ತಮಿಳುನಾಡು: ಮಹಿಳೆಗೆ ಹಿಜಾಬ್ ತೆಗೆಯುವಂತೆ ಒತ್ತಾಯಿಸಿದ 6 ಮಂದಿ ಅರೆಸ್ಟ್
ವೆಲ್ಲೂರು: ಈ ವಾರದ ಆರಂಭದಲ್ಲಿ ಇಲ್ಲಿನ ಐತಿಹಾಸಿಕ ವೆಲ್ಲೂರು ಕೋಟೆಗೆ ಭೇಟಿ ನೀಡುತ್ತಿದ್ದ ವೇಳೆ ಮಹಿಳೆಯೊಬ್ಬರಿಗೆ ಹಿಜಾಬ್ ತೆಗೆಯುವಂತೆ ಒತ್ತಾಯಿಸಿ, ಅದನ್ನು ಚಿತ್ರೀಕರಿಸಿದ ಆರು ಮಂದಿಯನ್ನು ಉತ್ತರ ಪೊಲೀಸರು ಗುರುವಾರ ಬಂಧಿಸಿದ್ದಾರೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಮಹಿಳೆಯನ್ನು ಹಿಜಾಬ್ ತೆಗೆಯುವಂತೆ ಒತ್ತಾಯಿಸಿದ ಗ್ಯಾಂಗ್ನಲ್ಲಿ 17 ವರ್ಷದ ಯುವಕನೂ ಸೇರಿದ್ದು, ಅವನನ್ನು ಮನೆಗೆ ಕಳುಹಿಸಲಾಗಿದೆ. ಪೊಲೀಸರು ಇತರರನ್ನು ಬಂಧಿಸಿ ರಿಮಾಂಡ್ಗೆ ಒಳಪಡಿಸಿದರು. ಇಮ್ರಾನ್ ಬಾಷಾ (22), ಅಶ್ರಫ್ ಬಾಷಾ (20), ಮೊಹಮ್ಮದ್ ಫೈಜಲ್ (23), ಸಂತೋಷ್(23), ಇಬ್ರಾಹಿಂ ಬಾಷಾ(24), ಮತ್ತು ಪ್ರಶಾಂತ್ (20) ಆರೋಪಿಗಳಾಗಿದ್ದಾರೆ.
'ಯುವಕರು ಹೆಚ್ಚಾಗಿ ಆಟೋರಿಕ್ಷಾ ಚಾಲಕರಾಗಿದ್ದು, ಅವರು ಕೋಟೆಗೆ ಭೇಟಿ ನೀಡುತ್ತಿದ್ದ ಮೂವರು ಹಿಜಾಬ್ ಧರಿಸಿದ ಮಹಿಳೆಯರನ್ನು ಗುರಿಯಾಗಿಸಿಕೊಂಡಿದ್ದಾರೆ' ಎಂದು ಅಧಿಕಾರಿ ಹೇಳಿದರು.
ಹೆಚ್ಚಿನ ವಿವರಗಳನ್ನು ಬಹಿರಂಗಪಡಿಸಲು ನಿರಾಕರಿಸಿದ ವೆಲ್ಲೂರು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎಸ್ ರಾಜೇಶ್ ಕಣ್ಣನ್, ಮಾರ್ಚ್ 27 ರಂದು ನಡೆದ ಅಪರಾಧದ ಹಿಂದಿನ ಉದ್ದೇಶವನ್ನು ತನಿಖೆ ಮಾಡಲಾಗುತ್ತಿದೆ ಎಂದು ಹೇಳಿದರು. ಸಾರ್ವಜನಿಕರು ಸಾಮಾಜಿಕ ಜಾಲತಾಣಗಳಲ್ಲಿ ಹಾಕಿರುವ ವಿಡಿಯೋಗಳನ್ನು ಶೇರ್ ಮಾಡದಂತೆ ವಿನಂತಿಸಲಾಗಿದೆ ಎಂದರು.
ವೈರಲ್ ಆಗಿರುವ ವೀಡಿಯೊದಲ್ಲಿ, ದುಷ್ಕರ್ಮಿಗಳು ಮಹಿಳೆಯ ಸ್ನೇಹಿತನನ್ನು ಹಿಜಾಬ್ ಧರಿಸಿದ ಮಹಿಳೆಯನ್ನು ವಿಹಾರಕ್ಕೆ ಕರೆದೊಯ್ಯುವುದು ನ್ಯಾಯವೇ ಎಂದು ಕೇಳುತ್ತಿದ್ದಾರೆ