ನನ್ನ ಯೋಗ್ಯತೆ ಮೀರಿ ನನಗೆ ಕೇಂದ್ರ ಸರ್ಕಾರ ದೊಡ್ಡ ಗೌರವ ನೀಡಿದೆ' : ಎಸ್.ಎಂ. ಕೃಷ್ಣ

ಬೆಂಗಳೂರು : ನನ್ನ ಯೋಗ್ಯತೆ ಮೀರಿ ನನಗೆ ಕೇಂದ್ರ ಸರ್ಕಾರ ದೊಡ್ಡ ಗೌರವ ನೀಡಿದೆ ಎಂದು ಎಸ್.ಎಂ. ( S.M Krishna ) ಕೃಷ್ಣ ಹೇಳಿದರು.
ಸಿಎಂ ಬಸವರಾಜ ಬೊಮ್ಮಾಯಿ ಪದ್ಮವಿಭೂಷಣ ಪ್ರಶಸ್ತಿಗೆ ಆಯ್ಕೆಯಾಗಿರುವ ಮಾಜಿ ಮುಖ್ಯಮಂತ್ರಿ ಎಸ್.
ಈ ಕುರಿತು ಎಸ್ ಎಂ ಕೃಷ್ಣ ಪ್ರತಿಕ್ರಿಯೆ ನೀಡಿದ್ದು, ಪ್ರಧಾನಿಯವರಿಗೆ ಹಾಗೂ ಗೃಹ ಸಚಿವರಿಗೆ ಋಣಿಯಾಗಿದ್ದೇನೆ, ನನಗೆ ಬಹಳ ಸಂತೋಷವಾಗಿದೆ, ಅನಂತ ನಮಸ್ಕಾರಗಳನ್ನು ಸಲ್ಲಿಸುತ್ತೇನೆ ಎಂದಿದ್ದಾರೆ.ನಾನು ರಾಜಕೀಯ ನಿವೃತ್ತಿ ಜೀವನ ಆರಂಭ ಮಾಡುತ್ತಿರುವ ಘಟ್ಟದಲ್ಲಿ ನನಗೆ ಈ ಪ್ರಶಸ್ತಿ ಬಂದಿರುವುದು ಬಯಸದೇ ಬಂದ ಭಾಗ್ಯವಾಗಿದೆ. ಪದ್ಮ ವಿಭೂಷಣ ಘೋಷಣೆಯಾಗಿರುವುದಕ್ಕೆ ಬಹಳ ಸಂತೋಷ ಆಗಿದೆ. . ಈ ಪ್ರಶಸ್ತಿಯನ್ನು ಕಳೆದ 6 ದಶಕದಲ್ಲಿ ನನಗೆ ಬೆಂಬಲಿಸಿದ 7 ಕೋಟಿ ಕನ್ನಡಿಗರಿಗೆ ಅರ್ಪಿಸುತ್ತೇನೆ ಎಂದು ಹೇಳಿದರು.ಪದ್ಮವಿಭೂಷಣ ಗೌರವಕ್ಕೆ ಪಾತ್ರರಾಗಿರೋ ಮಾಜಿ ಸಿಎಂ ಎಸ್.ಎಂ. ಸರ್ಕಾರಕ್ಕೆ ಧನ್ಯವಾದ ತಿಳಿಸಿದ್ದಾರೆ. ನನ್ನ ಯೋಗ್ಯತೆ ಮೀರಿದ ದೊಡ್ಡ ಗೌರವ ಕೇಂದ್ರ ನೀಡಿದೆ. ಪ್ರಧಾನಿ ಮೋದಿ ಗೃಹಮಂತ್ರಿ ಅಮಿತ್ ಶಾ ಅವರು ಗೌರವ ನೀಡಿದ್ದಾರೆ. ಇದು ಬಯಸದೇ ಬಂದ ಭಾಗ್ಯ. ನಾನು ಕನಸು-ಮನಸಿನಲ್ಲೂ ಇದನ್ನು ನಿರೀಕ್ಷೆ ಮಾಡಿರಲಿಲ್ಲ ಎಂದರು.