ಡಿ. 14 ರಂದು ಸಂಪುಟ ವಿಸ್ತರಣೆ; ಕ್ಯಾಬಿನೆಟ್ ಗೆ ಯುವನಾಯಕ ಉದಯನಿಧಿ ಸೇರ್ಪಡೆ

ಡಿ. 14 ರಂದು ಸಂಪುಟ ವಿಸ್ತರಣೆ; ಕ್ಯಾಬಿನೆಟ್ ಗೆ ಯುವನಾಯಕ ಉದಯನಿಧಿ ಸೇರ್ಪಡೆ

ಚೆನ್ನೈ: ಡಿಎಂಕೆ ಯುವ ಘಟಕದ ಕಾರ್ಯದರ್ಶಿ & ತಮಿಳುನಾಡು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಅವರ ಪುತ್ರ ಉದಯನಿಧಿ ಸ್ಟಾಲಿನ್ ಸಂಪುಟಕ್ಕೆ ಸೇರಲಿದ್ದಾರೆ. ಮೂಲಗಳ ಪ್ರಕಾರ, ಡಿ.14 ರಂದು ನಡೆಯಲಿರುವ ಸಿಎಂ ಸ್ಟಾಲಿನ್ ಅವರ ಸಂಪುಟ ಪುನಾರಚನೆಯಲ್ಲಿ ಉದಯನಿಧಿ ಅವರಿಗೆ ಕ್ರೀಡೆ & ಯುವ ಕಲ್ಯಾಣ ಖಾತೆಯನ್ನು ನೀಡಲಾಗುವುದು ಎನ್ನಲಾಗಿದೆ. ಈ ಹಿಂದೆ ತಮ್ಮ ತಂದೆಯ ಸಂಪುಟದಲ್ಲಿ ಸಚಿವ ಸ್ಥಾನ ಪಡೆಯುವ ಕುರಿತಾದ ವದಂತಿಗಳ ಬಗ್ಗೆ ಉದಯನಿಧಿ ಸ್ಟಾಲಿನ್ ಪ್ರತಿಕ್ರಿಯೆ ನಿರಾಕರಿಸಿದ್ದರು.