ರಾಜಸ್ಥಾನದಲ್ಲಿ ರಾಮನವಮಿಯಂದೇ ಘೋರ ದುರಂತ; ಮೆರವಣಿಗೆ ವೇಳೆ ವಿದ್ಯುತ್ ತಂತಿ ಸ್ಪರ್ಶಿಸಿ ಮೂವರು ಸಾವು

ರಾಜಸ್ಥಾನದಲ್ಲಿ ರಾಮನವಮಿಯಂದೇ ಘೋರ ದುರಂತ; ಮೆರವಣಿಗೆ ವೇಳೆ ವಿದ್ಯುತ್ ತಂತಿ ಸ್ಪರ್ಶಿಸಿ ಮೂವರು ಸಾವು

ಕೋಟಾ(ರಾಜಸ್ಥಾನ): ರಾಮನವಮಿ ಮೆರವಣಿಗೆ ವೇಳೆ ವಿದ್ಯುತ್ ತಂತಿ ಸ್ಪರ್ಶಿಸಿ ಮೂವರು ಭಕ್ತರು ಸಾವನ್ನಪ್ಪಿರುವ ಆಘಾತಕಾರಿ ಘಟನೆ ರಾಜಸ್ಥಾನದ ಕೋಟಾ ಜಿಲ್ಲೆಯಲ್ಲಿ ವರದಿಯಾಗಿದೆ.

ಘಟನೆಯಲ್ಲಿ ಹಲವು ಜನರು ತೀವ್ರ ಸುಟ್ಟ ಗಾಯಗಳಿಂದ ಬಳಲುತ್ತಿದ್ದಾರೆ.

ಇನ್ನು ಕೆಲವರು ತೀವ್ರವಾಗಿ ಗಾಯಗೊಂಡವರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.

ಕೋಟಾದ ಸುಲ್ತಾನ್‌ಪುರ ಪೊಲೀಸ್ ಠಾಣೆ ವ್ಯಾಪ್ತಿಯ ಕೊಟ್ರಾ ದೀಪ್‌ಸಿಂಗ್ ಗ್ರಾಮದಲ್ಲಿ ಈ ಘಟನೆ ನಡೆದಿದೆ. ಗುರುವಾರ ರಾಮನವಮಿ ಮೆರವಣಿಗೆ ಹೊರಡುವಾಗ ಮೂವರು ವ್ಯಕ್ತಿಗಳು ವಿದ್ಯುತ್ ತಂತಿ ಸ್ಪರ್ಶಿಸಿದ್ದಾರೆ. ಮೃತರನ್ನು ಲಲಿತ್, ಅಭಿಷೇಕ್ ಮತ್ತು ಮಹೇಂದ್ರ ಎಂದು ಗುರುತಿಸಲಾಗಿದೆ.

ಇಡೀ ಘಟನೆ ಕ್ಯಾಮರಾದಲ್ಲಿ ಸೆರೆಯಾಗಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಘಟನೆಯ ನಂತರ ಎಲ್ಲಾ ಗಾಯಾಳುಗಳನ್ನು ಸುಲ್ತಾನ್‌ಪುರ ಆಸ್ಪತ್ರೆಗೆ ರವಾನಿಸಲಾಗಿದೆ.