ರಸಿಕ ವೈದ್ಯಾಧಿಕಾರಿಗೆ ಚೆಲ್ಲಾಟ ಮಹಿಳಾ ಸಿಬ್ಬಂದಿಗೆ ಸಂಕಟ

ರಸಿಕ ವೈದ್ಯಾಧಿಕಾರಿಗೆ ಚೆಲ್ಲಾಟ ಮಹಿಳಾ ಸಿಬ್ಬಂದಿಗೆ ಸಂಕಟ
ಮಂಗಳೂರಿನ ವೆನ್ಲಾಕ್ ಆಸ್ಪತ್ರೆಯ ಕುಷ್ಟ ರೋಗ ವಿಭಾಗ ವೈದ್ಯಾಧಿಕಾರಿಯೊಬ್ಬ, ಗುತ್ತಿಗೆ ಆಧಾರದ ಮೇಲೆ ಕೆಲಸ ಮಾಡುವ ಮಹಿಳ ಸಿಬ್ಬಂಧಿಗಳ ಜೊತೆ ಅಸಭ್ಯವಾಗಿ ವರ್ತಿಸಿದ್ದಾನೆ, ಕಛೇರಿಯಲ್ಲಿಯೆ ಮಹಿಳೆಯ ಜೊತೆ ಬಲವಂತವಾಗಿ ಚೆಲ್ಲಾಟವಾಡುತ್ತಿರುವ ಪೋಟೋ ಮತ್ತು ವೀಡಿಯೋಗಳು ವೈರಲ್ ಆಗಿವೆ.
ಮಂಗಳೂರಿನ ವೆನ್ಲಾಕ್ ಆಸ್ಪತ್ರೆಯಲ್ಲಿ ನೋಡಲ್ ಅಧಿಕಾರಿಯಾಗಿ ಮತ್ತು ಕುಷ್ಟರೋಗ ವಿಭಾಗದಲ್ಲಿ ಅಧಿಕಾರಿಯಾಗಿ ಕಾರ್ಯ ನಿರ್ವಹಿಸುತ್ತಿರುವ ರತ್ನಾಕರ ಎಂಬ ವ್ಯಕ್ತಿ ಮಹಿಳಾ ಸಿಬ್ಬಂಧಿ ಜೊತೆ ಅಸಭ್ಯವಾಗಿ ವರ್ತಿಸುತ್ತಿದ್ದು ಸಾಕ್ಷಿ ಸಮೇತ ವೀಡಿಯೋಗಳನ್ನ ಸೆರೆಹಿಡಿಯಲಾಗಿದೆ.
ಕಾಮುಕನ ಜೊತೆ ಸಹಕರಿಸದ ಸಿಬ್ಬಂಧಿಗಳಿಗೆ ಟಾರ್ಚರ್ ನೀಡುತ್ತಿದ್ದ ಎನ್ನಲಾಗಿದೆ. ಜೊತೆಗ ಮಹಿಳಾ ಸಿಬ್ಬಂದಿಯನ್ನು ಟ್ರಿಪ್ ಗೆ ಕರೆದುಕೊಂಡು ಹೋಗುತ್ತಿದ್ದ ಎಂಬ ಆರೋಪ ಸಹ ಕೇಳಿ ಬಂದಿದೆ. ಈ ಸಂಬಂಧ ಮಹಿಳಾ ಕೆಲಸಗಾರರು ಜಿಲ್ಲಾಧಿಕಾರಿಗಳಿಗೆ ದೂರು ಸಹಾ ನೀಡಿದ್ದಾರೆ.