ರಾಜ್ಯದ ಶೇ. 66ರಷ್ಟು ಮಕ್ಕಳಿಗೆ ಮೊದಲ ಡೋಸ್ ಲಸಿಕೆ: ಸಚಿವ ಕೆ.ಸುಧಾಕರ್

ರಾಜ್ಯದ ಶೇ. 66ರಷ್ಟು ಮಕ್ಕಳಿಗೆ ಮೊದಲ ಡೋಸ್ ಲಸಿಕೆ: ಸಚಿವ ಕೆ.ಸುಧಾಕರ್

ಬೆಂಗಳೂರು: ರಾಜ್ಯದ ಶೇ. 66ರಷ್ಟು ಮಕ್ಕಳು ಮೊದಲ ಡೋಸ್ ಲಸಿಕೆ ಪಡೆದಿದ್ದಾರೆ ಎಂದು ಅರೋಗ್ಯ ಸಚಿವ ಕೆ. ಸುಧಾಕರ್ ತಿಳಿಸಿದ್ದಾರೆ.

ಸಾಮಾಜಿಕ ಜಾಲತಾಣ ಕೂನಲ್ಲಿ ಲಸಿಕೆ ಕುರಿತು ವಿಷಯ ಹಂಚಿಕೊಂಡಿರುವ ಅವರು, ರಾಜ್ಯದಲ್ಲಿ 15 ರಿಂದ 18 ವರ್ಷ ವರ್ಗದ ಮಕ್ಕಳಲ್ಲಿ ಮೂರನೇ ಎರಡು ಭಾಗದಷ್ಟು ಮಕ್ಕಳು ಮೊದಲ ಡೋಸ್ ಲಸಿಕೆ ಪಡೆದುಕೊಂಡಿದ್ದಾರೆ ಎನ್ನುವ ಮಾಹಿತಿ ಜೊತೆಗೆ ಪ್ರತಿ ಜಿಲ್ಲೆಗಳಲ್ಲಿ ಎಷ್ಟು ಮಕ್ಕಳು ಲಸಿಕೆ ಪಡೆದಿದ್ದರೆ ಎನ್ನುವುದನ್ನು ತಿಳಿಸಿದ್ದಾರೆ.

ಇದರಲ್ಲಿ ಗದಗ ಜಿಲ್ಲೆ ಮಕ್ಕಳ ಲಸಿಕೆ ಅಭಿಯಾನದಲ್ಲಿ ಮೊದಲ ಸ್ಥಾನದಲ್ಲಿದ್ದು, ಜಿಲ್ಲೆಯಲ್ಲಿ ಈ ವರ್ಗದ ಶೇ 99 ಮಕ್ಕಳು ಮೊದಲ ಡೋಸ್ ಲಸಿಕೆ ತೆಗೆದುಕೊಂಡಿದ್ದಾರೆ.

ಗುಲ್ಬರ್ಗ ಜಿಲ್ಲೆಯಲ್ಲಿ ಕೇವಲ ಶೇ 51ರಷ್ಟು ಮಕ್ಕಳು ಮಾತ್ರ ಮೊದಲ ಡೋಸ್ ಲಸಿಕೆ ಹೊಂದಿರುವುದರಿಂದ. ಜಿಲ್ಲೆ ಲಸಿಕೆ ಅಭಿಯಾನದಲ್ಲಿ ಕೊನೆಯ ಸ್ಥಾನವನ್ನು ಪಡೆದಿದೆ. ಉಳಿದಂತೆ ಕೊಡಗು ಮತ್ತು ಉಡುಪಿಯಲ್ಲಿ ಶೇ 87, ಉತ್ತರ ಕನ್ನಡ ಶೇ 83, ಬೆಂಗಳೂರು ನಗರ, ದಕ್ಷಿಣ ಕನ್ನಡ ಶೇ 79, ಬಾಗಲಕೋಟೆ ಶೇ 77, ಶಿವಮೊಗ್ಗ ಶೇ 76, ಧಾರವಾಡ ಶೇ 75, ಬೆಳಗಾವಿ, ಬೆಂಗಳೂರು ಗ್ರಾಮಾಂತರ ಶೇ 74, ಚಿಕ್ಕಮಗಳೂರು ಶೇ 73 ರಷ್ಟು ಲಸಿಕೆಯನ್ನು ನೀಡಿ ಮೊದಲ ಹತ್ತು ಸ್ಥಾನದಲ್ಲಿವೆ.