ಬೆಂಗಳೂರಲ್ಲಿ 'ಅಪರಾಧ ಪ್ರಕರಣಗಳು ಹೆಚ್ಚಳ' : 2000 ಪೊಲೀಸರ ನಿಯೋಜಿಸಿದ 'ರಾಜ್ಯ ಸರ್ಕಾರ'

ಬೆಂಗಳೂರಲ್ಲಿ 'ಅಪರಾಧ ಪ್ರಕರಣಗಳು ಹೆಚ್ಚಳ' : 2000 ಪೊಲೀಸರ ನಿಯೋಜಿಸಿದ 'ರಾಜ್ಯ ಸರ್ಕಾರ'

ಬೆಂಗಳೂರು: ಸಿಲಿಕಾನ್‌ ಸಿಟಿ ಬೆಂಗಳೂರಿನಲ್ಲಿ ದಿನದಿಂದ ದಿನಕ್ಕೆ ಅಪರಾಧ ಪ್ರಕರಣ ಹೆಚ್ಚಳವಾಗಿರುವ ಹಿನ್ನೆಲೆ ಭದ್ರತೆ ನಿಟ್ಟಿನಲ್ಲಿ ರಾಜ್ಯ ಸರ್ಕಾರ 2000 ಪೊಲೀಸರನ್ನು ನಿಯೋಜನೆ ಮಾಡಲಾಗಿದೆ ಎಂದು ವರದಿಯಾಗಿದೆ.

ಕಾನೂನು ಸುವ್ಯವಸ್ಥೆಯನ್ನ ಕಾಪಾಡುವ ನಿಟ್ಟಿನಲ್ಲಿ ಬೆಂಗಳೂರು ನಗರಕ್ಕೆ 2000 ಪೊಲೀಸರನ್ನು ನಿಯೋಜಿಸುವ ಮಹತ್ವದ ನಿರ್ಧಾರವನ್ನು ರಾಜ್ಯ ಸರ್ಕಾರ ಕೈಗೊಂಡಿದಕ್ಕೆ ಬೆಂಗಳೂರು ನಗರ ಪೊಲೀಸ್ ಆಯುಕ್ತ ಪ್ರತಾಪ್ ರೆಡ್ಡಿ ತಮ್ಮ ಅಧಿಕೃತ ಟಿಟ್ಟರ್‌ ಖಾತೆಯ ಮೂಲಕ ಧನ್ಯವಾದ ತಿಳಿಸಿದ್ದಾರೆ.

ಮುಂದಿನ ದಿನಗಳಲ್ಲಿ ಬೆಂಗಳೂರು ನಗರಕ್ಕೆ 2000 ಪೊಲೀಸರನ್ನು ನಿಯೋಜಿಸೋದ್ರಿಂದ ಬೆಂಗಳೂರು ಪೊಲೀಸ್ ಇಲಾಖೆಯಲ್ಲಿ ಶೇ 11% ಪ್ರತಿಶತದಷ್ಟು ಪೊಲೀಸ್ ಸಿಬ್ಬಂದಿ ಸಂಖ್ಯೆ ಏರಿಕೆಯಾಗಲಿದೆ ಅಷ್ಟೇ ಅಲ್ಲದೇ ನಗರದಲ್ಲಿ ಅಪರಾಧಗಳನ್ನು ತಡೆಗಟ್ಟಲು ರಾಜ್ಯ ಸರ್ಕಾರರ ಬಜೆಟ್ ನಲ್ಲಿ 20 ಪೊಲೀಸ್ ಠಾಣೆಗಳನ್ನ ತೆರೆಯಲು ಹಣ ಮೀಸಲಿಡಲಾಗಿದೆ ಎಂದು ಬೆಂಗಳೂರು ನಗರ ಪೊಲೀಸ್ ಆಯುಕ್ತ ಪ್ರತಾಪ್ ರೆಡ್ಡಿ ಅವರು ಟ್ವೀಟ್‌ ಮೂಲಕ ಮಾಹಿತಿ ನೀಡಿದ್ದಾರೆ.

ಮುಂದಿನ ದಿನಗಳಲ್ಲಿ ಬೆಂಗಳೂರಿನಲ್ಲಿ ಅಪರಾಧ ಪ್ರಕರಣಗಳು ಕಡಿಮೆ ಮಾಡಲು ರಾಜ್ಯ ಸರ್ಕಾರ ರಣತಂತ್ರ ರೂಪಿಸುತ್ತಿದ್ದು, ಮುಂದಿನ ಅಪರಾಧಗಳಾದ ಕೊಲೆ, ಅತ್ಯಾಚಾರ, ಸೇರಿದಂತೆ ಹಲವು ಪ್ರಕರಣಗಳ ವಿರುದ್ಧ ಪೊಲೀಸರು ಹದ್ದಿಕಣ್ಣು ಇಡಲಿದ್ದಾರೆ. ಮುಂದಿನ ದಿನಗಳಲ್ಲಿ ಅಪರಾಧ ಪ್ರಕರಣಗಳು ಕಡಿಮೆಯಾಗುತ್ತ ಅನ್ನೋದನ್ನು ಕಾದು ನೋಡಬೇಕಾಗಿದೆ.