ಬೆಂಗಳೂರಲ್ಲಿ ಅನುಮತಿಯಿಲ್ಲದೇ ಸಭೆ ನಡೆಸಿದ ಶಾಸಕ ಎಂ.ಪಿ ರೇಣುಕಾಚಾರ್ಯ: ʼನೀತಿ ಸಂಹಿತೆ ಉಲ್ಲಂಘನೆ ಕೇಸ್ ಫಿಕ್ಸ್

ಬೆಂಗಳೂರು : ಕರ್ನಾಟಕ ರಾಜ್ಯ ವಿಧಾನಸಭಾ ಚುನಾವಣೆಯ ದಿನಾಂಕ ಫಿಕ್ಸ್ ಆಗುತ್ತಿದ್ದಂತೆ ಕೇಂದ್ರ ಚುನಾವಣಾ ಆಯೋಗ ನೀತಿ ಸಂಹಿತೆ ಜಾರಿಗೊಳಿಸಿದ್ದು, ಇಂದು ನಗರದ ಗುರುರಾಜ ಕಲ್ಯಾಣಮಂಟಪದಲ್ಲಿ ಅನುಮತಿಯಿಲ್ಲದೆ ಶಾಸಕ ಎಂ.ಪಿ ರೇಣುಕಾಚಾರ್ಯ ಸಭೆ ನಡೆಸಿದ್ದು, ನೀತಿ ಸಂಹಿತೆ ಉಲ್ಲಂಘನೆ ಕೇಸ್ ಬೀಳುವ ಸಾಧ್ಯತೆಯಿದೆ .
ರೇಣುಕಾಚಾರ್ಯ ಅವರು ಸಭೆ ನಡೆಸಲು ಚುನಾವಣಾ ಆಯೋಗ ಹಾಗೂ ಸಂಬಂಧಪಟ್ಟ ಠಾಣೆಯಲ್ಲಿ ಅನುಮತಿ ಪಡೆಯದ ಹಿನ್ನೆಲೆ ಕಾರ್ಯಕ್ರಮಕ್ಕೆ ಎಂಟ್ರಿ ಕೊಟ್ಟು ಕಾರ್ಯಕ್ರಮ ನಿಲ್ಲಿಸಲು ಮುಂದಾಗಿದ್ದಾರೆ.
ಬಳಿಕ ಕಾರ್ಯಕ್ರಮದಲ್ಲಿ ರೇಣುಕಾಚಾರ್ಯ ಅವರು ಮಾತು ಮುಂದುವರಿಸಲು ಯತ್ನಿಸಿದಾಗ ಅಧಿಕಾರಿಗಳು ಮೈಕ್ ಕಿತ್ತುಕೊಳ್ಳಲು ಮುಂದಾಗುತ್ತಿದ್ದಂತೆ ಸ್ವಲ್ಪ ಇರಿ ಎಂದು ಭಾಷಣ ಮುಂದುವರಿಸಿ, ಕಾರ್ಯಕ್ರಮವನ್ನು ಅರ್ಧಕ್ಕೆ ಕೊನೆ ಗೊಳಿಸುವುದಾಗಿ ಸೇರಿದ ಜನರಿಗೆ ತಿಳಿಸಿದ್ದಾರೆ ಹೀಗಾಗಿ ನೀತಿ ಸಂಹಿತೆ ಉಲ್ಲಂಘನೆ ಕೇಸ್ ಬೀಳುವುದು ಸಾಧ್ಯತೆಯಿದೆ.