ಭಕ್ತಾಧಿಗಳ ಗಮನಕ್ಕೆ: ಕೊಟ್ಟೂರು ಗುರುಬ್ರಹ್ಮ ರಥೋತ್ಸವಕ್ಕೆ ವಿಶೇಷ ರೈಲು ವ್ಯವಸ್ಥೆ

ಭಕ್ತಾಧಿಗಳ ಗಮನಕ್ಕೆ: ಕೊಟ್ಟೂರು ಗುರುಬ್ರಹ್ಮ ರಥೋತ್ಸವಕ್ಕೆ ವಿಶೇಷ ರೈಲು ವ್ಯವಸ್ಥೆ

ಹುಬ್ಬಳ್ಳಿ : ವಿಜಯನಗರ ಜಿಲ್ಲೆಯ ಅದ್ದೂರಿ ಕೊಟ್ಟೂರು ಜಾತ್ರೆ ಮತ್ತು ರಥೋತ್ಸವ ಹಿನ್ನಲೆ ಬಳ್ಳಾರಿ ಸಂಸದ ವೈ ದೇವೇಂದ್ರಪ್ಪ ಅವರ ಮನವಿ ಮೇರೆಗೆ ಇಂದಿನಿಂದ 6 ದಿನಗಳ ಕಾಲ ಹುಬ್ಬಳ್ಳಿಯಿಂದ ಹೊಸಪೇಟೆಗೆ ವಿಶೇಷ ರೈಲು ವ್ಯವಸ್ಥೆ ಕಲ್ಪಿಸಲಾಗಿದೆ.

ಕೊಟ್ಟೂರು ಜಾತ್ರೆ ಮತ್ತು ರಥೋತ್ಸವ ಲಕ್ಷಾಂತರ ಸೇರುವ ದೃಷ್ಟಿಯಿಂದಾಗಿ ನೈರುತ್ಯ ರೈಲ್ವೆ ವಲಯದ ಟ್ರೈನ್ ನಂಬರ್ 07339/07340 ಹುಬ್ಬಳ್ಳಿ ಹೊಸಪೇಟೆ ಮಾರ್ಗದ ರೈಲು ಪ್ರತೀ ದಿನ ಬೆಳಗ್ಗೆ 6:15ಕ್ಕೆ ಹುಬ್ಬಳ್ಳಿಯಿಂದ ಹೊರಟು ಮಧ್ಯಾಹ್ನ 1:45ಕ್ಕೆ ಹೊಸಪೇಟೆ ತಲುಪುತ್ತದೆ. ಮಧ್ಯಾಹ್ನ 3ಕ್ಕೆ ಹೊಸಪೇಟೆಯಿಂದ ವಾಪಸ್ ಹೊರಡುವ ರೈಲು ರಾತ್ರಿ 10:50ಕ್ಕೆ ಹುಬ್ಬಳ್ಳಿ ತಲುಪುತ್ತದೆ. ಇದು ಜಾತ್ರೆಗೆ ಬರುವ ಭಕ್ತಾಧಿಗಳಿ ಬಹಳ ಅನುಕೂಲವಾಗಲಿದೆ.

ಪ್ರಸಿದ್ದ ಕೊಟ್ಟೂರು ಜಾತ್ರೆಗಾಗಿಯೇ ಫೆಬ್ರುವರಿ 15ರಿಂದ 20ವರೆಗೂ ಸಂಚರಿಸುವ ಈ ರೈಲು ಹುಬ್ಬಳ್ಳಿಯಿಂದ ಯಳವಗಿ, ಹಾವೇರಿ, ಬ್ಯಾಡಗಿ, ರಾಣೆಬೆನ್ನೂರ, ಹರಿಹರ, ದಾವಣಗೆರೆ, ತೊಳಹುಣಸಿ, ಅಮರಾವತಿಕಾಲೊನಿ, ತೆಲಗಿ, ಹರಪನಹಳ್ಳಿ, ಬೆನೆಹಳ್ಳಿ, ಕೊಟ್ಟೂರು, ಮಳವಿ, ಹಗರಿಬೊಮ್ಮನಹಳ್ಳಿ, ಹಂಪಪಟ್ಟಣ, ಮಾರಿಯಮನಹಳ್ಳಿ, ವ್ಯಾಸ ಕಾಲೊನಿ, ತುಂಗಭದ್ರ ಅಣೆಕಟ್ಟು ಮತ್ತು ನಂತರ ಹೊಸಪೇಟೆಗೆ ಈ ರೈಲು ನಿಲುಗಡೆ ಇರುತ್ತದೆ ಎಂದು ಮಾಹಿತಿ ನೀಡಿದ್ದಾರೆ. ರೈಲು ಸಂಚಾರ ವ್ಯವಸ್ಥೆ ಕಲ್ಪಿಸಿದ ನಿಟ್ಟಿನಲ್ಲಿ ಈ ಬಾರಿ ಪ್ರತಿ ವರ್ಷಕ್ಕಿಂತ ಹೆಚ್ಚಿನ ಸಂಖ್ಯೆಯಲ್ಲಿ ಜನರು ಸೇರುವ ಸಾಧ್ಯತೆಯಿದೆ.