ಬಳ್ಳಾರಿ: ಲಂಚ ಪಡೆಯುವಾಗ ಸಿಬಿಐ ಬಲೆಗೆ ಬಿದ್ದ ಕೇಂದ್ರ ಪುರಾತತ್ವ ಇಲಾಖೆಯ ಅಧಿಕಾರಿಗಳು
ಬಳ್ಳಾರಿ: ಸಾಮಾಜಿಕ ಹೋರಾಟಗಾರರಿಂದ ಲಂಚ ಪಡೆಯುತ್ತಿದ್ದಾಗ ಕೇಂದ್ರ ಪುರಾತತ್ವ ಇಲಾಖೆಯ ಮೂವರು ಅಧಿಕಾರಿಗಳು ಸಿಬಿಐ (CBI) ಬಲೆಗೆ ಬಿದ್ದಿದ್ದಾರೆ.
ರಾಜಶೇಖರ ಮುಲಾಲಿ ಎಂಬವರು ಬಳ್ಳಾರಿಯ ಇನ್ ಫ್ಯಾಂಟ್ರಿ ರಸ್ತೆಯಲ್ಲಿರುವ ಕೋಟೆ ಪ್ರದೇಶದಲ್ಲಿ ಮನೆ ಕಟ್ಟಲು ಮುಂದಾಗಿದ್ದಾರೆ. ಇದಕ್ಕಾಗಿ ಅವರು ಪುರಾತತ್ವ ಇಲಾಖೆಯಿಂದ NOC ನೀಡಲು ಅರ್ಜಿ ಸಲ್ಲಿಸಿದ್ದರು. ಈ ವೇಳೆ ಒಂದೂವರೆ ಲಕ್ಷ ನೀಡುವಂತೆ ಅಧಿಕಾರಿಗಳು ಬೇಡಿಕೆ ಇಟ್ಟಿದ್ದಾರೆ.
ಅಧಿಕಾರಿಗಳು ಲಂಚಕ್ಕೆ ಬೇಡಿಕೆಯಿಟ್ಟ ಬಗ್ಗೆ ರಾಜಶೇಖರ ಮುಲಾಲಿ ಅವರು ಸಿಬಿಐಗೆ ದೂರು ನೀಡಿದ್ದರು. ಅದರಂತೆ ಖಾಸಗಿ ಹೋಟೆಲ್ನಲ್ಲಿ ಮುಂಗಡ 50 ಸಾವಿರ ರೂಪಾಯಿ ಹಣ ಪಡೆಯಲು ಬಂದಾಗ ಸಿಬಿಐ ಅಧಿಕಾರಿಗಳು ದಾಳಿ ನಡೆಸಿ ಮೂವರನ್ನು ಬಂಧಿಸಿದ್ದಾರೆ. ಬಳಿಕ ಬಂಧಿತರ ಮನೆ ಮೇಲೆ ದಾಳಿ ನಡೆಸಿ ಪರಿಶೀಲನೆ ನಡೆಸಿದ್ದಾರೆ.