ಯುಪಿ ಜನಸಂಖ್ಯಾ ನಿಯಂತ್ರಣ ಮಸೂದೆ ಕರಡು ಸಿದ್ದ: ನೀತಿ ಅನುಸರಿಸಿದರೆ ಏನು ಸಿಗುತ್ತೆ?

ಲಕ್ನೋ, ಜು.10: ಪ್ರಸ್ತಾವಿತ ಜನಸಂಖ್ಯಾ ನಿಯಂತ್ರಣ ಮಸೂದೆಯ ಮೊದಲ ಕರಡನ್ನು ಉತ್ತರ ಪ್ರದೇಶ ರಾಜ್ಯ ಕಾನೂನು ಆಯೋಗ ಶುಕ್ರವಾರ ಬಿಡುಗಡೆ ಮಾಡಿದೆ. ಕರಡು ಮಸೂದೆಯಲ್ಲಿ ಎರಡು ಮಕ್ಕಳಿಗಿಂತ ಹೆಚ್ಚಿನ ಮಕ್ಕಳನ್ನು ಹೊಂದಿರುವ ಜನರಿಗೆ ಸರ್ಕಾರಿ ಯೋಜನೆಗಳ ಪ್ರಯೋಜನಗಳನ್ನು ನೀಡದಿರಲು ಹಾಗೂ ಎರಡು ಮಕ್ಕಳ ನೀತಿಯನ್ನು ಅನುಸರಿಸುವವರಿಗೆ ಪ್ರೋತ್ಸಾಹಕ ಯೋಜನೆ ಪ್ರಸ್ತಾಪಿಸಲು ಅವಕಾಶವಿದೆ.
''ಎರಡು ಮಕ್ಕಳ ನೀತಿಯನ್ನು ಉಲ್ಲಂಘಿಸುವವರು ಸ್ಥಳೀಯ ಸಂಸ್ಥೆಗಳ ಚುನಾವಣೆಗೆ ಸ್ಪರ್ಧಿಸುವುದನ್ನು ಅಥವಾ ಸರ್ಕಾರಿ ಉದ್ಯೋಗಗಳಿಗೆ ಅರ್ಜಿ ಸಲ್ಲಿಸುವುದನ್ನು ತಡೆಯಲು ಮಸೂದೆಯು ಪ್ರಸ್ತಾಪಿಸಿದೆ. ಹಾಗೆಯೇ ಮಸೂದೆಯು ಪಡಿತರ ಚೀಟಿಯಲ್ಲಿನ ಜನಸಂಖ್ಯೆಗೂ ಕಡಿವಾಣ ಹಾಕಲಿದೆ,'' ಎಂದು ಯುಪಿ ರಾಜ್ಯ ಕಾನೂನು ಆಯೋಗದ ಅಧ್ಯಕ್ಷ ನ್ಯಾಯಮೂರ್ತಿ ಎಎನ್ ಮಿತ್ತಲ್ ಇಂಡಿಯಾ ಟುಡೆ ಟಿವಿಗೆ ತಿಳಿಸಿದ್ದಾರೆ.
ಎರಡು ಮಕ್ಕಳ ನೀತಿಯನ್ನು ಅನುಸರಿಸುವ ಸರ್ಕಾರಿ ನೌಕರರು ಸಂಪೂರ್ಣ ಸೇವೆಯ ಸಮಯದಲ್ಲಿ ಎರಡು ಹೆಚ್ಚುವರಿ ಏರಿಕೆಯನ್ನು ಪಡೆಯಬಹುದಾಗಿದೆ. ಜಮೀನು ಅಥವಾ ಮನೆಯನ್ನು ಸಬ್ಸಿಡಿ ಖರೀದಿಸಲು ಸಬ್ಸಿಡಿ ಪಡೆಯಬಹುದಾಗಿದೆ. ಶುಲ್ಕಗಳ ಮೇಲೆ ರಿಯಾಯಿತಿ ಪಡೆಯಬಹುದಾಗಿದೆ. ಹಾಗೆಯೇ ರಾಷ್ಟ್ರೀಯ ಪಿಂಚಣಿ ಯೋಜನೆಯಡಿ ನೌಕರರ ಭವಿಷ್ಯ ನಿಧಿಯಲ್ಲಿ (ಇಪಿಎಫ್) ಮೂರು ಶೇಕಡ ಹೆಚ್ಚಳ ಮೊದಲಾದ ಪ್ರೋತ್ಸಾಹಕ ಯೋಜನೆಗೆ ಅರ್ಹರಾಗಿರುತ್ತಾರೆ. ಒಂದೇ ಮಗುವನ್ನು ಹೊಂದಿರುವವರಿಗೆ ಉದ್ಯೋಗದಲ್ಲಿ ನಾಲ್ಕು ಹೆಚ್ಚುವರಿ ಏರಿಕೆಗಳು ಇರುತ್ತದೆ. 20 ವರ್ಷ ವಯಸ್ಸಿನವರೆಗೆ ಮಗುವಿಗೆ ಉಚಿತ ಆರೋಗ್ಯ ಮತ್ತು ತಮ್ಮ ಮಗುವಿಗೆ ಶಿಕ್ಷಣವನ್ನು ಪಡೆಯಬಹುದಾಗಿದೆ.
''ಸರ್ಕಾರಿ ಸೇವೆಯಲ್ಲಿಲ್ಲದ ಆದರೆ ಎರಡು ಮಕ್ಕಳ ನೀತಿಯನ್ನು ಅನುಸರಿಸುವವರಿಗೆ ನೀರು ಮತ್ತು ವಿದ್ಯುತ್ ಬಿಲ್‌ಗಳು, ಮನೆ ತೆರಿಗೆ, ಗೃಹ ಸಾಲಗಳ ಮೇಲೆ ರಿಯಾಯಿತಿ ನೀಡಲು ಮಸೂದೆಯು ಪ್ರಸ್ತಾಪಿಸಿದೆ. ಹಾಗೆಯೇ ಈ ಮಸೂದೆಯು ಮಹಿಳೆ ಹಾಗೂ ಪುರುಚರಿಬ್ಬರಿಗೂ ಸಂತಾನಹರಣ ಚಿಕಿತ್ಸೆಗೆ ಒಳಗಾಗಲು ಉತ್ತೇಜಿಸುತ್ತದೆ,'' ಎಂದು ಮಿತ್ತಲ್ ಹೇಳಿದರು.
ಕರಡು ಮಸೂದೆಯನ್ನು ಯುಪಿ ಕಾನೂನು ಆಯೋಗದ ಅಧಿಕೃತ ವೆಬ್‌ಸೈಟ್‌ನಲ್ಲಿ ಅಪ್‌ಲೋಡ್ ಮಾಡಲಾಗಿದೆ. ಸಾರ್ವಜನಿಕರಿಂದ ಸಲಹೆಗಳನ್ನು ಪಡೆಯಲಾಗಿದೆ. ಸಲಹೆಗಳನ್ನು ಸಲ್ಲಿಸಲು ಕೊನೆಯ ದಿನಾಂಕ 2021ರ ಜುಲೈ 19 ಆಗಿದೆ.
"ಬಹುಪತ್ನಿತ್ವ ಹಾಗೂ ಬಹುಪತಿತ್ವ ಪ್ರಕರಣಗಳಲ್ಲಿ ಯಾವುದೇ ವಿನಾಯಿತಿ ಇಲ್ಲ. ಇದನ್ನು ಪ್ರಶ್ನಿಸುವವರು ಸರ್ಕಾರವು ತೆರಿಗೆದಾರರ ಹಣವನ್ನು ಎರಡು ಮಕ್ಕಳೊಂದಿಗೆ ಹೂಡಿಕೆ ಮಾಡಲು ಸಾಧ್ಯವಿಲ್ಲ ಎಂದು ತಿಳಿದಿರಬೇಕು," ಎಂದು ತಿಳಿಸಿದ್ದಾರೆ.
ಯೋಗಿ ಆದಿತ್ಯನಾಥ್ ನೇತೃತ್ವದ ಉತ್ತರ ಪ್ರದೇಶ ಸರ್ಕಾರ 2021-2030ಕ್ಕೆ ಹೊಸ ಜನಸಂಖ್ಯಾ ನೀತಿಯನ್ನು ಘೋಷಿಸಲು ಎರಡು ದಿನಗಳ ಮೊದಲು ಕರಡು ಮಸೂದೆಯನ್ನು ಬಿಡುಗಡೆ ಮಾಡಿದೆ. ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಭಾನುವಾರ ನೀತಿಯನ್ನು ಬಿಡುಗಡೆ ಮಾಡಲಿದ್ದಾರೆ.
ಕಳೆದ ತಿಂಗಳು, ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ತಮ್ಮ ಸರ್ಕಾರವು ಕ್ರಮೇಣ ಎರಡು ಮಕ್ಕಳ ನೀತಿಯನ್ನು ಜಾರಿಗೆ ತರುವುದಾಗಿ ಘೋಷಿಸಿದ್ದರು. "ಇದು ಸಾಲ ಮನ್ನಾ ಅಥವಾ ಯಾವುದೇ ಸರ್ಕಾರದ ಯೋಜನೆಯಾಗಿರಲಿ, ನಾವು ನಿಧಾನವಾಗಿ ಈ ಯೋಜನೆಗಳಿಗೆ ಜನಸಂಖ್ಯಾ ನೀತಿಯನ್ನು ಜಾರಿಗೆ ತರುತ್ತೇವೆ. ಚಹಾ ತೋಟ ನೋಡಿಕೊಳ್ಳುವ ಸಮುದಾಯ, ಎಸ್‌ಸಿ, ಎಸ್‌ಟಿ ಸಮುದಾಯಗಳಿಗೆ ಜನಸಂಖ್ಯಾ ಮಾನದಂಡಗಳು ಅನ್ವಯವಾಗುವುದಿಲ್ಲ. ಆದರೆ ಭವಿಷ್ಯದಲ್ಲಿ ಸರ್ಕಾರದಿಂದ ಪ್ರಯೋಜನಗಳನ್ನು ಪಡೆಯುವ ಎಲ್ಲರ ಮೇಲೆ ಹೇರಲಾಗುವುದು. ಏಕೆಂದರೆ ಜನಸಂಖ್ಯೆ ನೀತಿ ಈಗಾಗಲೇ ಅಸ್ಸಾಂನಲ್ಲಿ ಪ್ರಾರಂಭವಾಗಿದೆ," ಎಂದು ಸಿಎಂ ಶರ್ಮಾ ಹೇಳಿದ್ದರು.
''ರಾಜ್ಯದ ಜನಸಂಖ್ಯೆಯು ಸ್ಫೋಟಕ ಹಂತವನ್ನು ತಲುಪುತ್ತಿದೆ. ಹೆಚ್ಚುತ್ತಿರುವ ಜನಸಂಖ್ಯೆಯ ಬಗ್ಗೆ ಪರಿಶೀಲನೆ ನಡೆಸಬೇಕಾಗಿದೆ. ಈ ಪರಿಶೀಲನೆಯ ಮೂಲಕ ಜನರು ಸರ್ಕಾರಿ ಸೌಲಭ್ಯಗಳು ಮತ್ತು ಸಂಪನ್ಮೂಲಗಳನ್ನು ಪಡೆಯಬಹುದಾಗಿದೆ,'' ಎಂದು ಉತ್ತರ ಪ್ರದೇಶದ ಕಾನೂನು ಆಯೋಗದ ಅಧ್ಯಕ್ಷ ಆದಿತ್ಯ ನಾಥ್ ಮಿತ್ತಲ್ ಈ ಹಿಂದೆ ಹೇಳಿದ್ದರು. ಹೇಳಿದ್ದಾರೆ.