ನಾನು ಯಾರ ಮೇಲೂ ದಬ್ಬಾಳಿಕೆ ಮಾಡಿರಲಿಲ್ಲ; ಆದರೂ ನನ್ನನ್ನು ರೌಡಿ ಶೀಟರ್ ಪಟ್ಟಿಗೆ ಸೇರಿಲಾಗಿತ್ತು ಎಂದ ಸಿ.ಟಿ.ರವಿ
ಬೆಂಗಳೂರು: ರೌಡಿ ಶೀಟರ್ಗಳು ಬಿಜೆಪಿಗೆ ಸೇರ್ಪಡೆಯಾಗುತ್ತಾರೆ ಎಂಬ ಮಾತುಗಳು ರಾಜ್ಯ ರಾಜಕಾರಣದಲ್ಲಿ ಸದ್ಯ ಕೇಳಿ ಬರುತ್ತಿದೆ, ಇದಕ್ಕೆ ಪೂರಕವಾಗಿ ಕೆಲವು ಕ್ರಿಮಿನಲ್ ಹಿನ್ನೆಲೆಯ ವ್ಯಕ್ತಿಗಳು ಬಿಜೆಪಿ ಪಾಳಯದಲ್ಲಿ ಗುರುತಿಸಿಕೊಂಡು, ಬಿಜೆಪಿ ನಾಯಕರ ಜತೆಗೆ ವೇದಿಕೆ ಹಂಚಿಕೊಂಡಿದ್ದರು.
ಸದ್ಯ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಬಿಜೆಪಿಗೆ ರೌಡಿ ಶೀಟರ್ ಸೇರ್ಪಡೆ ವಿಚಾರವಾಗಿ ಮಾತನಾಡುತ್ತಾ, ದೇವರಾಜ್ ಅರಸ್ ಮುಖ್ಯಮಂತ್ರಿಯಾಗಿದ್ದಾಗ ವಿಧಾನಸೌಧದ ಮೂರನೇ ಮಹಡಿಯಲ್ಲಿ ರೌಡಿಗಳನ್ನ ಕೂರಿಸಿಕೊಂಡು ಚರ್ಚೆ ಮಾಡ್ತಿದ್ರು. ಇನ್ನು ಡಿ.ಕೆ.ಶಿವಕುಮಾರ್ ಈ ಹಿಂದೆ ಯೂತ್ ಕಾಂಗ್ರೆಸ್ ಅಧ್ಯಕ್ಷ ಆಗಬೇಕು ಅಂದ್ರೆ ಹತ್ತಾರು ಕೇಸ್ ಆಗಬೇಕು ಎಂದಿದ್ದರು. ಅದರಂತೆ ನಲಪಾಡ್ಗೆ ಯೂತ್ ಕಾಂಗ್ರೆಸ್ ಅಧ್ಯಕ್ಷ ಸ್ಥಾನ ಕೊಡಲಾಗಿದೆ ಎಂದು ಹೇಳಿದರು.
ಪೊಲೀಸ್ ಸ್ಟೇಷನ್ನಲ್ಲಿ 90ರ ದಶಕದಲ್ಲಿ ನನ್ನ ಫೋಟೋ ಕೂಡಾ ರೌಡಿ ಶೀಟರ್ ಲೀಸ್ಟ್ನಲ್ಲಿತ್ತು. ನಾನು ಯಾರ ಮೇಲೂ ದಬ್ಬಾಳಿಕೆ ಮಾಡಿರಲಿಲ್ಲ. ಹೀಗಿದ್ದೂ ಕೇವಲ ರಾಜಕೀಯಕ್ಕಾಗಿ ನನ್ನನ್ನು ರೌಡಿ ಶೀಟರ್ ಹೆಸರಿಗೆ ಸೇರಿಸಲಾಗಿತ್ತು ಎಂದು ಸಿ.ಟಿ.ರವಿ ಹೇಳಿದರು.