ಚಿಕ್ಕಬಳ್ಳಾಪುರಕ್ಕೆ ಆಗಮಿಸಿದ ಸಿಎಂ ಬೊಮ್ಮಾಯಿ; ನಂದಿಗಿರಿಧಾಮದ ರೋಪ್‌ ವೇಗೆ ಶಂಕುಸ್ಥಾಪನೆ

ಚಿಕ್ಕಬಳ್ಳಾಪುರಕ್ಕೆ ಆಗಮಿಸಿದ ಸಿಎಂ ಬೊಮ್ಮಾಯಿ; ನಂದಿಗಿರಿಧಾಮದ ರೋಪ್‌ ವೇಗೆ ಶಂಕುಸ್ಥಾಪನೆ

ಚಿಕ್ಕಬಳ್ಳಾಪುರ: ಚಿಕ್ಕಬಳ್ಳಾಪುರ ಜಿಲ್ಲೆಗೆ ಸಿಎಂ ಬಸವರಾಜ ಬೊಮ್ಮಾಯಿ ಆಗಮಿಸಿದ್ದಾರೆ. ಎಸ್‌ ಜೆಸಿಐಟಿ ಕಾಲೇಜಿನ ಹೆಲಿಪ್ಯಾಡ್‌ ಬಂದು ಇಳಿದಿದ್ದಾರೆ.

ಹೆಲಿಪ್ಯಾಡ್‌ ನಿಂದ ಕಾರಿನಲ್ಲಿ ನಂದಿಗಿರಿಧಾಮದ ಕಡೆ ಪ್ರಯಾಣ ಬೆಳೆಸಿದ್ದಾರೆ.

ವಿವಿಧ ಅಭಿವೃದ್ಧಿ ಕಾಮಗಾರಿಗೆಗಳಿಗೆ ಸಿಎಂ ಬೊಮ್ಮಾಯಿ ಚಾಲನೆ ನೀಡಲಿದ್ದಾರೆ. ನಂದಿಗಿರಿಧಾಮದ ಬಳಿ ೯೪ ಕೋಟಿ ವೆಚ್ಚದ ರೋಪ್‌ ವೇಗೆ ಶಂಕುಸ್ಥಾಪನೆ ನೆರವೇರಿಸಲಿದ್ದಾರೆ. ರೋಪ್‌ ಗೆ ಶಂಕುಸ್ಥಾಪನೆ ನೆರವೇರಿಸಲಿರುವ ಸಿಎಂ ಬೊಮ್ಮಾಯಿ, ಸಿಎಂ ಬಸವರಾಜ ಬೊಮ್ಮಾಯಿ ಜೊತೆ ಆರ್.‌ ಅಶೋಕ್‌ . ಡಾ. ಕೆ. ಸುಧಾಕರ್‌ ಸಾಥ್‌ ನೀಡಲಿದ್ದಾರೆ.

ಇನ್ನುರಾಮನಗರ ಜಿಲ್ಲೆ ಮತ್ತೊಂದು ಕ್ರೆಡಿಟ್‌ ವಾರ್‌ ಗೆ ಸಾಕ್ಷಿಯಾಗಲಿದೆ. ಇಂದು ರಾಮನಗರ ಜಿಲ್ಲೆಗೆ ಸಿಎಂ ಬಸವರಾಜ ಬೊಮ್ಮಾಯಿ ಭೇಟಿ ನೀಡಲಿದ್ದಾರೆ. ವಿವಿಧ ಕಾಮಗಾರಿಗಳ ಶಂಕುಸ್ಥಾಪನೆ , ಉದ್ಘಾಟನೆ ಕಾರ್ಯಕ್ರಮದಲ್ಲಿ ಭಾಗಿಯಾಲಿದ್ದಾರೆ. ರಾಮನಗರ ಬಳಿಯ ಅರ್ಚಕರಹಳ್ಳಿಯಲ್ಲಿ ಕಾರ್ಯಕ್ರಮ ನಡೆಯಲಿದೆ. ಈ ವೇಳೆ ಉನ್ನತ ಶಿಕ್ಷಣ ಸಚಿವ ಡಾ. ಅಶ್ವತ್ಥ್‌ ನಾರಾಯಣ ಸೇರಿದಂತೆ ಪ್ರಮುಖ ನಾಯಕರು ಭಾಗಿಯಾಗಲಿದ್ದಾರೆ. ರಾಜೀವ್‌ ಗಾಂಧಿ ಆರೋಗ್ಯ ವಿವಿ ಕ್ಯಾಂಪಸ್‌ ನಿರ್ಮಾಣಕ್ಕೆ ಶಂಕುಸ್ಥಾಪನೆ ನೆರವೇರಿಸಲಿದ್ದಾರೆ. ಸುಮಾರು 600ಕೋಟಿ ವೆಚ್ಚದಲ್ಲಿ ಆರೋಗ್ಯ ವಿವಿ ಕ್ಯಾಂಪಸ್‌ ನಿರ್ಮಾಣವಾಗುತ್ತಿದೆ.