಿಶೀಲನಾ ಸಭೆಯಲ್ಲಿ ಈ ವಿಷಯ ಮತ್ತೆ ಮುನ್ನೆಲಗೆ ಬಂದಿತ್ತು. ಮತ್ತೆ ಮತಿವಣ್ಣನ್​ನನ್ನು ಬಂಧಿಸಲೇ ಬೇಕು ಅಂತ ಪೊಲೀಸರು ಪಣತೊಟ್ಟಿದ್ದರು. ಆತ ತಮಿಳುನಾಡಿನ ತಿರುಪ್ಪೂರ್​ನಲ್ಲಿ ಇರುವ ಬಗ್ಗೆ ಮಾಹಿತಿ ಬಂದಿತ್ತು. ಪೊಲೀಸರ ತಂಡ ಅಲ್ಲಿಗೆ ಹೋಗಿತ್ತು. ಈ ವಿಚಾರ ತಿಳಿದ ಮತಿವಣ್ಣನ್​ ಮತ್ತೆ ಅಲ್ಲಿಂದ ಎಸ್ಕೇಪ್​ ಆಗಿ ಬೇರೆ ಕಡೆ ಹೋಗಿದ್ದ. ಹೀಗಾಗಿ ಪೊಲೀಸರ ತಂಡ ಬರಿಗೈಲಿ ವಾಪಸ್​ ಆಗಿತ್ತು.


ಮತಿವಣ್ಣನ್​ ಫೋನ್​ ನಂಬರ್​ ಅನ್ನು ಪೊಲೀಸರು ಹೇಗೋ ಪಡೆದುಕೊಂಡಿದ್ದರು. ಆತನ ಮೊಬೈಲ್​ ನೆಟ್​​ವರ್ಕ್​ ಮೇಲೆ ಕಣ್ಣೀಟ್ಟಿದ್ದರು. 2021 ನವೆಂಬರ್​ 10ರಂದು ಆತ ತಿರುಪ್ಪೂರ್​ ಬಳಿಯ ಪ್ರದೇಶದಲ್ಲಿರುವ ಬಗ್ಗೆ ಮಾಹಿತಿ ದೊರೆತಿದ್ದು. ಕೂಡಲೇ ಪೊಲೀಸರು ಅಲ್ಲಿಗೆ ತೆರಳಿ ಆತನನ್ನು ಬಂಧಿಸಿ ಕರೆತಂದಿದ್ದಾರೆ.