ಧಾರವಾಡದಲ್ಲಿ ವಿವಿಧ ಬೇಡಿಕೆ ಈಡೇರಿಸುವಂತೆ ಒತ್ತಾಯಿಸಿ ಮೊಬೈಲ್‌ ಟವರ್‌ ಏರಿದ ನೀರು ಸರಬರಾಜು ನೌಕರ

ಧಾರವಾಡದಲ್ಲಿ ವಿವಿಧ ಬೇಡಿಕೆ ಈಡೇರಿಸುವಂತೆ ಒತ್ತಾಯಿಸಿ ಮೊಬೈಲ್‌ ಟವರ್‌ ಏರಿದ ನೀರು ಸರಬರಾಜು ನೌಕರ

ಧಾರವಾಡ: ವಿವಿಧ ಬೇಡಿಕೆ ಈಡೇರಿಸುವಂತೆ ಒತ್ತಾಯಿಸಿ ಪಾಲಿಕೆ ಕಚೇರಿ ಮುಂದೆ ನೀರು ಸರಬರಾಜು ನೌಕರರ ಮುಷ್ಕರ ನಡೆಸುತ್ತಿದ್ದಾರೆ. ಈ ವೇಳೆ ನೌಕರನೊಬ್ಬ ಮೊಬೈಲ್‌ ಟವರ್‌ ಏರಿ ಡ್ರಾಮಾ ಮಾಡಿದ್ದಾನೆ.

ಧಾರವಾಡದ ಆಲೂರು ವೆಂಕಟರಾವ್ ವೃತ್ತದ ಬಳಿ ನೌಕರರು ಪ್ರತಿಭಟನೆ ನಡೆಸುತ್ತಿದ್ದರು.ನೌಕರ ಮಲ್ಲಿಕಾರ್ಜುನ ಗುಮ್ಮಗೋಳ ಎಂಬಾತ ಟವರ್ ಏರಿ ಕುಳಿತಿದ್ದಾನೆ.

ಇದರಿಂದ ಸ್ಥಳದಲ್ಲಿ ಉದ್ವಿಗ್ನ ವಾತಾವರಣ ಉಂಟಾಗಿತ್ತು. ಕೈಯಲ್ಲಿ ಬೇಡಿಕೆ ಫಲಕ ಸಹಿತ ಟವರ್ ಏರಿದ ಮಲ್ಲಿಕಾರ್ಜುನ ಗುಮ್ಮಗೋಳ ಟವರ್‌ ನ ತುತ್ತ ತುದಿಯಲ್ಲಿ ಕುಳಿತು ಪ್ರದರ್ಶನ ಮಾಡಿದ್ದಾನೆ.

ಅಲ್ಲದೆ, ಕಳೆದ ಏಳು ತಿಂಗಳಿನಿಂದ ನಮಗೆ ವೇತನ ನೀಡದೆ ಬಾಕಿ ಉಳಿಸಿದ್ದಾರೆ. ಕೂಡಲೇ ಬಾಕಿ ವೇತನ ನೀಡುವಂತೆ ಆಗ್ರಹಿಸಿದ್ದಾನೆ.ಇದನ್ನ ನೊಡಿದ ಪೊಲೀಸರು ಮತ್ತ ಸ್ಥಳೀಯರು ಬೆಚ್ಚುಬಿದ್ದಿದ್ದರು. ಈತನನ್ನು ಕೆಳಗಿಳಿಸಲು ಸಿಬ್ಬಂದಿ ಹರಸಾಹಸಪಟ್ಟಿದ್ದಾರೆ.ಇನ್ನು ಅದರಂತೆ ಸುರಕ್ಷಿತವಾಗಿ ಆತನನ್ನು ಕೆಳಗಿಳಿಸುವ ಕಾರ್ಯ ನಡೆಸಿದ್ರು.