ಡಾಲಿ ಧನಂಜಯ್ 'ಜಮಾಲಿಗುಡ್ಡ' ಎರಡು ಭಾಷೆಗಳಲ್ಲಿ ಬಿಡುಗಡೆ
ಡಾಲಿ ಧನಂಜಯ್ ಅಭಿನಯದ "ಒನ್ಸ್ ಆಪಾನ್ ಏ ಟೈಮ್ ಇನ್ ಜಮಾಲಿಗುಡ್ಡ" ಚಿತ್ರ ಬಿಡುಗಡೆಗೆ ಸಜ್ಜಾಗಿದೆ. ಟೀಸರ್ನಿಂದ್ ಎಲ್ಲರ ಗಮನ ಸೆಳೆದಿರುವ ಜಮಾಲಿಗುಡ್ಡ ಇದೇ ಡಿಸೆಂಬರ್ 30ರಂದು ತೆರೆಕಾಣಲಿದ್ದು, ಕನ್ನಡ ಮತ್ತು ತೆಲುಗು ಭಾಷೆಗಳಲ್ಲಿ ರಿಲೀಸ್ ಆಗುತ್ತಿದೆ. ತೆಲುಗಿನಲ್ಲಿ "ಒನ್ಸ್ ಆಪಾನ್ ಏ ಟೈಮ್ ಇನ್ ದೇವರಕೊಂಡ" ಹೆಸರಿನಲ್ಲಿ ಬಿಡುಗಡೆ ಆಗುತ್ತಿದೆ. ಪುಷ್ಪ ಚಿತ್ರದ ಮೂಲಕ ಧನಂಜಯ್ ತೆಲುಗಿನಲ್ಲೂ ಅಭಿಮಾನಿಗಳನ್ನು ಹೊಂದಿದ್ದು, ಹೀಗಾಗಿ ತೆಲುಗಿನಲ್ಲೂ ಬಿಡುಗಡೆ ಮಾಡಲಾಗುತ್ತಿದೆ.