ರಾಜ್ಯದಲ್ಲಿ ಹೆಚ್ಚುತ್ತಿದೆ ಪೋಕ್ಸೋ ಪ್ರಕರಣಗಳುವಿಧಾನಪರಿಷತ್ ನಲ್ಲಿ ಆರಗ ಜ್ಞಾನೇಂದ್ರ ಹೇಳಿದ್ದೇನು

ಬೆಂಗಳೂರು: ರಾಜ್ಯದಲ್ಲಿ ಪೋಕ್ಸೋ ಪ್ರಕರಣಗಳು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಈ ಬಗ್ಗೆ ವಿಧಾನಪರಿಷತ್ ಪ್ರಶ್ನಾವಳಿ ಕಲಾಪದಲ್ಲಿ ಎಂಎಲ್ಸಿ ಗೋವಿಂದರಾಜು ಆರಗ ಜ್ಞಾನೇಂದ್ರ ಪ್ರಶ್ನಿಸಿದ್ದಾರೆ.ಸುಮಾರು 2022ರಲ್ಲಿ 3097 ಪೋಕ್ಸೋ ಪ್ರಕರಣಗಳು, 2021ರಲ್ಲಿ 2863 ಪೋಕ್ಸೋ ಕೇಸ್, 2020ರಲ್ಲಿ 2,166 ಪ್ರಕರಣಗಳು ದಾಖಲಾಗಿವೆ ಎಂದರು.
ಇದಕ್ಕೆ ಪ್ರತಿಕ್ರಿಯಿಸಿದ ಗೃಹ ಸಚಿವ ಆರಗ ಜ್ಞಾನೇಂದ್ರ, ಮೊದಲು ಪೋಕ್ಸೋ ಪ್ರಕರಣಗಳು ಠಾಣೆಗಳಲ್ಲಿ ರಿಪೋರ್ಟ್ ಆಗುತ್ತಿರಲಿಲ್ಲ . ಇದೀಗ ನೇರವಾಗಿ ಠಾಣೆಗೆ ಬಂದು ತಮ್ಮ ವಿರುದ್ಧ ನಡೆದ ದೌರ್ಜನ್ಯವನ್ನು ಹೇಳಿಕೊಳ್ಳುತ್ತಿದ್ದಾರೆ ಎಂದರು.
ಇದನ್ನ ತಡೆಗಟ್ಟುವ ನಿಟ್ಟಿನಲ್ಲಿ ರಾಜ್ಯದ ಪ್ರತಿ ಪೊಲೀಸ್ ಠಾಣೆಗಳಲ್ಲೂ ಹೆಲ್ಪ್ ಡೆಸ್ಕ್ ಮಾಡಿದ್ದೇವೆ. ಇದರಿಂದಾಗಿ ಸಂತ್ರಸ್ತರು ಮುಕ್ತವಾಗಿ ಠಾಣೆಗೆ ಬಂದು ಹೇಳಿಕೊಳ್ಳುವುದು ಹೆಚ್ಚಾಗುತ್ತಿದೆ.
ಮಕ್ಕಳ ಸುರಕ್ಷತೆಗಾಗಿ ರಾಜ್ಯದಲ್ಲಿ ಪಿಂಕ್ ಹೊಯ್ಸಳ ಕಾರ್ಯ ನಿರ್ವಹಿಸುತ್ತಿದೆ. ಬೆಂಗಳೂರು ನಗರದಲ್ಲಿ ನಿರ್ಭಯ ನಿಧಿಯಿಂದ ಸಿಸಿಟಿವಿ ಅಳವಡಿಕೆ ಮಾಡಲಾಗಿದೆ. ಸುಮಾರು 300 ಕೋಟಿ ರೂಪಾಯಿ ವೆಚ್ಚದಲ್ಲಿ 4 ಸಾವಿರ ಸಿಸಿಟಿವಿ ಅಳವಡಿಸಿದ್ದೇವೆ. ಪೋಕ್ಸೋ ಪ್ರಕರಣಗಳಿಗೆ ಸಂಬಂಧಿಸಿದಂತೆ ಪ್ರಕರಣ ನಡೆದ 60 ದಿನಗಳ ಒಳಗಾಗಿ ಚಾರ್ಜ್ಶೀಟ್ ಹಾಕುವ ಕೆಲಸ ಮಾಡುತ್ತಿದ್ದೇವೆ. ಸರ್ಕಾರ ಹೆಣ್ಣುಮಕ್ಕಳ ರಕ್ಷಣೆಗೆ ವಿಶೇಷವಾದ ಆದ್ಯತೆ ನೀಡುತ್ತಿದೆ ಎಂದರು.