ನಟ ಮುಖ್ಯಮಂತ್ರಿ ಚಂದ್ರು ವಿರುದ್ಧ ದೂರು! ಬಂಧನಕ್ಕೆ ಆಗ್ರಹ

ನಟ ಮುಖ್ಯಮಂತ್ರಿ ಚಂದ್ರು ವಿರುದ್ಧ ದೂರು! ಬಂಧನಕ್ಕೆ ಆಗ್ರಹ
ನಟ ಮುಖ್ಯಮಂತ್ರಿ ಚಂದ್ರು ವಿರುದ್ಧ ದೂರುದಾಖಲಿಸಲಾಗಿದೆ.
ಸರ್ವೋದಯ ವಿಕಲಚೇತನ ಕ್ಷೇಮಾಭಿವೃದ್ಧಿ ಸಂಘದಿಂದ ನಟನ ವಿರುದ್ಧ ದೂರು  ದಾಖಲಿಸಲಾಗಿದೆ.
ವಿಶೇಷಚೇತನರನ್ನು ನಿಂದನೆ, ಅಪಮಾನ ಮಾಡಿರುವ ಆರೋಪವನ್ನು ಹೊರಿಸಲಾಗಿದ್ದು ಈ ನಿಟ್ಟಿನಲ್ಲಿ ಕೇಸ್ ದಾಖಲಿಸಿದ್ದಾರೆ.
.
ತರಳಬಾಳು ಹುಣ್ಣಿಮೆ ಕಾರ್ಯಕ್ರಮದಲ್ಲಿ ಮಾತನಾಡುವಾಗ ವಿಶೇಷಚೇತನರಿಗೆ ನಿಂದನೆ ಮಾಡಿರುವ ಆರೋಪ ಮುಖ್ಯಮಂತ್ರಿ ಚಂದ್ರು ಮೇಲಿದೆ. ಚುನಾವಣೆಗೆ (Election) ಸ್ಪರ್ಧಿಸುವ ವ್ಯಕ್ತಿಯು ಕುಂಟನೇ, ಕುರುಡನೇ, ಹೆಳವನೇ ಎಂದು ಹೇಳಿಕೆ  ನೀಡಿದ್ದಾರೆಂದು ಆರೋಪಿಸಲಾಗಿದೆ.

ಮಾತನಾಡುವಾಗ ವಿಶೇಷಚೇತನರನ್ನು ನಿಂದಿಸಿದ್ದಾರೆ. ಚಂದ್ರು ಅವರು ಮಾಧ್ಯಮದ ಮುಂದೆ ಕ್ಷಮೆ ಯಾಚಿಸಬೇಕು. ಸರ್ಕಾರ ಇವರನ್ನು ಬಂಧಿಸಬೇಕು ಎಂದು ವಿಶೇಷಚೇತನರ ಸಂಘದಿಂದ ಮದ್ದೂರು ತಹಶೀಲ್ದಾರರಿಗೆ ಮನವಿ ಮಾಡಲಾಗಿದೆ. ತಹಶೀಲ್ದಾರ್ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಮಾಡಲಾಗಿದೆ.

ಸಿನಿಮಾಗಳಲ್ಲಿ ಮಿಂಚಿದ ಮುಖ್ಯಮಂತ್ರಿ ಚಂದ್ರು ಅವರು ಅಗ್ನಿಸಾಕ್ಷಿ ಧಾರವಾಹಿಯ ಮೂಲಕ ಹೊಸ ಮುಖದೊಂದಿಗೆ ಕಿರುತೆರೆಗೆ ಬಂದರು. ವಿಲನ್ ರೋಲ್​ಗಳಲ್ಲಿಯೇ ಅವರನ್ನು ನೋಡಿದ್ದ ಜನರು ಅಗ್ನಿಸಾಕ್ಷಿಯಲ್ಲಿ ಅವರ ಪಾತ್ರ ನೋಡಿ ಅಚ್ಚರಿಪಟ್ಟಿದ್ದರು.

43 ವರ್ಷಗಳಿಂದಲೂ ನಟ ಮುಖ್ಯಮಂತ್ರಿ ಎಂಬ ಪಟ್ಟ ಹಿಡಿದುಕೊಂಡೇ ಇದ್ದಾರೆ. 'ಮುಖ್ಯಮಂತ್ರಿ' ಹೆಸರಿನ ನಾಟಕದಲ್ಲಿ ಅವರು ಮುಖ್ಯಮಂತ್ರಿ ಪಾತ್ರವನ್ನು ನಿರ್ವಹಿಸಿದ್ದರು. ಆಗಿನಿಂದಲೂ ಅವರು ಮುಖ್ಯಮಂತ್ರಿ ಚಂದ್ರುವಾಗಿ ಫಿಕ್ಸ್ ಆಗಿದ್ದಾರೆ.