ಬಿಡುಗಡೆಯಾದ 24 ಗಂಟೆಗಳಲ್ಲಿ ಅತಿಹೆಚ್ಚು ಲೈಕ್ಸ್ ಪಡೆದ ಹಾಡುಗಳು; ಧರಣಿಗೆ ಎಷ್ಟನೇ ಸ್ಥಾನ?

ಕ್ರಾಂತಿ ಚಿತ್ರ ಬಿಡುಗಡೆಗೆ ದಿನಗಣನೆ ಆರಂಭವಾಗಿದೆ. ಮುಂದಿನ ಜನವರಿ 26ರಂದು ಗಣರಾಜ್ಯೋತ್ಸನದ ಪ್ರಯುಕ್ತ ದರ್ಶನ್ ಅಭಿನಯದ ಈ ಬಹುನಿರೀಕ್ಷಿತ ಚಿತ್ರ ಬೆಳ್ಳೆ ತೆರೆಗೆ ಅಪ್ಪಳಿಸಲಿದೆ. ಈ ಹಿಂದೆ ಯಶಸ್ಸು ಕಂಡಿದ್ದ ಯಜಮಾನ ಬಳಿಕ ವಿ ಹರಿಕೃಷ್ಣ ಹಾಗೂ ದರ್ಶನ್ ಕಾಂಬಿನೇಶನ್ನಲ್ಲಿ ಚಿತ್ರ ಮೂಡಿ ಬರುತ್ತಿರುವ ಕಾರಣ ಕ್ರಾಂತಿ ಮೇಲಿನ ನಿರೀಕ್ಷೆ ಹೆಚ್ಚಾಗಿದ್ದು, ಮತ್ತೊಂದೆಡೆ ರಾಬರ್ಟ್ ಚಿತ್ರದ ಬಳಿಕ ಸುಮಾತು ಇಪ್ಪತ್ತು ತಿಂಗಳ ಬಳಿಕ ಬಿಡುಗಡೆಯಾಗುತ್ತಿರುವ ದರ್ಶನ್ ಅಭಿನಯದ ಚಿತ್ರ ಎಂಬ ಕಾರಣಕ್ಕೆ ಮತ್ತಷ್ಟು ಹೈಪ್ ಹೆಚ್ಚಿಸಿದೆ.
ಇನ್ನು ಕ್ರಾಂತಿ ಚಿತ್ರತಂಡ ಹಾಡುಗಳ ಮೂಲಕ ಚಿತ್ರದ ಹೈಪ್ ಹೆಚ್ಚಿಸುವ ಕೆಲಸಕ್ಕೆ ಕೈಹಾಕಿದ್ದು, ಕಳೆದ ಡಿಸೆಂಬರ್ 10ರಂದು ಚಿತ್ರದ ಮೊದಲ ಹಾಡು ಧರಣಿ ಥೀಮ್ ಅನ್ನು ಬಿಡುಗಡೆಗೊಳಿಸಿತು. ಕನ್ನಡ, ತೆಲುಗು, ತಮಿಳು, ಮಲಯಾಳಂ ಹಾಗೂ ಹಿಂದಿ ಭಾಷೆಗಳಲ್ಲಿ ಈ ಹಾಡನ್ನು ಚಿತ್ರತಂಡ ಬಿಡುಗಡೆಗೊಳಿಸಿದ್ದು, ಮತ್ತೊಮ್ಮೆ ವಿ ಹರಿಕೃಷ್ಣ ಹಾಗೂ ದರ್ಶನ್ ಕಾಂಬಿನೇಶನ್ ಕ್ಲಿಕ್ ಆಗಿದೆ.ವಿ ನಾಗೇಂದ್ರ ಪ್ರಸಾದ್ ಬರೆದಿರುವ ಸಾಲುಗಳು ವೀಕ್ಷಕರ ಹೃದಯ ಗೆದ್ದಿದ್ದು, ಹಾಡು ಹಿಟ್ ಆಗಿದೆ. ಇನ್ನು ಕ್ರಾಂತಿ ಚಿತ್ರದ ಧರಣಿ ಹಾಡು ಮೊದಲ 24 ಗಂಟೆಗಳಲ್ಲಿ 2.3 ಮಿಲಿಯನ್ ವೀಕ್ಷಣೆಗಳನ್ನು ಪಡೆದುಕೊಂಡಿದೆ. ಇನ್ನು ಉತ್ತಮ ವೀಕ್ಷಣೆ ಮಾತ್ರವಲ್ಲದೇ ಹೆಚ್ಚು ಲೈಕ್ಗಳನ್ನೂ ಸಹ ಧರಣಿ ಹಾಡು ಪಡೆದುಕೊಂಡಿದ್ದು, ಬಿಡುಗಡೆಯಾದ 24 ಗಂಟೆಗಳಲ್ಲಿ ಅತಿಹೆಚ್ಚು ಲೈಕ್ಸ್ ಪಡೆದ ಕನ್ನಡದ ಲಿರಿಕಲ್ ಹಾಡುಗಳ ಟಾಪ್ 5 ಪಟ್ಟಿಯಲ್ಲಿ ಎರಡನೇ ಸ್ಥಾನ ಗಿಟ್ಟಿಸಿಕೊಳ್ಳುವಲ್ಲಿ ಯಶಸ್ವಿಯಾಗಿದೆ. ಹಾಗಿದ್ದರೆ ಬಿಡುಗಡೆಗೊಂಡ 24 ಗಂಟೆಗಳಲ್ಲಿ ಅತಿಹೆಚ್ಚು ಲೈಕ್ಸ್ ಗಿಟ್ಟಿಸಿಕೊಂಡ ಕನ್ನಡದ ಲಿರಿಕಲ್ ಹಾಡುಗಳ ಪೈಕಿ ಅತಿಹೆಚ್ಚು ಲೈಕ್ಸ್ ಪಡೆದುಕೊಂಡ ಹಾಡುಗಳು ಯಾವುವು ಎಂಬುದರ ಮಾಹಿತಿ ಈ ಕೆಳಕಂಡಂತಿದೆ..