ಬೆಂಗಳೂರಿನಲ್ಲಿ ಸೈಟ್‌ ಕೊಡಿಸುವುದಾಗಿ ನಂಬಿಸಿ ವಂಚನೆ ಮಾಡುತ್ತಿದ್ದ ಆರೋಪಿಯ ಬಂಧನ

ಬೆಂಗಳೂರಿನಲ್ಲಿ ಸೈಟ್‌ ಕೊಡಿಸುವುದಾಗಿ ನಂಬಿಸಿ ವಂಚನೆ ಮಾಡುತ್ತಿದ್ದ ಆರೋಪಿಯ ಬಂಧನ

ಬೆಂಗಳೂರು: ನಗರದಲ್ಲಿ ವಂಚನೆ, ಸುಲಿಗೆ , ದೌರ್ಜನ್ಯ ಹೆಚ್ಚಾಗುತ್ತಿದೆ. ಇದೀಗ ನಗರದಲ್ಲಿ ಮತ್ತೊಂದು ಪ್ರಕರಣ ಬೆಳಕಿಗೆ ಬಂದಿದೆ. ಸೈಟ್‌ ಕೊಡಿಸುವುದಾಗಿ ನಂಬಿಸಿ ವಂಚನೆ ಮಾಡುತ್ತಿದ್ದ ಆಂದ್ರಪ್ರದೇಶದ ವ್ಯಕ್ತಿಯನ್ನು ಪೊಲೀಸರು ಬಂಧಿಸಿದ್ದಾರೆ.

ಈತ ಆಂದ್ರಪ್ರದೇಶದ ಮೂಲದ ವಿನೋದ್ ಕುಮಾರ್ ರೆಡ್ಡಿ ಎಂಬಾತ ವಂಚನೆ ಮಾಡುತ್ತಿದ್ದ.ಸೈಟ್ ಮಾರಾಟದ ಜಾಹಿರಾತು ಹಾಕಿದ್ದವರಿಗೆ ಕರೆ ಮಾಡುವ ಮೂಲಕ , ಸೈಟ್ ಕೊಂಡುಕೊಳ್ಳುವುದಾಗಿ ತಿಳಿಸಿ ಮೀಟಿಂಗ್ ಫೀಕ್ಸ್ ಮಾಡುತ್ತಿದ್ದನು. ಬಳಿಕಸೈಟ್ ಜಾಗಕ್ಕೆ ಬಂದು ಸೈಟ್ ನೋಡಿ ಡೀಲ್ ಖುದುರಿಸುತಿದ್ದ. ಬಳಿಕ ಫೋನ್ ಪೇ ಮೂಲಕ ಅಥವಾ ಆನ್ಲೈನ್ ಬ್ಯಾಂಕಿಂಗ್ ಮೂಲಕ ಅಡ್ವಾನ್ಸ್ ಹಣ ಹಾಕುವುದಾಗಿ ಹೇಳಿ ಬ್ಯಾಂಕ್ ಮಾಹಿತಿ ಪಡೆದ ಬಳಿಕ ಇದು ಯಾಕೊ ಸರಿ ಆಗುತ್ತಿಲ್ಲ ಎಂದು ಸೈಟ್​ ಮಾಲಿಕರ ಮೊಬೈಲ್ ಪಡೆದು ಚೆಕ್ ಮಾಡಲು ಮುಂದಾಗುತ್ತಿದ್ದ.

ಈ ವೇಳೆಯಲ್ಲಿ ಮೊಬೈಲ್​ನ ಪಾಸ್ವರ್ಡ್ ಹಾಗೂ ಫೋನ್ ಪೇ ಪಾಸ್ವರ್ಡ್ ಪಡೆದುಕೊಂಡು ಮೆತ್ತಗೆ ಮೊಬೈಲ್ ಸಹಿತ ಎಸ್ಕೇಪ್ ಆಗುತ್ತಿದ್ದ.
ಪೀಣ್ಯದಲ್ಲಿ ಸೈಟ್ ನೋಡುವುದಾಗಿ ಬಂದು ವಂಚಿಸಿದ್ದ. ಈ ಬಗ್ಗೆ ಈಶಾನ್ಯ ವಿಭಾಗ ಸಿಇಎನ್ ಪೊಲೀಸ್ ಠಾಣೆ ಯಲ್ಲಿ ಕೇಸ್ ದಾಖಲಾಗಿತ್ತು. ಇದೀಗ ಅರೋಪಿಯನ್ನ ಬಂಧಿಸಿ ಹಲವಾರು ಜನರಿಗೆ ವಂಚಿಸಿದ್ದ 1.40 ಲಕ್ಷ ನಗದು, ಒಂದು ಮೊಬೈಲ್‌ ಅನ್ನು ವಶಕ್ಕೆ ಪಡೆದಿದ್ದಾರೆ.