ಬಿಬಿಎಂಪಿ ಗುಂಡಿಗೆ ಮತ್ತೊಂದು ಬಲಿ : KSRTC ಬಸ್ ಹರಿದು, ಮಹಿಳೆ ಚಿಕಿತ್ಸೆ ಫಲಿಸದೆ ಸಾವು
ಬೆಂಗಳೂರು : ಸಿಲಿಕಾನ್ ಸಿಟಿಯ ಬಿಬಿಎಂಪಿ ಗುಂಡಿಗೆ ಮತ್ತೊಂದು ಬಲಿಯಾಗಿದ್ದು, ಗುಂಡಿ ತಪ್ಪಿಸಲು ಹೋಗಿ ಸ್ಕೂಟಿಯಿಂದ ತಾಯಿ - ಮಗಳು ಬಿದ್ದ ಪರಿಣಾಮ, ಚಿಕಿತ್ಸೆ ಫಲಿಸದೇ ಗಂಭೀರ ಗಾಯಗೊಂಡ ತಾಯಿ ಸಾವನ್ನಪ್ಪಿದ ಘಟನೆ ಬೆಳಕಿ
ಬೆಂಗಳೂರಿನ ಸುಜಾತ ಥಿಯೇಟರ್ ಬಳ ಬೆಳ್ಳಂಬೆಳಗ್ಗೆ ಸ್ಕೂಟಿಯಿಂದ ತಾಯಿ - ಮಗಳು ಸಂಚರಿಸುತ್ತಿದ್ದರು ಈ ಸಂದರ್ಭದಲ್ಲಿ ಗುಂಡಿ ತಪ್ಪಿಸೋದಕ್ಕೆ ಹೋದಾಗ ಹಿಂಬದಿಯಿಂದ ಕೆಎಸ್ಆರ್ಟಿಸಿ ಹರಿದು ಗಂಭೀರ ಗಾಯಗೊಂಡಿದ್ದರು. ತಕ್ಷಣ ಇಬ್ಬರನ್ನು ಸ್ಥಳೀಯ ಆಸ್ಪತ್ರೆ ದಾಖಲಿಸಿದ್ದರು. ಆದರೂ ಚಿಕಿತ್ಸೆ ಫಲಿಸದೇ ತಾಯಿ ಉಮಾ ಸಾವನ್ನಪ್ಪಿದ್ದಾರೆ. ಮಗಳು ವನಿತಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಮುಂದುವರಿದ ಪಡೆಯುತ್ತಿದ್ದಾರೆ. ಬೆಂಗಳೂರಿನಿಂದ ಶಿವಮೊಗ್ಗಕ್ಕೆ ತೆರಳುತ್ತಿದ್ದ ಕೆಎಸ್ಆರ್ಟಿಸಿ ಬಸ್ ಇದಾಗಿತ್ತು.
ಗೆ ಬಂದಿದೆ.