ರಷ್ಯಾ ಅಧ್ಯಕ್ಷ ಪುಟಿನ್ ಜೀವಂತವಾಗಿರುವರೆ ಎಂದು ಖಚಿತವಿಲ್ಲ : ಉಕ್ರೇನ್ ಅಧ್ಯಕ್ಷ ಝೆಲೆನ್ಸ್ಕಿ

ಉಕ್ರೇನ್ : ರಷ್ಯಾದ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಜೀವಂತವಾಗಿದ್ದಾರೆಯೇ ಎಂದು ನನಗೆ ಅನುಮಾನ ಶುರುವಾಗಿದೆ ಎಂದು ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ ಹೇಳಿದ್ದಾರೆ.
ದಾವೋಸ್‌ನಲ್ಲಿ ನಡೆದ ವಿಶ್ವ ಆರ್ಥಿಕ ವೇದಿಕೆಯಲ್ಲಿ (ಡಬ್ಲ್ಯುಇಎಫ್) ಭಾಷಣದಲ್ಲಿ ಮಾತನಾಡಿದ ಅವರು, ಇಂದು ಯಾರೊಂದಿಗೆ ಮತ್ತು ಯಾವುದರ ಬಗ್ಗೆ ಮಾತನಾಡಬೇಕೆಂದು ನನಗೆ ಅರ್ಥವಾಗುತ್ತಿಲ್ಲ.
ಇನ್ನು ಉಕ್ರೇನ್ ಅಧ್ಯಕ್ಷರ ಹೇಳಿಕೆ ಕ್ರೆಮ್ಲಿನ್ ವಕ್ತಾರ ಡಿಮಿಟ್ರಿ ಪೆಸ್ಕೋವ್ ತೀವ್ರ ಖಂಡನೆ ವ್ಯಕ್ತಪಡಿಸಿದ್ದು, ರಷ್ಯಾ ಮತ್ತು ಪುಟಿನ್ ಎರಡೂ ಝೆಲೆನ್ಸ್ಕಿಗೆ ದೊಡ್ಡ ಸಮಸ್ಯೆಯಾಗಿದೆ ಎಂಬುದು ಸ್ಪಷ್ಟವಾಗಿದೆ. ಮಾನಸಿಕವಾಗಿ ಝೆಲೆನ್ಸ್ಕಿ ರಷ್ಯಾ ಅಥವಾ ಪುಟಿನ್ ಅಸ್ತಿತ್ವದಲ್ಲಿಲ್ಲ ಎಂದು ಬಯಸುತ್ತಾರೆ. ರಷ್ಯಾ ಅಸ್ತಿತ್ವದಲ್ಲಿದೆ ಎಂಬುದನ್ನು ಅವರು ಬೇಗನೆ ಅರಿತುಕೊಂಡರೆ, ಉಕ್ರೇನ್‌ನಂತಹ ದೇಶಕ್ಕೆ ಉತ್ತಮ ಎಂದಿದ್ದಾರೆ.
ಇತ್ತೀಚಿನ ವಾರಗಳಲ್ಲಿ ಸಾರ್ವಜನಿಕ ಕಾರ್ಯಕ್ರಮಗಳಿಂದ ಪುಟಿನ್ ಹಿಂದೆ ಸರಿದಿದ್ದು,ಡಿಸೆಂಬರ್‌ನಲ್ಲಿ ಪುಟಿನ್ ತಮ್ಮ ವಾರ್ಷಿಕ ಪತ್ರಿಕಾಗೋಷ್ಠಿಯನ್ನೂ ರದ್ದುಗೊಳಿಸಿದ್ದರು. ಈ ಹಿನ್ನೆಲೆಯಲ್ಲಿ ಪುಟಿನ್ ಅವರನ್ನು ಉಕ್ರೇನ್ ಅಧ್ಯಕ್ಷ ಝೆಲೆನ್ಸ್ಕಿ ಗೇಲಿ ಮಾಡಿದ್ದಾರೆ.