ರಾಮನವಮಿ ಮೆರವಣಿಗೆ ಮೇಲೆ ಕಲ್ಲು ತೂರಾಟ; ಪರಿಸ್ಥಿತಿ ಹತೋಟಿಗೆ ತರಲು ಪೊಲೀಸರಿಂದ ಹರಸಾಹಸ!

ರಾಮನವಮಿ ಮೆರವಣಿಗೆ ಮೇಲೆ ಕಲ್ಲು ತೂರಾಟ; ಪರಿಸ್ಥಿತಿ ಹತೋಟಿಗೆ ತರಲು ಪೊಲೀಸರಿಂದ ಹರಸಾಹಸ!

ಗುಜರಾತ್: ವಡೋದರದ ಫತೇಪುರ ಪ್ರದೇಶದ ಮಸೀದಿ ಬಳಿ ರಾಮನವಮಿ ಮೆರವಣಿಗೆ ಮೇಲೆ ಕಲ್ಲು ತೂರಾಟ ನಡೆದಿದೆ. ಘಟನೆಯಿಂದ ಕೆಲ ವಾಹನಗಳು ಜಖಂಗೊಂಡಿದ್ದು, ಯಾರಿಗೂ ಗಂಭೀರ ಗಾಯಗಳಾಗಿಲ್ಲ ಎಂದು ವರದಿಯಾಗಿದೆ.

ಪೊಲೀಸರು ಸ್ಥಳಕ್ಕೆ ಧಾವಿಸಿದರೂ ಪರಿಸ್ಥಿತಿಯನ್ನು ಹತೋಟಿಗೆ ತರಲು ಹರಸಾಹಸ ಪಟ್ಟಿದ್ದಾರೆ.

ಸದ್ಯ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿರುವ ವಿಡಿಯೋದಲ್ಲಿ ಮೆರವಣಿಗೆಯ ಸಮಯದಲ್ಲಿ ಜನರು ಪರಸ್ಪರ ಕಲ್ಲು ಎಸೆಯುತ್ತಿರುವುದ ಕಂಡು ಬಂದಿದೆ.

ಮೆರವಣಿಗೆಯು ತನ್ನ ಯೋಜಿತ ಮಾರ್ಗದಲ್ಲಿ ಪೊಲೀಸರ ರಕ್ಷಣೆಯಲ್ಲಿ ಸಾಗಿದೆ. ಹಿಂದಿನ ದಿನವೂ ಇದೇ ಮಾರ್ಗದಲ್ಲಿ ಮೆರವಣಿಗೆ ನಿರತರ ಮೇಲೆ ಕಲ್ಲು ತೂರಾಟ ನಡೆದಿತ್ತು. ಇದೀಗ ಬಜರಂಗದಳದ ಸ್ಥಳೀಯ ಮುಖಂಡರೊಬ್ಬರು, ಈ ಹಿಂದೆ ಇಂತಹ ಘಟನೆ ನಡೆದಿದೆ ಎಂದು ತಿಳಿದಿದ್ದರೂ, ಮೆರವಣಿಗೆಯ ವೇಳೆ ಎಲ್ಲಿಯೂ ಪೊಲೀಸರು ಕಾಣಲಿಲ್ಲ ಎಂದು ಆರೋಪಿಸಿರುವುದು ವರದಿಯಾಗಿದೆ.

ಬಜರಂಗ ಮುಖಂಡರ ಆರೋಪವನ್ನು ಉಪ ಪೊಲೀಸ್ ಆಯುಕ್ತ ಯಶಪಾಲ್ ಜಗನಿಯಾ ತಳ್ಳಿಹಾಕಿದ್ದು, ನಗರದಲ್ಲಿ ನಡೆದ ಪ್ರತಿ ಮೆರವಣಿಗೆಗೂ ಪೊಲೀಸ್ ಭದ್ರತೆ ಒದಗಿಸಲಾಗಿದೆ ಎಂದು ತಿಳಿಸಿದ್ದಾರೆ. (ಏಜೆನ್ಸೀಸ್)