ರಾಜ್ಯ ಸರ್ಕಾರಕ್ಕೆ ಬಡವರ ಮೇಲೆ ಕಿಂಚಿತ್ತು ಕಾಳಜಿ ಇಲ್ಲ: ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್​

ರಾಜ್ಯ ಸರ್ಕಾರಕ್ಕೆ ಬಡವರ ಮೇಲೆ ಕಿಂಚಿತ್ತು ಕಾಳಜಿ ಇಲ್ಲ: ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್​

ರಾಜ್ಯ ಸರ್ಕಾರ ಇಂದು ಘೋಷಣೆ ಮಾಡಿರುವ ಪ್ಯಾಕೇಜ್​ನಿಂದ ರಾಜ್ಯದ ಜನತೆಗೆ ಯಾವುದೇ ಲಾಭ ಇಲ್ಲ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್​ ಕುಟುಕಿದ್ದಾರೆ. ಈ ಸಂಬಂಧ ಬೆಂಗಳೂರಿನಲ್ಲಿ ಮಾತನಾಡಿದ ಅವ್ರು ವಿಪಕ್ಷಗಳ ಬಾಯಿ ಮುಚ್ಚಿಸೋಕೆ ಅಂತಾ ಏನೋ ಒಂದು ಪ್ಯಾಕೇಜ್​ ಘೋಷಣೆ ಮಾಡಿದ್ದಾರೆ ಅಷ್ಟೇ ಎಂದು ಹೇಳಿದ್ರು.

ಈ ಸಂಕಷ್ಟದ ಸಂದರ್ಭದಲ್ಲಿ ರಾಜ್ಯ ಸರ್ಕಾರ ರೈತರು ಬೆಳೆದ ಬೆಳಗೆ ಬೆಂಬಲ ಬೆಲೆ ಘೋಷಣೆ ಮಾಡಬೇಕಿತ್ತು. ರೈತರ ಕೃಷಿ ಸಾಲವನ್ನ ಮನ್ನಾ ಮಾಡಬಹುದಿತ್ತು. ಆದರೆ ಇವರು ಬಡ ಜನಕ್ಕಾಗಿ ಏನನ್ನೂ ಮಾಡಿಲ್ಲ. ಹೋದ ವರ್ಷವೂ 25 ಸಾವಿರ ರೂಪಾಯಿ ಬಡವರಿಗೆ ಕೊಡುತ್ತೇನೆ ಅಂದ್ರು. ಇಲ್ಲಿಯವರೆಗೆ ಯಾವ ಫಲಾನುಭವಿಗೂ ಹಣ ಸಿಕ್ಕಿಲ್ಲ. ಈ ವರ್ಷ ಕೂಡ 2-3 ಸಾವಿರ ರೂಪಾಯಿ ಘೋಷಣೆ ಮಾಡಿದ್ದಾರೆ. ಅದು ಕೂಡ ಹೋದ ವರ್ಷದಂತೆಯೇ ಜನರ ಕೈ ಸೇರೋದಿಲ್ಲ.

ಕಟ್ಟಡ ಕಾರ್ಮಿಕರಿಗೂ ರಾಜ್ಯ ಸರ್ಕಾರ ನ್ಯಾಯ ಒದಗಿಸಿಲ್ಲ. ಈ ಸರ್ಕಾರಕ್ಕೆ ಬಡವರ ಮೇಲೆ ಕನಿಷ್ಟ ಕಾಳಜಿ ಇಲ್ಲ. ಇವೆಲ್ಲವೂ ರಾಜ್ಯ ಸರ್ಕಾರದ ವೈಫಲ್ಯವನ್ನ ಎತ್ತಿ ತೋರಿಸುತ್ತೆ ಎಂದು ಹೇಳಿದ್ರು.

ಪ್ರಧಾನಿ ಮೋದಿಗೆ ತಮ್ಮ ನಾಯಕರ ಮೇಲೆ ನಂಬಿಕೆ ಇಲ್ಲ. ಹೀಗಾಗಿಯೇ ಜಿಲ್ಲಾಧಿಕಾರಿಗಳಿಗೆ ಸೂಪರ್​​ ಪವರ್​ ನೀಡಿದ್ದಾರೆ. ಈ ಪ್ಯಾಕೇಜ್​ನಿಂದ ನಮಗಂತೂ ಸಮಾಧಾನವಾಗಿಲ್ಲ ಎಂದು ಗುಡುಗಿದ್ರು.