ದೇಶದಲ್ಲಿ ಹೆಚ್ಚಿದ Omicron ಕೇಸ್ ಇಂದು ಸಂಜೆ 6.30ಕ್ಕೆ ಮಹತ್ವದ ಸಭೆ ಕರೆದ ಪ್ರಧಾನಿ ನರೇಂದ್ರ ಮೋದಿ : ಮಹತ್ವದ ತೀರ್ಮಾನ ಸಾಧ್ಯತೆ
ನವದೆಹಲಿ: ಕರೋನವೈರಸ್ನ ಓಮಿಕ್ರಾನ್ ರೂಪಾಂತರದ ಹರಡುವಿಕೆಯ ಆತಂಕದ ನಡುವೆ, ದೇಶದ ಸಾಂಕ್ರಾಮಿಕ ಪರಿಸ್ಥಿತಿಯನ್ನು ಪರಿಶೀಲಿಸಲು ಪ್ರಧಾನಿ ನರೇಂದ್ರ ಮೋದಿ ಅವರು ಇಂದು ಸಂಜೆ 6.30 ಕ್ಕೆ ಸಭೆ ನಡೆಸಲಿದ್ದಾರೆ.
ಭಾರತದಲ್ಲಿ ಕಳೆದ 24 ಗಂಟೆಗಳಲ್ಲಿ 7,495 ಹೊಸ ಕೋವಿಡ್-19 ಪ್ರಕರಣಗಳು ವರದಿಯಾಗಿವೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ಗುರುವಾರ ತಿಳಿಸಿದೆ.
ಈ ನಡುವೆ ರಾಜ್ಯದಲ್ಲಿ ಮತ್ತೆ Omicron ಸ್ಫೋಟವಾಗಿದ್ದು, ಹೊಸದಾಗಿ 12 ಮಂದಿ ಸೋಂಕಿತರು ಪತ್ತೆಯಾಗಿದ್ದಾರೆ. ಈ ಬಗ್ಗೆ ಆರೋಗ್ಯ ಸಚಿವ ಆರ್.ಸುಧಾಕರ್ ತಮ್ಮ ಟ್ವಿಟರ್ ಪೇಜ್ನಲ್ಲಿ ಅಧಿಕೃತವಾಗಿ ಮಾಹಿತಿ ನೀಡಿದ್ದಾರೆ. ಇದೇ ವೇಳೆ ಸಚಿವರು ಇಂದು ಕರ್ನಾಟಕದಲ್ಲಿ 12 ಹೊಸ ಒಮಿಕ್ರಾನ್ ಪ್ರಕರಣಗಳು ದೃಢಪಟ್ಟಿದ್ದು, ಸೋಂಕಿತರ ಸಂಖ್ಯೆ 31ಕ್ಕೆ ಏರಿಕೆಯಾಗಿದೆ ಅಂತ ತಿಳಿಸಿದ್ದಾರೆ.