ದಿನಗೂಲಿ ಕಾರ್ಮಿಕನಿಗೆ 14 ಕೋಟಿ ರೂ. ತೆರಿಗೆ ಪಾವತಿಸುವಂತೆ ನೋಟಿಸ್!

ದಿನಗೂಲಿ ಕಾರ್ಮಿಕನಿಗೆ 14 ಕೋಟಿ ರೂ. ತೆರಿಗೆ ಪಾವತಿಸುವಂತೆ ನೋಟಿಸ್!

ಆದಾಯ ತೆರಿಗೆ ಇಲಾಖೆಯು ಬಿಹಾರದ ರೋಹ್ತಾಸ್ ಜಿಲ್ಲೆಯ ದಿನಗೂಲಿ ಕಾರ್ಮಿಕ ಮನೋಜ್ ಯಾದವ್ ಗೆ ಬರೋಬ್ಬರಿ 14 ಕೋಟಿ ರೂ. ತೆರಿಗೆ ಪಾವತಿಸುವಂತೆ ನೋಟಿಸ್ ನೀಡಿದೆ. ಇದನ್ನು ನೋಡಿ ಕೂಲಿ ಕಾರ್ಮಿಕ ಹೌಹಾರಿದ್ದಾನೆ. ಅಧಿಕಾರಿಗಳ ಪ್ರಕಾರ, ಈ ವ್ಯಕ್ತಿಯ ಬ್ಯಾಂಕ್ ದಾಖಲೆಗಳ ಪ್ರಕಾರ ಕೋಟ್ಯಂತರ ರೂಪಾಯಿ ವಹಿವಾಟು ನಡೆದಿದೆ. ತಮ್ಮಲ್ಲಿರುವ ಸಂಪೂರ್ಣ ಆಸ್ತಿಯನ್ನು ಮಾರಾಟ ಮಾಡಿದರೂ, ಲಕ್ಷ ಮುಟ್ಟಲ್ಲ ಎಂದು ಯಾದವ್ ಕುಟುಂಬ ಅಧಿಕಾರಿಗಳಿಗೆ ತಿಳಿಸಿದೆ.