ರಾಯರ ಸನ್ನಿಧಿಯಲ್ಲಿ ದರ್ಶನ್ ಯುಗಾದಿ ಸಂಭ್ರಮ: ಮಂತ್ರಾಲಯದಲ್ಲಿ ಸ್ನೇಹಿತರೊಂದಿಗೆ ಪ್ರತ್ಯಕ್ಷ!

ರಾಯರ ಸನ್ನಿಧಿಯಲ್ಲಿ ದರ್ಶನ್ ಯುಗಾದಿ ಸಂಭ್ರಮ: ಮಂತ್ರಾಲಯದಲ್ಲಿ ಸ್ನೇಹಿತರೊಂದಿಗೆ ಪ್ರತ್ಯಕ್ಷ!

ಚಾಲೆಂಜಿಂಗ್‌ ಸ್ಟಾರ್ ದರ್ಶನ್ ಸ್ಯಾಂಡಲ್‌ವುಡ್‌ನ ಬ್ಯುಸಿ ನಟರಲ್ಲಿ ಒಬ್ಬರು. 56ನ್ನೇ ಸಿನಿಮಾ 'ಕಾಟೇರ' ಶೂಟಿಂಗ್‌ನಲ್ಲಿ ದರ್ಶನ್ ಬ್ಯುಸಿಯಾಗಿದ್ದಾರೆ. ಈ ಬೆನ್ನಲ್ಲೇ ಕನ್ನಡದ ನಿರ್ಮಾಪಕರು ದರ್ಶನ್ ಕಾಲ್‌ಶೀಟ್‌ಗಾಗಿ ತುದಿಗಾಲಲ್ಲಿ ನಿಂತಿದ್ದಾರೆ.

ಅದೆಷ್ಟೇ ಬ್ಯುಸಿಯಾಗಿದ್ದರೂ, ದರ್ಶನ್ ಗ್ಯಾಪ್‌ನಲ್ಲೇ ಕಮಿಟ್ಮೆಂಟ್‌ಗಳನ್ಜು ಮುಗಿಸುತ್ತಿದ್ದಾರೆ. ಇತ್ತೀಚೆಗೆ ಚಾಲೆಂಜಿಂಗ್‌ ಸ್ಟಾರ್ ತಿರುಪತಿ ತಿಮ್ಮಪ್ಪನ ದರ್ಶನವನ್ನು ಪಡೆದು ಬಂದಿದ್ದರು. ಈಗ ಚಾಲೆಂಜಿಂಗ್ ಸ್ಟಾರ್ ಸ್ನೇಹಿತರೊಂದಿಗೆ ತಿರುಪತಿಯಲ್ಲಿ ಕಾಣಿಸಿಕೊಂಡಿದ್ದಾರೆ.

ದರ್ಶನ್‌ ಪ್ರಾಣಿ-ಪಕ್ಷಿಗಳು, ಕಾಡು-ಮೇಡು ಅಂತ ಸುತ್ತಾಡುತ್ತಿರುತ್ತಾರೆ. ಹಾಗೇ ಅವುಗಳ ಮೇಲೆ ಪ್ರೀತಿನೂ ಜಾಸ್ತಿ. ಹಾಗೇ ದೇವರ ಮೇಲೂ ನಂಬಿಕೆ. ಸಿನಿಮಾ ತೆರೆಕಾಣುವುದಕ್ಕಿಂತ ಮುನ್ನ ಅಥವಾ ರಿಲೀಸ್ ಆದ ಬಳಿಕ ದೇವರ ಸನ್ನಿಧಿಗೆ ಭೇಟಿ ಕೊಟ್ಟು, ಆಶೀರ್ವಾದ ಪಡೆದು ಬರುತ್ತಾರೆ. ಯುಗಾದಿ ಹಬ್ಬದ ವೇಳೆ ದರ್ಶನ್ ರಾಯರ ಸನ್ನಿಧಿಗೆ ಭೇಟಿ ಕೊಟ್ಟಿದ್ದಾರೆ.

ರಾಯರ ದರ್ಶನ್ ಪಡೆದ ಚಾಲೆಂಜಿಂಗ್ ಸ್ಟಾರ್

ನಿನ್ನೆ (ಮಾರ್ಚ್ 22) ಯುಗಾದಿ ಹಬ್ಬ. ಈ ಸಂದರ್ಭದಲ್ಲಿಯೇ ಚಾಲೆಂಜಿಂಗ್‌ ಸ್ಟಾರ್ ದರ್ಶನ್ ಮಂತ್ರಾಲಯಕ್ಕೆ ಭೇಟಿ ಕೊಟ್ಟಿದ್ದಾರೆ. ಸ್ನೇಹಿತರೊಂದಿಗೆ ರಾಘವೇಂದ್ರ ಸ್ವಾಮಿ ಸನ್ನಿಧಿಗೆ ತೆರಳಿ ರಾಯರ ದರ್ಶನ ಪಡೆದಿದ್ದಾರೆ. ಈ ವಿಡಿಯೋಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿವೆ.

ದರ್ಶನ್ ಜೊತೆ ನಾಲ್ಕೈದು ಮಂದಿ ಗೆಳೆಯರು ಮಂತ್ರಾಲಯಕ್ಕೆ ತೆರಳಿದ್ದಾರೆ. ಇವರೊಂದಿಗೆ ಯಶಸ್ ಸೂರ್ಯ ಕೂಡ ರಾಯರ ದರ್ಶನ ಮಾಡಿ ಬಂದಿದ್ದಾರೆ. ಇದೇ ವೇಳೆ ಮಂತ್ರಾಲಯದ ರಾಘವೇಂದ್ರ ಸ್ವಾಮಿ ಮಠದ ಪೀಠಾಧಿಪತಿ ಸುಬುಧೇಂದ್ರ ತೀರ್ಥ ಸ್ವಾಮೀಜಿಗಳ ಆಶೀರ್ವಾದವನ್ನು ಪಡೆದುಕೊಂಡಿದ್ದಾರೆ. ಈ ವೇಳೆ ದರ್ಶನ್ ಸ್ವಾಮೀಜಿಗಳು ರಾಯರ ಮೂರ್ತಿ ನೀಡಿ ಆಶೀರ್ವಾದ ಮಾಡಿದ್ದಾರೆ.

ಎರಡು ವರ್ಷಗಳ ಹಿಂದೆನೂ ಚಾಲೆಂಜಿಂಗ್ ಸ್ಟಾರ್ ದರ್ಶನ್ ರಾಯರ ದರ್ಶನ ಪಡೆದಿದ್ದರು. ರಾಬರ್ಟ್ ವಿಜಯಯಾತ್ರೆ ಸಂದರ್ಭದಲ್ಲಿ ಬೃಂದಾವನಕ್ಕೆ ಭೇಟಿ ನೀಡಿದ್ದರು. ಆ ವೇಳೆ ನಡೆಯುತ್ತಿದ್ದ ಶ್ರೀ ರಾಘವೇಂದ್ರ ಸ್ವಾಮಿ ಶ್ರೀ ಗುರು ವೈಭವೋತ್ಸವದಲ್ಲೂ ಭಾಗಿಯಾಗಿದ್ದರು.

'ಕಾಟೇರ' ಶೂಟಿಂಗ್‌ನಲ್ಲಿ ದರ್ಶನ್ ಬ್ಯುಸಿ

ದರ್ಶನ್ ಇತ್ತೀಚೆಗೆ ಸ್ನೇಹಿತರೊಂದಿಗೆ ತಿರುಪತಿ ತಿಮ್ಮಪ್ಪನ ದರ್ಶನವನ್ನು ಪಡೆದು ಬಂದಿದ್ದರು. ಈಗ ರಾಯರ ಸನ್ನಿಧಿ ಭೇಟಿ ಕೊಟ್ಟಿದ್ದಾರೆ. ಇನ್ನು ಸಿನಿಮಾ ವಿಚಾರಕ್ಕೆ ಬರೋದಾರೆ, 'ಕ್ರಾಂತಿ' ತೆರೆಕಂಡ ಬಳಿಕ 56ನೇ ಸಿನಿಮಾ 'ಕಾಟೇರ' ಶೂಟಿಂಗ್‌ನಲ್ಲಿ ನಿರತರಾಗಿದ್ದಾರೆ. ತರುಣ್ ಸುಧೀರ್ ನಿರ್ದೇಶಿಸುತ್ತಿರುವ ಈ ಸಿನಿಮಾ ಈ ವರ್ಷದ ಬಹುನಿರೀಕ್ಷೆಯ ಸಿನಿಮಾಗಳಲ್ಲಿ ಒಂದು.

'ಕಾಟೇರ' ಸಿನಿಮಾ ಮೂಲಕ ಸ್ಯಾಂಡಲ್‌ವುಡ್‌ನ ಕನಸಿನ ರಾಣಿ ಮಾಲಾಶ್ರೀ ಪುತ್ರಿ ರಾಧನಾ ರಾಮ್ ಚಿತ್ರರಂಗಕ್ಕೆ ಪ್ರವೇಶ ಮಾಡುತ್ತಿದ್ದಾರೆ. ಹೀಗಾಗಿ ದರ್ಶನ್ ಹಾಗೂ ರಾಧನಾ ರಾಮ್ ಕಾಂಬಿನೇಷನ್ ಹೇಗಿರುತ್ತೆ? ಅನ್ನೋದನ್ನು ನೋಡುವುದಕ್ಕೆ ಡಿ ಬಾಸ್ ಅಭಿಮಾನಿಗಳು ಕಾದು ಕೂತಿದ್ದಾರೆ.