ರಾಣೇಬೆನ್ನೂರು ಪತ್ರಕರ್ತರ ಸಂಘದ ಪದಾಧಿಕಾರಿಗಳ ನೇಮಕ

ರಾಣೇಬೆನ್ನೂರು ಪತ್ರಕರ್ತರ ಸಂಘದ ಪದಾಧಿಕಾರಿಗಳ ನೇಮಕ

ರಾಣೆಬೆನ್ನೂರು ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ನೂತನ ಪದಾಧಿಕಾರಿಗಳನ್ನು ಶುಕ್ರವಾರ ಆಯ್ಕೆ ಮಾಡಲಾಯಿತು. ಅಧ್ಯಕ್ಷರಾಗಿ ಎಸ್.ಟಿ. ವೇದವಮೂರ್ತಿ,  ಉಪಾಧ್ಯಕ್ಷರಾಗಿ ಕರಿಯಪ್ಪ ಅರಳಿಕಟ್ಟಿ, ಪ್ರಧಾನ ಕಾರ್ಯದರ್ಶಿರಾಗಿ  ಮಂಜುನಾಥ ಹೊಸಪೇಟೆ, ಖಜಾಂಚಿಯಾಗಿ  ಗುರುರಾಜ ನಾಡಿಗೇರ, ಹಾಗೂ  ಕಾರ್ಯದರ್ಶಿಯಾಗಿ ನಾಗರಾಜ್ ಹಾವನೂರ  ಆಯ್ಕೆಯಾದರು. ಜಿಲ್ಲಾ ಪತ್ರಕರ್ತರ ಸಂಘದ ಖಜಾಂಚಿ ನಾರಾಯಣ ಹೆಗಡೆ ಚುನಾವಣಾಧಿಕಾರಿಯಾಗಿ ಕಾರ್ಯನಿರ್ವಹಿಸಿದರು. ರಾಜ್ಯ ಪ್ರಧಾನ ಕಾರ್ಯದರ್ಶಿ ನಿಂಗಪ್ಪ ಚಾವಡಿ, ಜಿಲ್ಲಾ ಉಪಾಧ್ಯಕ್ಷ ಎಸ್‌.ಜಿ. ಮಹಾನು ಭಾವಿಮಠ, ತಾಲೂಕು ಸದಸ್ಯರಾದ ಎಂ.ಚಿರಂಜೀವಿ, ಮಂಜುನಾಥ ಕುಂಬಳೂರ, ಹಾಲೇಶ್‌ ಶಿವಪ್ಪನವರ, ಮನೋಹರ ಮಲ್ಲಾಡದ, ಸಂತೋಷ ಮಹಾಂತಶೆಟ್ಟರ, ಕೆ.ಎಸ್.ನಾಗರಾಜ, ಗುರುರಾಜ ಶಿರಹಟ್ಟಿ, ಗದಿಗೆಪ್ಪ ನೇ, ಬಸವರಾಜ ಒಡೆರಾಯನಹಳ್ಳಿ, ವಿಶ್ವನಾಥ ಕುಂಬಳೂರ, ಸುಮಿತ್ ಮಳಿಯೆ, ಮಂಜುನಾಥ ಕೆಂಪಳೇರ, ಬಿ.ಕೆ.ರಾಜನಹಳ್ಳಿ, ಗಿರೀಶ್ ಅಮ್ಮನವರ ಹಾಜರಿದ್ದರು.