ಮದುವೆ ದಿನಾಂಕ ಘೋಷಿಸಿದ್ರಾ ಧನಂಜಯ್? ಮೋಹಕ ತಾರೆ ರಮ್ಯಾಗೂ ಇದೇ ಅನುಮಾನ!

ಮದುವೆ ದಿನಾಂಕ ಘೋಷಿಸಿದ್ರಾ ಧನಂಜಯ್? ಮೋಹಕ ತಾರೆ ರಮ್ಯಾಗೂ ಇದೇ ಅನುಮಾನ!

ಟ ಧನಂಜಯ್ ಸಾಲು ಸಾಲು ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ನಟನೆಯ ಜೊತೆಗೆ ತಮ್ಮದೇ ಡಾಲಿ ಪಿಕ್ಚರ್ಸ್ ಬ್ಯಾನರ್‌ನಲ್ಲಿ ವಿಭಿನ್ನ ಸಿನಿಮಾಗಳನ್ನು ನಿರ್ಮಾಣ ಮಾಡುತ್ತಿದ್ದಾರೆ. ಇದೀಗ ಒಂದು ಸ್ಪೆಷಲ್ ವಿಡಿಯೋ ರಿಲೀಸ್ ಮಾಡಿ ಧನು ಕುತೂಹಲ ಕೆರಳಿಸಿದ್ದಾರೆ. 12 - 1 = 23 ಎನ್‌ ಇರ್ಬೋದು ?

ಎಂದು ಕೇಳಿದ್ದಾರೆ.

ಈ ಪ್ರಶ್ನೆಗೆ ಉತ್ತರ ಏನು? ಎಂದು ಅಭಿಮಾನಿಗಳು ತಲೆ ಕೆಡಿಸಿಕೊಂಡಿದ್ದಾರೆ. ಒಬ್ಬಬ್ಬರು ಒಂದೊಂದು ರೀತಿ ಕಾಮೆಂಟ್ ಮಾಡುತ್ತಿದ್ದಾರೆ. ಆದರೆ ಯಾರೊಬ್ಬರು ಆ ರಹಸ್ಯ ಏನು ಎನ್ನುವುದನ್ನು ಭೇದಿಸೋಕೆ ಸಾಧ್ಯವಾಗಿಲ್ಲ. ಧನಂಜಯ ಇದ್ದಕ್ಕಿಂದಂತೆ ಪ್ಯಾಡ್ ತಗೊಂಡು ಏನೇನೋ ಗೀಚಿದ್ದಾರೆ. ಏನಪ್ಪಾ ಇದು ಎಂದು ಅವರ ಸ್ನೇಹಿತರು ಕೂಡ ತಲೆಗೆ ಹುಳ ಬಿಟ್ಟುಕೊಂಡಿದ್ದಾರೆ. ಡಾಲಿ ಅತ್ತ ಹೋಗುತ್ತಿದ್ದಂತೆ ಅದೇನು ಬರೆದಿದ್ದಾರೆ ಎಂದು ನೋಡಿದ್ದಾರೆ. ಏನೇನೋ ಫಾರ್ಮುಲಾಗಳನ್ನೆಲ್ಲಾ ಬರೆದು ಕೊನೆಗೆ ಮಧ್ಯದಲ್ಲಿ ಫೈನಲ್ 12 - 1 = 23 ಎಂದು ಬರೆದಿದ್ದಾರೆ.