ಟೀಂ ಇಂಡಿಯಾದಲ್ಲಿ ರೋಹಿತ್ದೇ ಹವಾ! ಸೂರ್ಯಗಾಗಿ ದ್ರಾವಿಡ್ ಜತೆ ಜಗಳ ಮಾಡಿ ಗೆದ್ದ ಕ್ಯಾಪ್ಟನ್

ಟೀಮ್ ಇಂಡಿಯಾದಲ್ಲಿ ಕ್ಯಾಪ್ಟನ್ ಮುಂದೆ ಕೋಚ್ ಆಟ ಏನೂ ನಡೆಯಲ್ಲ ಅನ್ನೋದು ಮತ್ತೆ ಪ್ರೂವ್ ಆಯ್ತು.. ಕೋಚ್ ರಾಹುಲ್ ದ್ರಾವಿಡ್ ಎದುರಿನ ಬ್ಯಾಟಲ್ನಲ್ಲಿ ಕ್ಯಾಪ್ಟನ್ ರೋಹಿತ್ ಶರ್ಮಾ ಗೆದ್ದಿದ್ದಾರೆ. ಏನಿದು ಕಥೆ ಅಂತೀರಾ.? ಈ ಸ್ಟೋರಿ ನೋಡಿ..!
ವಿಶ್ವಾದ್ಯಂತ ಅಭಿಮಾನಿಗಳು ಕಾದು ಕುಳಿತಿದ್ದ ಮಹಾ ಸಮರಕ್ಕೆ ನಿನ್ನೆ ಕಿಕ್ಸ್ಟಾರ್ಟ್ ಸಿಕ್ಕಿದೆ. ನಾಗ್ಪುರದ ಮೈದಾನದಲ್ಲಿ ಭಾರತ ಹಾಗೂ ಆಸ್ಟ್ರೇಲಿಯಾ ತಂಡಗಳು ಕಾದಾಟ ಆರಂಭಿಸಿವೆ. ಪ್ರತಿಷ್ಟೆಯ ಕದನದಲ್ಲಿ ಉಭಯ ತಂಡಗಳಿಗೂ ಗೆಲುವೊಂದೆ ಗುರಿಯಾಗಿದ್ದು, ಸಾಮರ್ಥ್ಯವನ್ನೇ ಪಣಕ್ಕಿಟ್ಟು ಹೋರಾಟ ನಡೆಸ್ತಿವೆ. ಆದ್ರೆ, ಮೈದಾನದ ಹೊರಗೆ ಬೇರೆಯದ್ದೇ ಒಂದು ಚರ್ಚೆ ಆರಂಭವಾಗಿದೆ.
ದ್ರಾವಿಡ್ ವಿರುದ್ಧದ ಬ್ಯಾಟಲ್ ಗೆದ್ದ ಕ್ಯಾಪ್ಟನ್ ರೋಹಿತ್.!
ಯೆಸ್..! ನಾಗ್ಪುರದಲ್ಲಿ ಆನ್ ಫೀಲ್ಡ್ನ ಕಾದಾಟಕ್ಕೆ ಕಿಕ್ಸ್ಟಾರ್ಟ್ ಸಿಕ್ಕಿದೆ. ಪಂದ್ಯದ ರಿಸಲ್ಟ್ ಬರೋಕೆ ಕನಿಷ್ಠ ಇನ್ನೆರಡು ದಿನ ಬೇಕು.. ಆದ್ರೆ, ಟಾಸ್ ವೇಳೆ ಟೀಮ್ ಅನೌನ್ಸ್ ಆದಾಗಲೇ ರೋಹಿತ್ ಶರ್ಮಾ, ದ್ರಾವಿಡ್ ವಿರುದ್ಧದ ಬ್ಯಾಟಲ್ ಗೆದ್ದಿದ್ದಾರೆ. ಇದರೊಂದಿಗೆ ಟೀಮ್ ಇಂಡಿಯಾದಲ್ಲಿ ಹೆಡ್ಕೋಚ್ ಅಲ್ಲ.. ಕ್ಯಾಪ್ಟನ್ ಸುಪ್ರೀಂ, ನಾಯಕನ ನಿರ್ಧಾರವೇ ಫೈನಲ್ ಅನ್ನೋದು ಮತ್ತೊಮ್ಮೆ ಪ್ರೂವ್ ಆಗಿದೆ.
ರೇಸ್ನಿಂದ ಗಿಲ್ ಔಟ್, ಸೂರ್ಯನಿಗೆ ಚಾನ್ಸ್.!
ಇಂಡೋ - ಆಸಿಸ್ ನಡುವಿನ ಬಾರ್ಡರ್ - ಗವಾಸ್ಕರ್ ಟೆಸ್ಟ್ ಸರಣಿ ಆರಂಭಕ್ಕೆ ಒಂದು ವಾರದಿಂದಲೇ ಸೆಲೆಕ್ಷನ್ ಡಿಬೇಟ್ಗಳೇ ನಡೆದಿದ್ವು. ಸೂರ್ಯ ಕುಮಾರ್ ಯಾದವ್ VS ಶುಭ್ಮನ್ ಗಿಲ್ ಇಬ್ಬರಲ್ಲಿ ಯಾರಿಗೆ ಚಾನ್ಸ್ ನೀಡಬೇಕು ಅನ್ನೋದು ಸಿಕ್ಕಾಪಟ್ಟೆ ಚರ್ಚೆಯಾಗಿತ್ತು. ಒಬ್ಬೊಬ್ಬರು ಒಂದೊಂದು ರೀತಿಯ ಅಭಿಪ್ರಾಯ ವ್ಯಕ್ತಪಡಿಸಿದ್ರು. ಅಂತಿಮವಾಗಿ ಸೂರ್ಯ ಕುಮಾರ್ಗೆ ಡೆಬ್ಯೂ ಕ್ಯಾಪ್ ಸಿಗ್ತು.
ಮುಂಬೈಕರ್ ಸೂರ್ಯನಿಗಾಗಿ ಲಾಬಿ ನಡೆಸಿದ್ದ ರೋಹಿತ್.!
ಗಿಲ್ VS ಸೂರ್ಯ ಕುಮಾರ್ ಅನ್ನೋ ಡಿಬೆಟ್ ಬಂದಾಗಲೆಲ್ಲಾ ಟೀಮ್ ಇಂಡಿಯಾ ನಾಯಕ ರೋಹಿತ್ ಶರ್ಮಾ ಸೂರ್ಯನ ಪರ ಬ್ಯಾಟಿಂಗ್ ನಡೆಸಿದ್ರು. ಲೋವರ್ ಆರ್ಡರ್ನಲ್ಲಿ ಕೌಂಟರ್ ಅಟ್ಯಾಕ್ ಮಾಡ್ತಿದ್ದ ರಿಷಭ್ ಪಂತ್ ರೋಲ್ ಅನ್ನ ಸೂರ್ಯ ಕುಮಾರ್ ನಿಭಾಯಿಸ್ತಾರೆ ಅನ್ನೋದು ರೋಹಿತ್ ಶರ್ಮಾ ಲೆಕ್ಕಾಚಾರ..! ಅದಲ್ಲದೇ ತವರಿನ ಆಟಗಾರ ಅನ್ನೋ ವ್ಯಾಮೋಹ ಬೇರೆ..! ಹೀಗಾಗಿಯೇ ಟೆಸ್ಟ್ ಕ್ಯಾಪ್ ನೀಡಲು ತುದಿಗಾಲಲ್ಲಿ ನಿಂತಿದ್ರು.
ಅನುಭವಿ ಗಿಲ್ ಪರ ಬ್ಯಾಟಿಂಗ್ ನಡೆಸಿದ್ದ ದ್ರಾವಿಡ್.!
ಸೂರ್ಯ ಕುಮಾರ್ ಯಾದವ್.. ವಿಶ್ವದ ನಂಬರ್ 1 ಟಿ20 ಬ್ಯಾಟ್ಸ್ಮನ್.. ವೈಟ್ಬಾಲ್ ಫಾರ್ಮೆಟ್ನಲ್ಲಿ ಸದ್ಯ ಸೂರ್ಯನಂತಾ ಡಿಸ್ಟ್ರಕ್ಟಿವ್ ಬ್ಯಾಟ್ಸ್ಮನ್ ಇನ್ನೊಬ್ಬ ಇಲ್ಲ.. ಇದ್ರಲ್ಲಿ ನೋ ಡೌಟ್..! ಆದ್ರೆ, ರೆಡ್ ಬಾಲ್ ಕ್ರಿಕೆಟ್ನಲ್ಲಿ ಸೂರ್ಯ ಅನಾನುಭವಿ.. ಹೀಗಾಗಿಯೇ ಕೋಚ್ ದ್ರಾವಿಡ್, ಅನುಭವಿ ಶುಭ್ಮನ್ ಗಿಲ್ ಪರ ಬ್ಯಾಟಿಂಗ್ ನಡೆಸಿದ್ರು. ಆದ್ರೆ, ಅಂತಿಮವಾಗಿ ಸೋತು ಬಿಟ್ರು.. ಕ್ಯಾಪ್ಟನ್ ರೋಹಿತ್ ಲಾಬಿಯ ಮುಂದೆ ದ್ರಾವಿಡ್ ಆಟ ನಡೆಯಲೇ ಇಲ್ಲ..!
ಟೆಸ್ಟ್ ಕ್ರಿಕೆಟ್ಗೆ ಸೂರ್ಯಕುಮಾರ್ ಫಿಟ್ ಆಗ್ತಾರಾ.?
ದ್ರಾವಿಡ್ ವಿರುದ್ಧದ ಬ್ಯಾಟಲ್ನಲ್ಲಿ ಗೆದ್ದ ರೋಹಿತ್ ಶರ್ಮಾ, ಸೂರ್ಯ ಕುಮಾರ್ಗೆ ಮಣೆ ಹಾಕಿದ್ದಾರೆ. ಆದ್ರೆ, ಸೂರ್ಯ ಕುಮಾರ್ ಟೆಸ್ಟ್ ಕ್ರಿಕೆಟ್ಗೆ ಫಿಟ್ ಆಗ್ತಾರಾ ಅನ್ನೋದು ಈಗ ಹುಟ್ಟಿರೋ ಪ್ರಶ್ನೆಯಾಗಿದೆ. ಟಿ20 ಕ್ರಿಕೆಟ್ನಲ್ಲಿ ಸಾಲಿಡ್ ಬ್ಯಾಟಿಂಗ್ ನಡೆಸೋ ಸೂರ್ಯ, ಏಕದಿನ ಫಾರ್ಮೆಟ್ನಲ್ಲಿ ಹೇಳಿಕೊಳ್ಳುವಂತಾ ಪ್ರದರ್ಶನ ನೀಡಿಲ್ಲ.. ತಾಳ್ಮೆಯ ಆಟವನ್ನೇ ಆಡದೇ ಬಂದಷ್ಟೇ ವೇಗವಾಗಿ ಪೆವಿಲಿಯನ್ ಸೇರಿದ್ದೇ ಹೆಚ್ಚು. ಏಕದಿನ ಮಾದರಿಗೆ ಇನ್ನೂ ಹೊಂದಿಕೊಳ್ಳದ ಸೂರ್ಯ ಟೆಸ್ಟ್ ಫಾರ್ಮೆಟ್ ಅದ್ಹೇಗೆ ಫಿಟ್ ಆಗ್ತಾರೆ.?
ಶುಭ್ಮನ್ ಗಿಲ್ ಕಡೆಗಣನೆ ಎಷ್ಟು ಸರಿ.?
ಯಂಗ್ ಬ್ಯಾಟರ್ ಶುಭ್ಮನ್ ಗಿಲ್ ಮೂರೂ ಫಾರ್ಮೆಟ್ ಪ್ಲೇಯರ್ ಅನ್ನೋ ಮಾತನ್ನ ಕೆಲ ದಿನಗಳ ಹಿಂದಷ್ಟೇ ಕ್ರಿಕೆಟ್ ಪಂಡಿತರೆಲ್ಲಾ ಹೇಳಿದ್ರು.. ಟೆಸ್ಟ್ ಮಾದರಿಗಂತೂ ಗಿಲ್ ಹೇಳಿ ಮಾಡಿಸಿದ ಪ್ಲೇಯರ್.! ಆಡಿದ 13 ಪಂದ್ಯಗಳ ಸಾಧನೆಯೇ ಇದಕ್ಕೆ ಸಾಕ್ಷಿಯಾಗಿದೆ. ಆಸ್ಟ್ರೇಲಿಯಾ, ಇಂಗ್ಲೆಂಡ್ ನಂತರ ಕಠಿಣ ಪಿಚ್ಗಳಲ್ಲೂ ಗಿಲ್ ಸಮರ್ಥವಾಗಿ ಬ್ಯಾಟ್ ಬೀಸಿದ್ದಾರೆ. ಆಡಿದ ಅನುಭವದ ಜೊತೆಗೆ ಸಾಲಿಡ್ ಫಾರ್ಮ್ನಲ್ಲಿದ್ರೂ ಗಿಲ್ ಬೆಂಚ್ಗೆ ಸೀಮಿತವಾಗಿದ್ದಾರೆ. ಹಾಗಿದ್ರೂ, ಗಿಲ್ಗೆ ಕೊಕ್ ನೀಡಿ ಸೂರ್ಯನಿಗೆ ಮಣೆ ಹಾಕಿದ್ದು ಎಷ್ಟು ಸರಿ ಅನ್ನೋದೇ ಪ್ರಶ್ನೆಯಾಗಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ