ನಶಿಸಿ ಹೋಗುತ್ತಿರುವ ಕಲೆ ಮತ್ತು ಕಲಾವಿದರ ದಾಖಲೀಕರಣ ಅಗತ್ಯವಾಗಿದೆ: ಪ್ರೊ.ಎನ್.ಎಮ್ ಸಾಲಿ  

ನಶಿಸಿ ಹೋಗುತ್ತಿರುವ ಕಲೆ ಮತ್ತು ಕಲಾವಿದರ ದಾಖಲೀಕರಣ ಅಗತ್ಯವಾಗಿದೆ: ಪ್ರೊ.ಎನ್.ಎಮ್ ಸಾಲಿ  

  ಶಿಗ್ಗಾಂವಿ- ಜಗತ್ತಿನಲ್ಲಿ ಕಲಾವಿದರಿಗೆ ಹಾಗೂ ಜನಪದ ಕಲಾವಿದರಿಗೆ ಒಳ್ಳೆಯ ಗೌರವವಿದೆ ದೇಶದ ನಿಜವಾದ ಸಂಪತ್ತು ಅದು ಜನಪದ ಕಲಾವಿದರು ಎಂದು ಕರ್ನಾಟಕ ಜಾನಪದ ವಿವಿಯ ಮೌಲ್ಯಮಾಪನ ಕುಲಸಚಿವರಾದ ಪ್ರೊ.ಎನ್.ಎಮ್.ಸಾಲಿ ಅವರು ಹೇಳಿದರು. 

ಪಟ್ಟಣದ  ಗಾನಯೋಗಿ ಪಂಡಿತ ಪುಟ್ಟರಾಜ ಕವಿ ಗವಾಯಿಗಳ ಕಲಾ ಸಂಸ್ಥೆಯಲ್ಲಿ ಕರ್ನಾಟಕ ಬಯಲಾಟ ಅಕಾಡಮಿ ಹಾಗೂ ರಂಗತೋರಣ ಕಲಾ ಸಂಸ್ಥೆಯ ಸಹಯೋಗದಲ್ಲಿ ಗುರು ಶಿಷ್ಯ ಪರಂಪರೆಯಡಿಲ್ಲಿ ನಡೆದ ದೊಡ್ಡಾಟ ಶಿಭಿರದ ಸಮಾರೋಪ ಸಮಾರಂಭ ಹಾಗೂ ಪ್ರದರ್ಶನ ಕಾರ್ಯವನ್ನು ಉದ್ಘಾಟಿಸಿ ಮಾತನಾಡಿದ ಅವರು ಜನಪದ ಕಲಾವಿದರು ತುಂಬಾ ಸರಳ ಮತ್ತು ಭಾವ ಜೀವಿಗಳು ನಾನು ಕ.ಜಾ.ವಿ.ವಿಗೆ ಬಂದ ಮೇಲೆ ಕಲಾವಿದರು ಪರಿಚಯವಾಗಿದ್ದಾರೆ ಕಲಾವಿದರ ಜೊತೆಗೆ ಒಂದು ಉತ್ತಮ ಬಾಂಧವ್ಯ ಹೊಂದಿದ್ದೆ ಇವತ್ತು ಕಲಾವಿದರಿಗೆ ಸರ್ಕಾರಗಳು ಹಾಗೂ ಸಂಘ ಸಂಸ್ಥೆಗಳಿಂದ ಇನ್ನಷ್ಟು ಪ್ರೋತ್ಸಾಹ ಅಗತ್ಯವಾಗಿದೆ ಆ ನಿಟ್ಟಿನಲ್ಲಿ ನಾನು ಕೂಡಾ ಸದಾ ಕಲಾವಿದರ ಕಷ್ಟ ಸುಖಗಳಲ್ಲಿ ಭಾಗವಹಿಸುತ್ತೇನೆ ಎಂದರು.

 ಮುಖ್ಯ ಅತಿಥಿಯಾಗಿದ್ದ ರಾಜ್ಯೋತ್ಸವ ಪ್ರಶಸ್ತಿ ಪುರಸ್ರ್ಕತರಾದ ಶಿವಾನಂದ ಮ್ಯಾಗೇರಿ ಅವರು ಮಾತನಾಡಿ ಬಯಲಾಟ ದೊಡ್ಡಾಟ ಕ್ಷೇತ್ರಕ್ಕೆ ಶಿಗ್ಗಾಂವ ತಾಲೂಕಿನ ಕಲಾವಿದರ ಕೊಡುಗೆ ಅಪಾರ ಇಲ್ಲಿಯ ಕಲಾವಿದರು ಎಂದು ಅಧ್ಯಕ್ಷತೆ ವಹಿಸಿದ್ದ ಕರ್ನಾಟಕ ಬಯಲಾಟ ಅಕಾಡಮಿಯ ನೂತನ ಅಧ್ಯಕ್ಷರಾದ ಅಜೀತ ಬಸಾಪೂರ ಅವರು ಮಾತನಾಡಿ ನನಗೆ ಮತ್ತು ಹಾವೇರಿ ಜಿಲ್ಲೆಗೆ ಅವಿನಾಭಾವ ಸಂಬಂಧವಿದೆ ನಾನು ಧಾರವಾಡ ಜಿಲ್ಲೆಯವನಾಗಿದ್ದರೂ ಕಲಾ ಕ್ಷೇತ್ರದಲ್ಲಿ ನನಗೆ ವಿದ್ಯೆ ಕಲಿಸಿ ಇವತ್ತು ಅಧ್ಯಕ್ಷ ಸ್ಥಾನ ದೊರೆಯಲು ಪ್ರಮುಖ ಪಾತ್ರ ವಹಿಸಿದವರು ಶಿಗ್ಗಾಂವಿ ತಾಲೂಕಿನ ಎಲ್ಲ ಹಿರಿಯ ಕಲಾವಿದರು ಅವರಿಗೆ ನಾನು ಚಿರರುಣಿಯಾಗಿರುತ್ತೇನೆ ಎಂದರು.ಚಿಕ್ಕ ವಯಸ್ಸಿನಲ್ಲಿಯೆ ಸರ್ಕಾರ ನನಗೆ ಈ ಜವಾಬ್ದಾರಿ ನೀಡಿದೆ ಅದಕ್ಕೆ ತಕ್ಕ ಹಾಗೆ ನಾನು ಕೆಲಸ ಮಾಡುತ್ತೆನೆ. ಬಯಲಾಟ ಅಕಾಡಮಿಯಿಂದ ಕಲಾವಿದರಿಗೆ ಮುಂದಿನ ದಿನಗಳಲ್ಲಿ ಅನೇಕ ಯೋಜನೆಗಳನ್ನು ರೂಪಿಸಲಾಗುವುದು ಎಂದರು.

 ಈ ಸಂದರ್ಭದಲ್ಲಿ ಬಯಲಾಟ ಅಕಾಡಮಿಯ ಸದಸ್ಯ ಸಂಚಾಲಕರಾದ ಡಾ.ಕೆ.ರುದ್ರಪ್ಪ , ಕರ್ನಾಟಕ ಜಾನಪದ ಅಕಾಡಮಿ ಸದಸ್ಯ ಬಸವರಾಜ ಗೊಬ್ಬಿ, ಕ.ಸಾ.ಪ ತಾಲೂಕ ಅಧ್ಯಕ್ಷ ಎಸ್.ಎನ್.ಮುಗಳಿ ಅವರು ಮಾತನಾಡಿದರು. 

ದಿವ್ಯಸಾನಿದ್ಯ ವಹಿಸಿದ್ದ ಶಿಗ್ಗಾಂವಿಯ ವಿರಕ್ತಮಠದ ಸಂಗನಬಸವ ಶ್ರೀಗಳು ಆಶೀರ್ವಚನ ನೀಡಿದರು.ನಂತರ ದೊಡ್ಡಾಟದ ಕಥೆಗಾರರಾದ ಬಸವರಾಜ ಶಿಗ್ಗಾಂವಿ ಅವರ ಮಾರ್ಗದರ್ಶನದಲ್ಲಿ ದೊಡ್ಡಾಟ ತರಬೇತಿ ಪಡೆಬ ಶಿಭಿರದ ಶಿಭಿರಾರ್ಥಿಗಳಿಂದ ವಾಲಿ ಸುಗ್ರೀವರ ಕಾಳಗ ಎನ್ನುವ ದೊಡ್ಡಾಟ ಪ್ರದರ್ಶನ ಮಾಡಿದರು. ಕಾರ್ಯಕ್ರಮದಲ್ಲಿ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ರ್ಕತರಾದ ಕೊಟ್ರೆಶ ಮಾಸ್ತರ ಬೆಳಗಲಿ, ಡಾ.ಲತಾ.ಜಿ.ನಿಡಗುಂದಿ, ಕ.ಸಾ.ಪ ಅಧ್ಯಕ್ಷ ಎಸ್.ಎನ್.ಮುಗಳಿ, ಕರ್ನಾಟಕ ಜಾನಪದ ಪರಿಷತ್ ಸದಸ್ಯ ಶಂಕರ ಅರ್ಕಸಾಲಿ ಕಲಾವಿದರಾದ ಮಾನಪ್ಪ ಬಡಿಗೇರ, ಶಿದ್ಲಿಂಗಪ್ಪ ನೆರೆಗಲ್, ಚಂದ್ರಶೇಖರಯ್ಯ ಗುರಯ್ಯನವರ,ಚಂದ್ರಶೇಖರ ಕಮಡೊಳ್ಳಿ, ಅಶೋಕ ಕುರಬರ, ವಲಮಪ್ಪ ಸೋರಟೂರ ಪಂಡಿತ ಪುಟ್ಟರಾಜ ಗವಿಯಿಗಳ ಕಲಾ ಸಂಸ್ಥೆಯ ನಿರ್ಧೇಶಕರು, ಕಲಾವಿದರು ನಾಗರಿಕರು ಭಾಗವಹಿಸಿದ್ದರು. ರಾಜ್ಯೋತ್ಸವ ಪ್ರಶಸ್ತಿ ಪುರಸ್ರ್ಕತರಾದ ಪಕ್ಕಿರೇಶ ಕೊಂಡಾಯಿ ಪ್ರಾಸ್ತಾವಿಕವಾಗಿ ಮಾತನಾಡಿದರು ಶಿಕ್ಷಕರಾದ ಎಸ್.ಕೆ.ಹೂಗಾರ ಸ್ವಾಗತಿಸಿದರು ಸಹಾಯಕ ಪ್ರಾಧ್ಯಾಪಕರಾದ ಶರೀಫ ಮಾಕಪ್ಪನವರ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.