ಬಸ್ಸಿನಲ್ಲಿ ಹಿಂದು ಯುವತಿಯೊಂದಿಗೆ ಮಾತನಾಡಿದ್ದಕ್ಕೆ ಮುಸ್ಲಿಂ ಯುವಕನಿಗೆ ಹಲ್ಲೆ

ಬಸ್ಸಿನಲ್ಲಿ ಹಿಂದು ಯುವತಿಯೊಂದಿಗೆ ಮಾತನಾಡಿದ್ದಕ್ಕೆ ಮುಸ್ಲಿಂ ಯುವಕನಿಗೆ ಹಲ್ಲೆ

ಮಂಗಳೂರು: ಬಸ್ಸಿನಲ್ಲಿ ಹಿಂದು ಯುವತಿಯೊಂದಿಗೆ ಮಾತನಾಡಿದ್ದಕ್ಕೆ ಮುಸ್ಲಿಂ ಯುವಕನಿಗೆ ಹಲ್ಲೆ ಮಾಡಿರುವ ಘಟನೆ ನಿನ್ನೆ(ಏ.4) ದ.ಕ. ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಉಜಿರೆಯಲ್ಲಿ ನಡೆದಿದೆ. ಜಹೀರ್(22) ಹಲ್ಲೆಗೊಳಗಾದ ಯುವಕ.

ಹಲ್ಲೆಗೊಳಗಾದ ಯುವಕ ಜಹೀರ್ ಮಂಗಳೂರಿನಿಂದ ಬಸ್​​ನಲ್ಲಿ ಪ್ರಯಾಣಿಸುತ್ತಿದ್ದ.

ಅದೇ ಬಸ್​ನಲ್ಲಿ ತನ್ನ ಪರಿಚಯಸ್ಥ ಹುಡುಗಿ ಇರುವುದನ್ನು ಕಂಡು, ಮಾತನಾಡಿಸಿದ್ದಾನೆ. ಇದನ್ನು ಕಂಡ ಗುಂಪೊಂದು ಜಹೀರ್​ನನ್ನು ಬಸ್ಸಿನಿಂದ ಹೊರಗೆಳೆದೆ ಹಲ್ಲೆ ಮಾಡಿದ್ದಾರೆ.

ಇದೀಗ ಜಹೀರ್ ನೀಡಿದ ದೂರಿನ ಮೇರೆಗೆ ನಿತೇಶ್, ಸಚಿನ್, ದಿನೇಶ್ ಹಾಗೂ ಅವಿನಾಶ್ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಕ್ಷುಲ್ಲಕ ವಿಚಾರಕ್ಕೆ ಯುವಕರ ನಡುವೆ ಹೊಡೆದಾಟ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಹಲ್ಲೆಗೆ ಒಳಗಾಗಿರುವ ಜಹೀರ್ ಬೆಳ್ತಂಗಡಿ ಸರಕಾರಿ ಅಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ. ಘಟನೆಯ ಬಗ್ಗೆ ಮಾಹಿತಿ ತಿಳಿಯುತ್ತಿದ್ದಂತೆಯೇ ಎಸ್.ಡಿ‌.ಪಿ ಐ ಪಕ್ಷದ ತಾಲೂಕು ಅಧ್ಯಕ್ಷ ನವಾಜ್ ಕಟ್ಟೆ ಹಾಗೂ ಇತರ ಮುಖಂಡರುಗಳು ಬೆಳ್ತಂಗಡಿ ಸರಕಾರಿ ಆಸ್ಪತ್ರೆಗೆ ಭೇಟಿ ನೀಡಿ ಹಲ್ಲೆಗೊಳಗಾದ ಯುವಕನಿಗೆ ಧೈರ್ಯ ತುಂಬಿದ್ದಾರೆ.