ಪ್ರಧಾನಿ ಮೋದಿ ಕಾಯ೯ಕ್ರಮಕ್ಕೆ ಖಾಕಿ ಸರ್ಪಗಾವಲು: ಎಡಿಜಿಪಿ ಅಲೋಕ್ ಕುಮಾರ್

ಹೊಸದಿಗಂತ ವರದಿ,ಕಲಬುರಗಿ:
ಜಿಲ್ಲೆಯ ಸೇಡಂ ತಾಲೂಕಿನ ಮಳಖೇಡದಲ್ಲಿ ನಡೆಯುವ ಪ್ರಧಾನಮಂತ್ರಿ ನರೇಂದ್ರ ಮೋದಿಯವರ ಕಾರ್ಯಕ್ರಮಕ್ಕೆ ವ್ಯಾಪಕ ಬಂದೋಬಸ್ತ್ ಮಾಡಲಾಗಿದ್ದು, ಒಂಬತ್ತು ಐ.ಪಿ.ಎಸ್. ಪೊಲೀಸ್ ಅಧಿಕಾರಿಗಳನ್ನು ನಿಯೋಜಿಸಲಾಗಿದೆ ಎಂದು ಕಾನೂನು ಮತ್ತು ಸುವ್ಯವಸ್ಥೆ ವಿಭಾಗದ ಎ.ಡಿ.ಜಿ.ಪಿ.
ಬುಧವಾರ ಸುದ್ದಿಗಾರರೊಂದಿಗೆ ಕಾಯ೯ಕ್ರಮದ ಸ್ಥಳದ ಪೂರ್ವ ಸಿದ್ಧತೆ ಪರಿಶೀಲಿಸಿದ ಬಳಿಕ ಮಾತನಾಡಿ, ಕಲಬುರಗಿ ಮತ್ತು ಬೆಳಗಾವಿ ಐ.ಜಿ.ಪಿ., ಕಲಬುರಗಿ ಎಸ್.ಪಿ., ನಾಗನಹಳ್ಳಿ ಪಿ.ಟಿ.ಸಿ. ಎಸ್.ಪಿ. ಸೇರಿದಂತೆ 9 ಜನ ಐ.ಎ.ಎಸ್ ಅಧಿಕಾರಿಗಳು, 13 ಡಿ.ಎಸ್ಪಿ, 30 ಸಿಪಿಐ, 108 ಪಿ.ಎಸ್.ಐ., 16 ಕೆಎಸ್.ಆರ್.ಪಿ. ತುಕಡಿ, 6 ಡಿಎಆರ್ ತುಕುಡಿಗಳು ಬಂದೋಬಸ್ತ್ ಸಲುವಾಗಿ ನಿಯೋಜಿಸಲಾಗಿದೆ. ಇದಲ್ಲದೆ ಹೆಚ್ಚುರಿಯಾಗಿ ಗರುಡಾ ಫೋರ್ಸ್ ಸಹ ಇರಲಿದ್ದು, ಯಾವುದೇ ಅಹಿತಕರ ಘಟನೆ ನಡೆಯದಂತೆ ಎಲ್ಲಾ ಮುಂಜಾಗ್ರತೆ ಕ್ರಮಗಳನ್ನು ಕೈಗೊಂಡಿದ್ದೇವೆ ಎಂದರು.