ದೂರು ದಾಖಲಿಸದಿರಲು 1 ಲಕ್ಷ ರೂ. ಲಂಚ! ಲೋಕಾಯುಕ್ತ ಬಲೆಗೆ ಬಿದ್ದ ದೇವದುರ್ಗ-ಮಾನ್ವಿ ಠಾಣೆಯ ಇನ್ಸ್​ಪೆಕ್ಟರ್​

ದೂರು ದಾಖಲಿಸದಿರಲು 1 ಲಕ್ಷ ರೂ. ಲಂಚ! ಲೋಕಾಯುಕ್ತ ಬಲೆಗೆ ಬಿದ್ದ ದೇವದುರ್ಗ-ಮಾನ್ವಿ ಠಾಣೆಯ ಇನ್ಸ್​ಪೆಕ್ಟರ್​

ರಾಯಚೂರು: ಬರೋಬ್ಬರಿ 1 ಲಕ್ಷ ರೂಪಾಯಿ ಲಂಚ ಸ್ವೀಕರಿಸುತ್ತಿದ್ದ ಸಂದರ್ಭದಲ್ಲಿ ದೇವದುರ್ಗ ಹಾಗೂ ಮಾನ್ವಿ ಠಾಣೆಯ ಪೊಲೀಸ್​ ಇನ್ಸ್​ಪೆಕ್ಟರ್ ಬಸವರಾಜ ಕಾಕರಗಲ್ ಅವರು ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ.

ಸಿರವಾರದಲ್ಲಿರುವ ವೈನ್ ​ಶಾಪ್ ಮೇಲೆ ಯಾವುದೇ ದೂರು ದಾಖಲಿಸದಿರುವುದಕ್ಕೆ ಎರಡು ಲಕ್ಷ ರೂ.ಗೆ ಇನ್ಸ್​ಪೆಕ್ಟರ್​ ಬಸವರಾಜ ಅವರು ಬೇಡಿಕೆ ಇಟ್ಟಿದ್ದರು.

ವೈನ್ ಶಾಪ್ ಮಾಲೀಕ ಹನುಮಂತನಿಂದ ಒಂದು‌ ಲಕ್ಷ ರೂ. ಲಂಚ ತೆಗೆದುಕೊಳ್ಳುವಾಗ ಲೋಕಾಯುಕ್ತ ಪೊಲೀಸರು ದಾಳಿ ಮಾಡಿದ್ದು, ರೆಡ್​ಹ್ಯಾಂಡ್​ ಆಗಿ ಬಸವರಾಜ ಸಿಕ್ಕಿಬಿದ್ದಿದ್ದಾರೆ.

ನಿನ್ನೆ (ಫೆ.1) ಸಂಜೆ ‌ಮಲ್ಲಟ ಬಳಿ ಲಂಚ ಪಡೆಯುವ ವೇಳೆ ಬಲೆಗೆ ಬಿದ್ದಿದ್ದಾರೆ. ಲೋಕಾಯುಕ್ತ ಇನ್ಸ್​ಪೆಕ್ಟರ್ ನಾಗರಾಜ ಮೇಕಾ ನೇತೃತ್ವದಲ್ಲಿ ದಾಳಿ ನಡೆದಿದೆ. ಸದ್ಯ ಇನ್ಸ್​ಪೆಕ್ಟರ್​ ಬಸವರಾಜನನ್ನು ವಶಕ್ಕೆ ಪಡೆದಿರುವ ಲೋಕಾಯುಕ್ತ ಅಧಿಕಾರಿಗಳು ಹೆಚ್ಚಿ ವಿಚಾರಣೆಗೆ ಒಳಪಡಿಸಿದ್ದಾರೆ.