ಪ್ರಧಾನಿ ಮೋದಿ ಹೆಸರು ಹೇಳುವ ಯೋಗ್ಯತೆ ಸಿದ್ದರಾಮಯ್ಯಗೆ ಇಲ್ಲ: ಕೆ.ಎಸ್.ಈಶ್ವರಪ್ಪ ವಾಗ್ದಾಳಿ

ರಾಯಚೂರು: ಮಾಜಿ ಸಿಎಂ ಸಿದ್ದರಾಮಯ್ಯ ವಿರುದ್ಧ ಮಾಜಿ ಸಚಿವ ಕೆ.ಎಸ್.ಈಶ್ವರಪ್ಪ ಕಿಡಿಕಾರಿದ್ದಾರೆ. ಪ್ರಧಾನಿ ಮೋದಿ ಹೆಸರು ಹೇಳುವ ಯೋಗ್ಯತೆ ಸಿದ್ದರಾಮಯ್ಯಗೆ ಇಲ್ಲ, ಅವರೊಬ್ಬ ಅಯೋಗ್ಯ ಎಂದು ವಾಗ್ದಾಳಿ ನಡೆಸಿದ್ದಾರೆ.
ನಗರದಲ್ಲಿ ಮಾತನಾಡಿದ ಅವರು, ಮೋದಿಯವರನ್ನು ಬೈದ್ರೆ ದೊಡ್ಡ ನಾಯಕನಾಗುತ್ತಾನೆ ಅನ್ನೋ ಭ್ರಮೆಯಲ್ಲಿ ಸಿದ್ದರಾಮಯ್ಯ ಇದ್ದಾರೆ. ನರೇಂದ್ರ ಮೋದಿ ಇಡೀ ದೇಶವೇ ಮೆಚ್ಚಿದೆ ವಿಶ್ವನಾಯಕ. ಸೂರ್ಯ ಯಾವತ್ತಿದ್ರೂ ಸೂರ್ಯನೇ. ಸೂರ್ಯನಿಗೆ ಉಗುಳಿದ್ರೆ ವಾಪಸ್ ಮುಖಕ್ಕೆ ಬೀಳುತ್ತೆ ಎಂದು ಕಿಡಿಕಾರಿದ್ದಾರೆ.
ಸಿದ್ದರಾಮಯ್ಯ ಕ್ಷೇತ್ರಕ್ಕಾಗಿ ಹುಡುಕಾಡುತ್ತಿದ್ದಾರೆ. ಚಾಮುಂಡೇಶ್ವರಿಯಲ್ಲಿ ಸೋತ್ರು, ಬದಾಮಿಯಲ್ಲಿ ಸೋಲಿನ ಭಯ ಇದೆ. ಹೀಗಾಗಿ ಕೋಲಾರಕ್ಕೆ ಬಂದಿದ್ದಾರೆ. ಅಲ್ಲಿ ನಿಲ್ತಾರೋ ಇಲ್ವೋ ಗೊತ್ತಿಲ್ಲ. ಸಿದ್ದರಾಮಯ್ಯ ಮೊದಲು ಕೋಲಾರದಲ್ಲಿ ನಿಲ್ಲಲಿ, ಗೆಲವು ಸೋಲು ಆಮೇಲೆ. ನನಗೆ ಗೊತ್ತಿಲ್ಲ ಅಂತ ಡಿ.ಕೆ.ಶಿವಕುಮಾರ್ ಹೇಳ್ತಾರೆ ಎಂದರು