ಪ್ರಧಾನಿ ಮೋದಿ ಭಾರತೀಯ ಸಂಸ್ಕೃತಿ, ನಂಬಿಕೆಯ ಪ್ರತೀಕಗಳಿಗೆ ಕೀರ್ತಿ ತಂದಿದ್ದಾರೆ: ಅಮಿತ್ ಶಾ

ಪ್ರಧಾನಿ ಮೋದಿ ಭಾರತೀಯ ಸಂಸ್ಕೃತಿ, ನಂಬಿಕೆಯ ಪ್ರತೀಕಗಳಿಗೆ ಕೀರ್ತಿ ತಂದಿದ್ದಾರೆ: ಅಮಿತ್ ಶಾ

ರಿದ್ವಾರ (ಉತ್ತರಾಖಂಡ): ಜಾಗತಿಕ ವೇದಿಕೆಯಲ್ಲಿ ಭಾರತದ ಎತ್ತರದ ಸ್ಥಾನಮಾನವನ್ನು ಎತ್ತಿ ತೋರಿಸಿರುವ ಕೇಂದ್ರ ಗೃಹ ಸಚಿವ ಅಮಿತ್ ಶಾ, ಪ್ರಧಾನಿ ನರೇಂದ್ರ ಮೋದಿ ಅವರು ಭಾರತೀಯ ಸಂಸ್ಕೃತಿ ಮತ್ತು ನಂಬಿಕೆಯ ಸಂಕೇತಗಳಿಗೆ ವೈಭವವನ್ನು ತಂದಿದ್ದಾರೆ ಎಂದು ಗುರುವಾರ ಹೇಳಿದ್ದಾರೆ.

ಉತ್ತರಾಖಂಡದ ಹರಿದ್ವಾರದಲ್ಲಿ ಗುರುವಾರ ನಡೆದ ಪತಂಜಲಿ ವಿಶ್ವವಿದ್ಯಾನಿಲಯದ ಉದ್ಘಾಟನಾ ಸಮಾರಂಭ ಮತ್ತು ಸನ್ಯಾಸ್ ದೀಕ್ಷಾ ಮಹೋತ್ಸವದಲ್ಲಿ ಶಾ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದರು.

ಈ ಸಂದರ್ಭದಲ್ಲಿ ಉತ್ತರಾಖಂಡ ಮುಖ್ಯಮಂತ್ರಿ ಪುಷ್ಕರ್ ಸಿಂಗ್ ಧಾಮಿ ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು. ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಶಾ, 'ಪ್ರಧಾನಿ ನರೇಂದ್ರ ಮೋದಿ ಕಳೆದ ಒಂಬತ್ತು ವರ್ಷಗಳಿಂದ ಭಾರತ, ಭಾರತೀಯರು ಮತ್ತು ಭಾರತದ ಜ್ಞಾನವನ್ನು ವಿಶ್ವದಾದ್ಯಂತ ಗೌರವಿಸುವ ಕೆಲಸವನ್ನು ಮಾಡಿದ್ದಾರೆ' ಎಂದು ಹೇಳಿದರು.

2014ರ ಡಿಸೆಂಬರ್ 27ರಂದು ಅಂತಾರಾಷ್ಟ್ರೀಯ ಯೋಗ ದಿನವನ್ನು ಆಚರಿಸಲು ವಿಶ್ವಸಂಸ್ಥೆಗೆ ಪ್ರಧಾನಿ ಮೋದಿ ಪ್ರಸ್ತಾವನೆ ಸಲ್ಲಿಸಿದ್ದರು ಎಂದ ಅವರು, 'ಮನುಷ್ಯನ ದೇಹವನ್ನು ಔಷಧವಿಲ್ಲದೆ ಆರೋಗ್ಯವಾಗಿಡಬಲ್ಲಂತಹ ಜ್ಞಾನವನ್ನು ನಮ್ಮ ಪೂರ್ವಜರು ಪಡೆದುಕೊಂಡಿದ್ದರು' ಎಂದರು.