ದೇಶಾದ್ಯಂತ 'ಶಾಲಾ ಸಮವಸ್ತ್ರ' ಬದಲಾವಣೆ ; 'NCERT'ಯಿಂದ ಹೊಸ ಮಾರ್ಗಸೂಚಿ ಪ್ರಕಟ
ಸುಮಾರು ಒಂದು ವರ್ಷದ ಹಿಂದೆ NCERT ಟ್ರಾನ್ಸ್ಜೆಂಡರ್ ಮಕ್ಕಳನ್ನ ಶಾಲೆಗಳಿಗೆ ಸೇರಿಸುವ ಕುರಿತು ವರದಿಯನ್ನ ಸಿದ್ಧಪಡಿಸಿತ್ತು. ಆದರೆ, ಈ ವರದಿಯನ್ನ ರಾಷ್ಟ್ರೀಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗ ಆಕ್ಷೇಪಿಸಿತ್ತು. ಇದೀಗ NCERT ಹೊಸ ಕೈಪಿಡಿ ಬಿಡುಗಡೆ ಮಾಡಿದ್ದೂ, ಲಿಂಗ-ತಟಸ್ಥ ಸಮವಸ್ತ್ರ ತರಲು ಶಿಫಾರಸು ಮಾಡಲಾಗಿದೆ. ಲಿಂಗ-ತಟಸ್ಥ ಸಮವಸ್ತ್ರ ಎಂದರೆ ಎಲ್ಲರಿಗು ಒಂದೇ ಉಡುಗೆ. ಲಿಂಗ-ತಟಸ್ಥ ಸಮವಸ್ತ್ರಗಳು ವಿದ್ಯಾರ್ಥಿಗಳನ್ನ ಯಾವುದೇ ಒಂದು ಲಿಂಗಕ್ಕೆ ಸೀಮಿತಗೊಳಿಸುವುದಿಲ್ಲ ಎಂದು ಸಾಮಾನ್ಯವಾಗಿ ನಂಬಲಾಗಿದೆ.