ನಾನೇನಾದರೂ ಸಿಎಂ ಆಗಿದ್ದಿದ್ದರೆ ಕರ್ನಾಟಕ ನಂಬರ್ ಒನ್ ಮಾಡಿಬಿಡ್ತಿದ್ದೆ: ಯತ್ನಾಳ್

ವಿಜಯಪುರ: ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಗೃಹ ಸಚಿವ ಅಮಿತ್ ಷಾ ಕರ್ನಾಟಕಕ್ಕೆ ಬಂದಿರುವ ಸಂದರ್ಭದಲ್ಲೇ ಮಾಜಿ ಸಚಿವ ಬಸನಗೌಡ ಪಾಟೀಲ್ ಯತ್ನಾಳ್ ಮುಖ್ಯಮಂತ್ರಿ ಆಗುವ ಆಸೆಯನ್ನು ಪರೋಕ್ಷವಾಗಿ ಹೊರಹಾಕಿದ್ದಾರೆ. ಮಾತ್ರವಲ್ಲ, ನಾನೇನಾದರೂ ಸಿಎಂ ಆಗಿದ್ದಿದ್ದರೆ ಕರ್ನಾಟಕ ನಂಬರ್ ಒನ್ ಮಾಡಿಬಿಡ್ತಿದ್ದೆ ಎಂದೂ ಹೇಳಿದ್ದಾರೆ.
ವಿಜಯಪುರ ನಗರದ ಬುದ್ಧ ವಿಹಾರದಲ್ಲಿ ನಡೆದ ಸನ್ಮಾನ ಸಮಾರಂಭದಲ್ಲಿ ಇಂದು ಮಾತನಾಡಿದ ಯತ್ನಾಳ್ ಈ ಹೇಳಿಕೆ ನೀಡಿದ್ದಾರೆ. ಮುಲಾಜಿಲ್ಲದೆ ನಿರ್ಣಯ ತೆಗೆದುಕೊಳ್ಳಬೇಕು. ನಿರ್ಣಯ ಗಟ್ಟಿ ಇರಬೇಕು ಅಲುಗಾಡಬಾರದು. ಇಲ್ಲೇ ಜಾಗ ಕೊಡಬೇಕು ಅಂದ್ರೆ ಕೊಡಬೇಕು, ಕಥೆ ಹೇಳುವಂತಿಲ್ಲ. ಅಧಿಕಾರಿಗಳು ಹೇಳ್ತಿರ್ತಿರ್ತಾರೆ. ನೀವು ತಲೆಕೆಡಿಸಿಕೊಳ್ಳಬೇಡಿ, ಮುಂದಿನ ಬಾರಿಯೂ ನಾವೇ ಅಧಿಕಾರಕ್ಕೆ ಬರ್ತೀವಿ ಎಂದು ಅವರು ಹೇಳಿದ್ದಾರೆ.
ಕರ್ನಾಟಕವನ್ನು ಅಲುಗಾಡಿಸುವ ಶಕ್ತಿ ಕೇಂದ್ರ ವಿಜಯಪುರದಲ್ಲಿದೆ. ಮೊದಲು ಹೋಗಿ, ಸರ್ ಸರ್ ಅಂತ ಕೈವೊಡ್ಡಿ ಕೇಳ್ತಿದ್ರು. ಏನೋ ಏಯ್ ನಡಿ ಅಂತಿದ್ರು, ಈಗ ನಾವು ಹೋಗಿ ನಿಂತರೆ, ಬಸನಗೌಡರದಾ? ತಗೊಂಡು ಬಾ ಅಂತ ಬರಾಬರಾ ಅಂತ ಸಹಿ ಮಾಡಿ ಬಿಡ್ತಾರೆ ಎಂದ ಯತ್ನಾಳ್, ಮಂತ್ರಿ ಮಾಡದಿದ್ದರೇನು? ಸಾವಿರಾರು ಕೋಟಿ ರೂಪಾಯಿ ಕೆಲ್ಸ ತಂದಿದ್ದೇನೆ ಎಂದು ಹೇಳಿದ್ದಾರೆ.