ಬೆಂಗಳೂರಿನ ಏರ್ ಶೋನಲ್ಲಿ 90 ದೇಶಗಳ 809 ಕಂಪನಿ ಭಾಗಿ!

ಪ್ರತಿಷ್ಟಿತ ಬೆಂಗಳೂರಿನ ಏರ್ ಶೋಗೆ ಪ್ರಧಾನಿ ನರೇಂದ್ರ ಮೋದಿ ಸೋಮವಾರ ಚಾಲನೆ ನೀಡಿದ್ದಾರೆ.
ರನ್ ವೇ ಫಾರ್ ದಿ ಬಿಲಿಯನ್ ಆಪರ್ಚೂನಿಟಿಸ್ (ನೂರಾರು ಅವಕಾಶಗಳ ರಹದಾರಿ? ಎಂಬ ಶೀರ್ಷಿಕೆ ಅಡಿ 2023ರ ಏರ್ ಶೋ 5 ದಿನಗಳ ಕಾಲ ಬೆಂಗಳೂರಿನ ಯಲಹಂಕ ವಾಯುನೆಲೆಯಲ್ಲಿ ನಡೆಯಲಿದೆ.
ಏರ್ ಶೋ ವೇಳೆ ಹಲವಾರು ರಕ್ಷಣಾ ಹಾಗೂ ವಿಮಾನ ಉತ್ಪಾದಕ ಸಂಸ್ಥೆಗಳ ನಡುವೆ ವ್ಯಾಪಾರ- ವಹಿವಾಟು ನಡೆಯಲಿದೆ.
ಏರ್ ಶೋದಲ್ಲಿ ಕನಿಷ್ಠ 254 ಒಪ್ಪಂದಗಳು ನಡೆಯಲಿದ್ದು ಸುಮಾರು 75 ಸಾವಿರ ಕೋಟಿ ರೂ. ವಹಿವಾಟು ನಡೆಯುವ ನಿರೀಕ್ಷೆ ಹೊಂದಲಾಗಿದೆ.
ಏರ್ ಇಂಡಿಯಾ ಈ ಶೋದಲ್ಲಿ 500 ವಿಮಾನಗಳ ಖರೀದಿ ಕುರಿತು ಅಧಿಕೃತ ಹೇಳಿಕೆ ನೀಡುವ ಸಾಧ್ಯತೆ ಇದೆ