ಬಿಸಿಸಿಐನ ಅಧ್ಯಕ್ಷರಾಗಿ ಕನ್ನಡಿಗ ರೋಜರ್ ಬಿನ್ನಿ ಆಯ್ಕೆ

ಬಿಸಿಸಿಐನ ಅಧ್ಯಕ್ಷರಾಗಿ ಕನ್ನಡಿಗ ರೋಜರ್ ಬಿನ್ನಿ ಆಯ್ಕೆ

ಮುಂಬೈ, ಅ,18: ಭಾರತದ ಶ್ರೀಮಂತ ಕ್ರೀಡಾ ಸಂಸ್ಥೆ ಬಿಸಿಸಿಐನ ನೂತನ ಅಧ್ಯಕ್ಷರಾಗಿ ಕನ್ನಡಿಗ ರೋಜರ್ ಬಿನ್ನಿ ಆಯ್ಕೆಯಾಗಿದ್ದಾರೆ ಮುಂಬೈನಲ್ಲಿಂದು ಬಿಸಿಸಿಐನ ಅಧಿಕಾರಿಗಳಿ ಅಧಿಕೃತವಾಗಿ ಘೋಷಣೆ ಮಾಡಿದ್ದು ಸೌರವ್‍ಗಂಗೋಲಿಯವರ ಸ್ಥಾನವನ್ನ ರೋಜರ್ ಬಿನ್ನಿ ಅಲಂಕರಿಸಲಿದ್ದಾರೆ.

1983 ರ ವಿಶ್ವಕಪ್ ಗೆದ್ದಿದ್ದ ಭಾರತ ತಂಡದ ಸದಸ್ಯರಾಗಿದ್ದ ರೋಜರ್ ಬಿನ್ನಿ ಬಿಸಿಸಿಐನಲ್ಲಿ ಹುದ್ದೆಗಳನ್ನ ಅಲಂಕರಿಸಿ ಈಗ ಅದರ ಚುಕ್ಕಾಣಿ ಹಿಡಿದಿದ್ದಾರೆ. ಅಧ್ಯಕ್ಷ ಸ್ಥಾನಕ್ಕೆ ನಡೆದದಿದ್ದ ಚುನಾವಣೆಯಲ್ಲಿ ಬಿನ್ನಿ ಒಬ್ಬರೆ ನಾಮಪತ್ರ ಸಲ್ಲಿಸಿದ್ದರು ಈಗ ಬಿಸಿಸಿಐನ 36 ನೇ ಅಧ್ಯಕ್ಷ ಸ್ಥಾನಕ್ಕೆ ಆಯ್ಕೆಯಾಗಿದ್ದಾರೆ.

ಕರ್ನಾಟಕ ರಾಜ್ಯ ಕ್ರಿಕೇಟ್ ಸಂಸ್ಥೆಯ (ಕೆಎಸ್‍ಸಿಎ) ಅಧ್ಯಕ್ಷರು ಆಗಿರುವ ಬಿನ್ನಿ ಅವರು ಈ ಸ್ಥಾನಕ್ಕೆ ರಾಜೀನಾಮೆ ನೀಡಿ ಬಿಸಿಸಿಐನ ಬಿಗ್ ಬಾಸ್ ಸ್ಥಾನಕ್ಕೆ ಕೂರಲಿದ್ದಾರೆ. ನವದೆಹಲಿಯಲ್ಲಿ ಕಳೆದ ಒಂದು ವಾರದಿಂದ ಸೌರವ್‍ಗಂಗೋಲಿಯವರು ಅಧ್ಯಕ್ಷ ಸ್ಥಾನದಲ್ಲಿ ಮುಂದುವರಿಯು ಕುರಿತಂತೆ ಸದರಿ ಸಭೆಯನ್ನು ನಡೆಸಿದ್ದರು.

ಆದರೆ ಕೊನೆ ಕ್ಷಣದಲ್ಲಿ ಮನಸು ಬದಲಿಸಿ ಬಂಗಾಳ ಕ್ರಿಕೇಟ್ ಸಂಸ್ಥೆಗೆ ಅಧ್ಯಕ್ಷ ಸ್ಥಾನಕ್ಕೆ ಸಮರ್ಪಿಸುವುದು ಖಚಿತವಾಗಿತ್ತು. ಇದರ ನಡುವೆ ಐಪಿಎಲ್‍ನ ಅಧ್ಯಕ್ಷ ಸ್ಥಾನಕ್ಕೂ ಆಫರ್ ನೀಡಲಾಗಿದ್ದು, 67 ವರ್ಷದ ಬಿನ್ನ್ಷಿ ಅವರು ಅಧ್ಯಕ್ಷ ಸ್ಥಾನಕ್ಕೆ ಏರಿದ ನಂತರ ದೊಡ್ಡ ಸವಾಲುಗಳು ಅವರ ಮುಂದಿದೆ.

ಭಾರತದಲ್ಲಿ ನಡೆಯಲಿರುವ ಐಸಿಸಿ ಏಕದಿನ ವಿಶ್ವಕಪ್ ಕಿಕೇಟ್ ಪಂದ್ಯಾವಳಿ ಸುಸೂತ್ರವಾಗಿ ನಡೆಸುವುದು ಪ್ರಸಾರ ಹಕ್ಕಿನ ತೆರಿಗೆ ಸಮಸ್ಯೆ ಪ್ರಮುಖವಾಗಿದೆ. ಬಿಸಿಸಿಐನ ಕಾರ್ಯದರ್ಶಿಯಾಗಿ ಜೈಷಾ ಅವರು ಮುಂದುವರಿಯುವ ಸಾಧ್ಯತೆ ಇದ್ದು ಆಟಗಾರರ ಆಯ್ಕೆ ಸಮಿತಿ ಹಾಗೂ ಖಜಾಂಚಿ ಸ್ಥಾನದ ಮೇಲೆ ಹಲವರು ಕಣ್ಣಿಟ್ಟಿದ್ದಾರೆ.